ರಿಂಗ್ ಸಮೀಪ ಭಾರತೀಯ ಕೋಚ್ಗೆ ನಿಷೇಧ
ನವದೆಹಲಿ: ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ, ಭಾರತೀಯ ಬಾಕ್ಸಿಂಗ್ ಸಂಸ್ಥೆಯನ್ನು ಅಮಾನತು ಮಾಡಿರುವ ಹಿನ್ನೆಲೆಯಲ್ಲಿ, ಕಾಮನ್ವೆಲ್ತ್ ಕ್ರೀಡಾಕೂಟದ ಪಂದ್ಯದ ವೇಳೆ ಭಾರತೀಯ ಬಾಕ್ಸಿಂಗ್ ಕೋಚ್ಗಳು ರಿಂಗ್ನ ಸಮೀಪದಲ್ಲಿ ಇರಲು ಅವಕಾಶ ನಿರಾಕರಿಸಿದೆ.
ಈ ಕುರಿತ ಮಾಹಿತಿ ಮಂಗಳವಾರವಷ್ಟೇಭಾರತೀಯ ಒಲಿಂಪಿಕ್ಸ್ ಸಮಿತಿಗೆ ಪಂದ್ಯಾವಳಿ ಆಯೋಜಕರು ನೀಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಪಂದ್ಯಾವಳಿಯ ಆಯೋಜಕರು ಪ್ರಸ್ತುತ ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಬಾಕ್ಸರ್ಗಳ ಹಿತದೃಷ್ಠಿಯಿಂದ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ.
ಭಾರತದ ಮೂವರು ಮಹಿಳಾ ಬಾಕ್ಸರ್ಗಳು ಜು.20ರಂದು ಪ್ರಯಾಣ ಬೆಳೆಸಲಿದ್ದು, ಬಾಕ್ಸಿಂಗ್ ಸ್ಪರ್ಧೆ ಜು.25ರಿಂದ ಆರಂಭವಾಗಲಿದೆ. ಎಂದು ಮೂಲಗಳು ತಿಳಿಸಿದ್ದಾರೆ.
ಕಳೆದ ಮೇನಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಅಧ್ಯಕ್ಷ ಡಾ.ಚಿಂಗ್ ಕು ವು ಹಾಗೂ ಭಾರತೀಯ ಬಾಕ್ಸಿಂಗ್ ಸಂಸ್ಥೆ ಅಧ್ಯಕ್ಷ ಎನ್. ರಾಮಚಂದ್ರನ್ ಅವರೊಂದಿಗೆ ಸಭೆ ನಡೆಸಿದ್ದು, ಭಾರತೀಯ ಬಾಕ್ಸಿಂಗ್ ಕುರಿತ ಸಮಸ್ಯೆಯ ಬಗ್ಗೆ ಚರ್ಚಿಸಲಾಗಿತ್ತು. ಎಐಬಿಎ ತಮ್ಮ ಸದಸ್ಯರ ಆಯ್ಕೆಗೆ ಐಒಎಯಿಂದ ಸಂಪೂರ್ಣ ಬೆಂಬಲ ಪಡೆದಿತ್ತು.
ನಂತರ ಒಪ್ಪಂದದಿಂದ ಭಾರತೀಯ ಬಾಕ್ಸಿಂಗ್ ಅನ್ನು ಹೊಸ ರಾಷ್ಟ್ರೀಯ ಫೆಡರೇಷನ್ ಆಗಿ ಪರಿಗಣಿಸಲು ಒಪ್ಪಿಗೆ ಸೂಚಿಸಿತ್ತು. ಆದರೆ ಭಾರತದ ಅಧಿಕಾರಿಗಳು, ಮ್ಯಾನೇಜರ್ಗಳು, ಅಥವಾ ರಿಂಗ್ ಜಡ್ಜ್ಗಳು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ.
ಈ ಪರಿಸ್ಥಿತಿಯನ್ನು ಆಯೋಜಕರು ಕೋಚ್ಗಳು ಸಹ ಭಾಗವಹಿಸುವಂತಿಲ್ಲ ಎಂದು ತಪ್ಪು ಗ್ರಹಿಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಅಥ್ಲೀಟ್ಗಳ ಹೀನಾಯ ಪರಿಸ್ಥಿತಿ: ಕೆಲವೇ ದಿನಗಳಲ್ಲಿ ಗ್ಲಾಸ್ಗೋದಲ್ಲಿ ಆರಂಭವಾಗಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ತೆರಳುತ್ತಿರುವ ಭಾರತೀಯ ಅಥ್ಲೀಟ್ಗಳ ಹಾಗೂ ತರಬೇತುದಾರರಿಗೆ ಪಟಿಯಾಲದಲ್ಲಿರುವ ಪರಿಸ್ಥಿತಿ ತೀರಾ ಶೋಚನಿಯವಾಗಿದ್ದು, ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುವಿಗೆ ಸಿಗಬೇಕಾದ ಸೌಲಭ್ಯಗಳು ದೊರೆಯದೆ ಪರದಾಡುವಂತಿದೆ.
ಇನ್ನು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಟೇಬಲ್ ಟೆನಿಸ್ ಆಟಗಾರ ಎ ಶರತ್ ಕಮಲ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿನ ಸೌಲಭ್ಯಗಳು ಆರೋಗ್ಯಕ್ಕೆ ಯೋಗ್ಯಕರವಾಗಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

