ಕ್ರೀಡೆ

ಸೋತರೂ ನಿಲ್ಲಲಿಲ್ಲ ಜಾಕ್ ಹುಚ್ಚಾಟ

Published On :

ಜರ್ಮನಿ ತಂಡ ಬರ್ಲಿನ್ನಲ್ಲಿ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಮುಳುಗಿದ್ದರೆ, ಇತ್ತ ಇಂಗ್ಲೆಂಡ್ ಫುಟ್ಬಾಲ್ ಅಭಿಮಾನಿಗಳಿಗೆ ನೋವಿನ ಸಂಗತಿಯೊಂದು ಕಾಣಿಸಿಕೊಂಡಿದೆ. ಜಾಕ್ ವಿಲ್ಷೇರ್ ಇಂಗ್ಲೆಂಡ್ ಪ್ರತಿಭಾನ್ವಿತ ಫುಟ್ಬಾಲ್ ತಾರೆ. ಕೇವಲ 9 ತಿಂಗಳ ಹಿಂದಷ್ಟೇ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದ ಈ ಆಟಗಾರ, ನಾನು ಧೂಮಪಾನ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದ ಅರ್ಸೆನಲ್ ಫುಟ್ಬಾಲ್ ಕ್ಲಬ್ ಪ್ರತಿನಿಧಿಸಿರುವ ಈ ಆಟಗಾರ ಮತ್ತೆ ಹಳೇ ಚಾಳಿಯನ್ನು ಮುಂದುವರಿಸಿರುವುದು ಇಂಗ್ಲೆಂಡ್ ಫುಟ್ಬಾಲ್ ಅಭಿಮಾನಿಗಳಲ್ಲಿ ಬೇಸರ ಉಂಟುಮಾಡಿದೆ.
ಅತಿ ಹೆಚ್ಚು ಫುಟ್ಬಾಲ್ ಪ್ರೀತಿಯನ್ನು ಹೊಂದಿರುವ ಇಂಗ್ಲೆಂಡ್ನಲ್ಲಿ ಫುಟ್ಬಾಲ್ ಆಟಗಾರರೇ ಮಾದರಿ ವ್ಯಕ್ತಿಗಳಾಗಿದ್ದಾರೆ. ಹೀಗಾಗಿ, ಜಾಕ್ ಅವರು ಸಿಗರೇಟ್ ಸೇದುತ್ತಿರುವ ಮತ್ತು ಮದ್ಯಪಾನ್ ಮಾಡುತ್ತಿರುವ ದೃಶ್ಯಗಳು ಇಂಗ್ಲೆಂಡ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿವೆ.
ಜಾಕ್ ಅವರೊಂದಿಗೆ ಇಂಗ್ಲೆಂಡ್ ತಂಡದ ಇನ್ನೊಬ್ಬ ಪ್ರತಿಭಾನ್ವಿತ ಆಟಗಾರ ಜೋ ಹರ್ಟ್ ಸಹ ಧೂಮಪಾನ ಮತ್ತು ಮದ್ಯಪಾನ ಮಾಡಿರುವುದು ಬಹಿರಂಗವಾಗಿದೆ. ಈ ಇಬ್ಬರೂ ಆಟಗಾರರು ಇಂಗ್ಲೆಂಡ್ ಫುಟ್ಬಾಲ್ ತಂಡದ ಭವಿಷ್ಯದ ಪ್ರತಿಭೆಗಳು ಎಂದೇ ಗುರುತಿಸಲಾಗಿದೆ.
ಈ ಹಿಂದೆ, ಕಳೆದ ಅಕ್ಟೋಬರ್ನಲ್ಲಿ ವಿಲ್ಷೇರ್ ಧೂಮಪಾನದ ಪ್ರಕರಣ ಬಯಲಾದಾಗ, ಜಾಕ್ ಪ್ರತಿನಿಧಿಗಳು ಇದೊಂದು ದೊಡ್ಡ ಜೋಕ್ ಎಂದು ನಕ್ಕಿದ್ದರು. ಆದರೆ, ನಂತರ ಆಟಗಾರ ತಾನು ಮಾಡಿದ ತಪ್ಪೊಂದನ್ನು ಒಪ್ಪಿಕೊಂಡಿದ್ದ. ಆದರೆ, ಈಗ ಜಾಕ್ ಪ್ರತಿನಿಧಿಗಳಾಗಲಿ ಅರೆಸನಲ್ ಫುಟ್ಬಾಲ್ ಕ್ಲಬ್ ಪ್ರತಿನಿಧಿಗಳಾಗಲಿ ಘಟನೆ ಕುರಿತು ಮಾತನಾಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.