ಕ್ರೀಡೆ

ಸ್ಟೇಯ್ನ್‌ಗೆ ಲಂಕಾ ಸ್ಟನ್

Published On :

ಗಾಲೆ: ವೇಗಿ ಡೇಲ್ ಸ್ಟೇಯ್ನ್‌ರ ಬೆಂಕಿ ಕಾರುವ ಎಸೆತಗಳಿಗೆ ತತ್ತರಿಸಿದ ಶ್ರೀಲಂಕನ್ನರು ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಭಾರಿ ಹಿನ್ನಡೆಯ ಭೀತಿಗೆ ಸಿಲುಕಿದ್ದಾರೆ.
ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 455 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಉತ್ತರವಾಗಿ ಶ್ರೀಲಂಕಾ ಶುಕ್ರವಾರ ಮೂರನೇ ದಿನದಾಟ ನಿಂತಾಗ 9 ವಿಕೆಟ್ ನಷ್ಟಕ್ಕೆ 283 ರನ್‌ಗಳಿಸಿ ಎದುರಾಳಿ ತಂಡದ ಗುರಿಯತ್ತ
ಸಾಗಲು ಹೋರಾಟ ನಡೆಸಿತ್ತು. ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಇನ್ನೂ 172ರನ್‌ಗಳಿಸಬೇಕಿದ್ದು, ಕೇವಲ 1 ವಿಕೆಟ್ ಉಳಿದಿರುವುದರಿಂದ ಸದ್ಯಕ್ಕೆ ಇದು ಕಷ್ಟದ ಕೆಲಸವಾಗಿದೆ.
ಎರಡನೇ ದಿನದ ಮೊತ್ತ ವಿಕೆಟ್ ನಷ್ಟವಿಲ್ಲದೆ 30 ರನ್‌ಗಳೊಂದಿಗೆ ಇಂದಿನ ಆಟ ಮುಂದುವರಿಸಿದ ಶ್ರೀಲಂಕಾ ತಂಡ ಡೇಲ್ ಸ್ಟೇಯ್ನ್‌ರ ವೇಗದ ಎಸೆತಗಳನ್ನು ಸಮರ್ಥವಾಗಿ ಎದುರಿಸಲಾಗದೇ ಸಂಕಷ್ಟಕ್ಕೆ ಸಿಲುಕಿತು.
ಆದರೆ, ಆರಂಭಿಕ ಉಪುಲ್ ತರಂಗ (83ರನ್, 155 ಎಸೆತ, 14 ಬೌಂಡರಿ, 1 ಸಿಕ್ಸರ್) ಹಾಗೂ ಆರನೇ ಕ್ರಮಾಂಕದಲ್ಲಿ ಬಂದ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ (89ರನ್, 182 ಎಸೆತ, 14 ಬೌಂಡರಿ, 1 ಸಿಕ್ಸರ್) ಅಮೋಘ ಕಾಣಿಕೆ ನೀಡುವ ಮೂಲಕ ತಂಡಕ್ಕೆ ಜೀವ ತುಂಬಿದರು. ಆದರೂ ಇತರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ತಂಡ ಆತಂಕಕ್ಕೆ ಗುರಿಯಾಗಬೇಕಾಯಿತು.
ದಕ್ಷಿಣ ಆಫ್ರಿಕಾ ಪರ ಮಿಂಚಿನ ದಾಳಿ ನಡೆಸಿದ ಡೇಲ್ ಸ್ಟೇಯ್ನ್ 5 ವಿಕೆಟ್ ಪಡೆಯುವ ಮೂಲಕ ಎದುರಾಳಿಯ ಬ್ಯಾಟಿಂಗ್ ಬೆನ್ನೆಲುಬು ಮುರಿಯುವಲ್ಲಿ ಸಫಲರಾದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 9 ವಿಕೆಟ್‌ಗೆ 455 ಡಿಕ್ಲೇರ್
ಶ್ರೀಲಂಕಾ ಮೊದಲ ಇನಿಂಗ್ಸ್ 100 ಓವರುಗಳಲ್ಲಿ 9 ವಿಕೆಟ್‌ಗೆ 283 (ಆ್ಯಂಜೆಲೊ ಮ್ಯಾಥ್ಯೂಸ್ 89, ಉಪುಲ್ ತರಂಗ 83, ಲಹಿರು ತಿರಿಮಾನೆ 38, ಕುಮಾರ ಸಂಗಕ್ಕಾರ 24, ಡೇಲ್ ಸ್ಟೇಯ್ನ್ 50ಕ್ಕೆ5, ಮೋರ್ನ್ ಮಾರ್ಕೆಲ್ 45ಕ್ಕೆ2).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.