ಭಾರತಕ್ಕೊಬ್ಬನೇ ರಹಾನೆ

ಲಂಡನ್: ಲಾರ್ಡ್ಸ್ ವೇಗಿಗಳ ಸ್ವರ್ಗ. ವಿಶ್ವದ ಖ್ಯಾತ ಬ್ಯಾಟ್ಸ್ಮನ್ಗಳೂ ಅಲ್ಲಿ ಆಂಗ್ಲ ಬೌಲರ್ಗಳ ದಾಳಿಗೆ ದಿಕ್ಕು ಕಾಣದೇ ಪರಿತಪಿಸುತ್ತಾರೆ. ಹೀಗಾಗಿ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದ್ದರು.
ಆದರೆ, ಅದೇ ಪಿಚ್ನಲ್ಲಿ ಶತಕ ಸಿಡಿಸುವಲ್ಲಿ ಯಶಸ್ವಿಯಾದ ಅಜಿಂಕ್ಯ ರಹಾನೆ (103) ಅದೇ ಆಂಗ್ಲ ಬೌಲರ್ಗಳ ಬೆವರಿಳಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ವೇಗಿಗಳ ಸ್ವರ್ಗದಲ್ಲೂ ನನ್ನ ಬ್ಯಾಟ್ ಸಿಳ್ಳೆ ಹೊಡೆಯುತ್ತದೆ ಎಂಬುದನ್ನು ರಹಾನೆ ಆಂಗ್ಲ ಬೌಲರ್ಗಳಿಗೆ ಸಾರಿ ಹೇಳಿದರು.
ಇದು, ಕೇವಲ 123 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದ ಭಾರತ ತಂಡಕ್ಕೆ ಜೀವ ನೀಡಿದ್ದು ರಹಾನೆ ಎನ್ನುವಂತಾಯಿತು. ಒಂದು ಹಂತದಲ್ಲಿ ಮೊದಲ ಇನಿಂಗ್ಸ್ನಲ್ಲಿ ಭಾರತ ಕೇವಲ 200 ರನ್ ಗಳಿಸುವುದಿಲ್ಲ ಎಂಬ ಸ್ಥಿತಿ ಎದುರಾಗಿತ್ತು. 154 ಎಸೆತಗಳನ್ನು ಎದುರಿಸಿದ ರಹಾನೆ ಶತಕದಲ್ಲಿ 1 ಸಿಕ್ಸರ್ ಮತ್ತು 15 ಬೌಂಡರಿಗಳು ಸೇರಿದ್ದವು. ಆದರೆ, 87ನೇ ಓವರ್ನ 4ನೇ ಜೇಮ್ಸ್ ಆ್ಯಂಡರ್ಸನ್ ಎಸೆದ ಎಸೆದಲ್ಲಿ ಅವರಿಗೆ ಕ್ಯಾಚ್ ನೀಡುವ ಮೂಲಕ ಲಾರ್ಡ್ಸ್ನಲ್ಲಿ ರಹಾನೆ ಪಾರಮ್ಯ ಅಂತ್ಯಗೊಂಡಿತು.
ಇದರೊಂದಿಗೆ ಗುರುವಾರ ಆರಂಭವಾದ ಮೊದಲ ಟೆಸ್ಟ್ನ ಮೊದಲ ದಿನಾಂತ್ಯಕ್ಕೆ, ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಭಾರತ 9 ವಿಕೆಟ್ ಕಳೆದುಕೊಂಡು 290 ರನ್ ಗಳಿಸಿದೆ.
ರಹಾನೆ ಅವರಿಗೆ ತಕ್ಕ ಸಾಥ್ ನೀಡಿದ್ದು, ಭುವನೇಶ್ವರ ಕುಮಾರ್ (36), ಇಬ್ಬರ ಜತೆಯಾಟದಲ್ಲಿ 8ನೇ ವಿಕೆಟ್ಗೆ 90 ರನ್ ಗಳಿಸಿದ್ದರು. ಉತ್ತಮವಾಗಿಯೇ ಬ್ಯಾಟ್ ಬೀಸುತ್ತಿದ್ದ ಭವಿ, 87ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಟುವರ್ಟ್ ಬ್ರಾಡ್ ಎಸೆದ ಫುಲ್ ಲೆಂಥ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ದಿನಾಂತ್ಯದಲ್ಲಿ ಮೊಹ್ಮದ್ ಶಮಿ (14) ಮತ್ತು ಇಶಾಂತ್ ಶರ್ಮಾ (12) ಕ್ರೀಸ್ನಲ್ಲಿದ್ದರು. ಇದಕ್ಕೂ ಮುನ್ನ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಮುರಳಿ ವಿಜಯ್ (24), ಶಿಖರ್ ಧವನ್ (7), ಚೇತೇಶ್ವರ ಪೂಜಾರ (28),
ವಿರಾಟ್ ಕೊಹ್ಲಿ (25), ನಾಯಕ ಮಹೇಂದ್ರ ಸಿಂಗ್ ಧೋನಿ (1), ರವೀಂದ್ರ ಜಡೇಜಾ (3), ಸ್ಟುವರ್ಟ್ ಬಿನ್ನಿ (9) ಲಗುಬಗನೆ ಪೆವಿಲಿಯನ್ಗೆ ಹೆಜ್ಜೆ ಹಾಕಿದರು. ಇಂಗ್ಲೆಂಡ್ ಪರ ಆಕರ್ಷಕ ಬೌಲಿಂಗ್ ಮಾಡಿದ ಜೇಮ್ಸ್ ಆ್ಯಂಡರ್ಸನ್ 4 ವಿಕೆಟ್ ಪಡೆದರೆ, ಬ್ರಾಡ್ 2, ಲಿಯಾಮ್ ಪ್ಲುಂಕೆಟ್, ಬೆನ್ ಸ್ಟೋಕ್ ಹಾಗೂ ಮೋಯಿನ್ ಅಲಿ ತಲಾ 1 ವಿಕೆಟ್ ಪಡೆದರು.
ಇಂಗ್ಲೆಡ್ನಲ್ಲ ಆ್ಯಂಡರ್ಸನ್ ಶ್ರೇಷ್ಠ: ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ ಪಡೆದ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ನಲ್ಲಿ 230ರ ಗಡಿ ದಾಟಿ, ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು. ಇದಕ್ಕೂ ಮುನ್ನ್ನ 299 ವಿಕೆಟ್ ಪಡೆದಿದ್ದ ಫ್ರೆಡ್ ಟ್ರೂಮಾನ್ ಅವರ ದಾಖಲೆಯನ್ನ್ನು ಆ್ಯಂಡರ್ಸನ್ ಅಳಿಸಿ ಹಾಕಿದರು.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 9 ವಿಕೆಟ್ಗೆ 290
ಮುರಳಿ ವಿಜಯ್ ಸಿ ಬ್ಯಾಲೆನ್ಸ್ ಬಿ ಆ್ಯಂಡರ್ಸನ್ 24, ಶಿಖರ್ ಧವನ್ ಸಿ ಬ್ಯಾಲೆನ್ಸ್ ಬಿ ಪ್ಲಂಕೆಟ್ 7, ಪೂಜಾರ ಬಿ ಸ್ಟೊಕ್ಸ್ 25, ಕೊಹ್ಲಿ ಸಿ ಪ್ರಯರ್ ಬಿ ಆ್ಯಂಡರ್ಸನ್ 25, ರಹಾನೆ ಬ್ಯಾಟಿಂಗ್ 26, ಧೋನಿ ಸಿ ಪ್ರಯರ್ ಬಿ ಬ್ರಾಡ್ 1, ಜಡೇಜಾ ಎಲ್ಬಿಡಬ್ಲ್ಯೂ ಅಲಿ 3, ಸ್ಟುವರ್ಟ್ ಬಿನ್ನಿ ಎಲ್ಬಿ ಆಂಡರ್ಸನ್ (9), ಭುವನೇಶ್ವರ ಬಿ ಬ್ರಾಡ್ (36), ಅಜಿಂಕ್ಯ ರಹಾನೆ ಸಿ ಮತ್ತು ಬಿ ಆ್ಯಂಡರ್ಸನ್ (103), ಮೊಹ್ಮದ್ ಶಮಿ ಅಜೇಯ 14, ಇಶಾಂತ್ ಶರ್ಮಾ ಅಜೇಯ 12
ಇತರೆ: (ಬೈ 8, ಲೆಗ್ ಬೈ 11, ನೊಬಾಲ್ 1) ಒಟ್ಟು 20
ವಿಕೆಟ್ ಪತನ: 1-11, 2-48, 3-86, 4-113, 5-123, 6-128, 7-145, 8-235, 9-275.
ಬೌಲಿಂಗ್ ವಿವರ: ಆ್ಯಂಡರ್ಸನ್ 22-7-55-4, ಬ್ರಾಡ್ 22-5-79-2, ಪ್ಲಂಕೆಟ್ 15-5-51-1, ಸ್ಟೊಕ್ಸ್ 17-5-40-1, ಅಲಿ 14-2-38-1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


