ಹರಿಣಗಳ ನೆರವಿಗೆ ಎಲ್ಗರ್
ಗಾಲೆ: ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ (103) ಹಾಗೂ ಫಫ್ ಡುಪ್ಲೆಸಿಸ್ (80) ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಶ್ರೀಲಂಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಹೋರಾಟ ನಡೆಸಿದೆ. ಹಾಗಾಗಿ ಮೊದಲ ದಿನದಾಟದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿವೆ.
ಬುಧವಾರ ಇಲ್ಲಿನ ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾದ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಂತರ ದಿನದಾಟ ಮುಕ್ತಾಯಕ್ಕೆ 91 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 268 ರನ್ ದಾಖಲಿಸಿತು.
ಏಕದಿನ ಸರಣಿಯನ್ನು ಗೆದ್ದು ಬೀಗಿದ್ದ ದಕ್ಷಿಣ ಆಫ್ರಿಕಾ ಆತ್ಮ ವಿಶ್ವಾಸದಿಂದಲೇ ದಿನದಾಟವನ್ನು ಆರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದ ಆಲ್ವಿರೊ ಪೀಟರ್ಸನ್ (34) ಹಾಗೂ ಡೀನ್ ಎಲ್ಗರ್ (103) ಮೊದಲ ವಿಕೆಟ್ಗೆ 70 ರನ್ ದಾಖಲಿಸುವ ಮೂಲಕ ಉತ್ತಮ ಆರಂಭವನ್ನೇ ನೀಡಿದರು. ಈ ವೇಳೆ ಆಲ್ವಿರೊ, ಪೆರೇರಾ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
ನಂತರ ಎರಡನೇ ವಿಕೆಟ್ಗೆ ಎಲ್ಗರ್ ಜತೆಗೂಡಿದ ಫಫ್ ಡುಪ್ಲೆಸಿಸ್ (80) 125 ರನ್ಗಳ ಅದ್ಭುತ ಜತೆಯಾಟ ನೀಡಿದರು. ಈ ಮೂಲಕ ದಕ್ಷಿಣ ಆಫ್ರಿಕಾ 195 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಅತ್ಯುತ್ತಮ ಸ್ಥಿತಿಯಲ್ಲಿತ್ತು.
ಎಲ್ಗರ್ ವಿಕೆಟ್ ಕಳೆದುಕೊಂಡಿದ್ದು, ಹರಿಣಗಳ ದಿಢೀರ್ ಕುಸಿತಕ್ಕೆ ನಾಂದಿಯಾಯಿತು. ನಂತರ ಬಂದ ಆಮ್ಲಾ (11), ಡಿವಿಲಿಯರ್ಸ್ (21), ಹಾಗೂ ಡುಪ್ಲೆಸಿಸ್ ಸತತವಾಗಿ ವಿಕೆಟ್ ಒಪ್ಪಿಸಿದ್ದು, ತಂಡ ಸಾಧಿಸಿದ್ದ ನಿಯಂತ್ರಣ ಕಳೆದುಕೊಳ್ಳುವಂತಾಯಿತು. ನಂತರ ಕ್ರೀಸ್ಗೆ ಆಗಮಿಸಿದ ಖಿಂಟಾನ್ ಡಿ ಕಾಕ್ (17) ಹಾಗೂ ನೈಟ್ವಾಚ್ಮನ್ ಆಗಿ ಬಂದ ಡೇಲ್ ಸ್ಟೇಯ್ನ್ (0) ಅಜೇಯರಾಗಿದ್ದು, ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ.
ಶ್ರೀಲಂಕಾ ತಂಡದ ಪರ ಸುರಾಂಗ ಲಕ್ಮಲ್ ಹಾಗೂ ಪೆರೇರಾ ತಲಾ 2 ಹಾಗೂ ಹೆರಾಥ್ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್
5 ವಿಕೆಟ್ಗೆ 268
(ಮೊದಲ ದಿನದಾಟ ಅಂತ್ಯಕ್ಕೆ)
(ಡೀನ್ ಎಲ್ಗರ್ 103, ಡುಪ್ಲೆಸಿಸ್ 80, ಪೀಟರ್ಸನ್ 34, ಲಕ್ಮಲ್ 29ಕ್ಕೆ2, ಪೆರೇರಾ 100ಕ್ಕೆ2, ಹೆರಾಥ್ 95ಕ್ಕೆ1)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

