ಸಂಜು ಹೋರಾಟ ವ್ಯರ್ಥ್ಯ
ಡಾರ್ವಿನ್: ಮಧ್ಯಮ ಕ್ರಮಾಂಕದಲ್ಲಿ ಯುವ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ (81) ಅವರ ಹೋರಾಟಕಾರಿ ಪ್ರದರ್ಶನದ ಹೊರತಾಗಿಯೂ ಭಾರತ ಎ ತಂಡ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಚತುಷ್ಕೋನ ಏಕದಿನ ಸರಣಿಯಲ್ಲಿ ಆತಿಥೇಯರ ವಿರುದ್ಧ ಸೋಲನುಭವಿಸಿದೆ.
ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡ ಭಾರತ ವಿರುದ್ಧ 28 ರನ್ಗಳ ಗೆಲವು ದಾಖಲಿಸಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಎ ತಂಡ, ಆಸ್ಟ್ರೇಲಿಯಾ ತಂಡವನ್ನು 50 ಓವರ್ಗಳಲ್ಲಿ 7 ವಿಕೆಟ್ ಪಡೆದು 252 ರನ್ಗಳಿಗೆ ನಿಯಂತ್ರಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಭಾರತ, 46.2 ಓವರ್ಗಳಲ್ಲಿ 224 ರನ್ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿತು.
ಡೂಲನ್ ದರ್ಬಾರ್: ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ಎ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಅಲೆಕ್ಸ್ ಡೂಲನ್. ಆರಂಭಿಕರಾಗಿ ಕಣಕ್ಕಿಳಿದ ಕೆಮರೂನ್ ವೈಟ್ (15) ಹಾಗೂ ಫಿಲಿಪ್ ಹ್ಯೂಸ್ (21) ತಂಡಕ್ಕೆ ಕೇವಲ 40 ರನ್ಗಳ ಆರಂಭ ನೀಡಿದರು. ಈ ಇಬ್ಬರು ಪೆವಿಲಿಯನ್ ಸೇರಿಕೊಂಡ ನಂತರ ಬಂದ ಡೂಲನ್, ಆಸೀಸ್ ಇನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಹೊತ್ತರು. 101 ಎಸೆತಗಳನ್ನು ಎದುರಿಸಿದ ಡೂಲನ್, 9 ಬೌಂಡರಿ ಹಾಗೂ 1 ಸಿಕ್ಸರ್ಗಳ ನೆರವಿನಿಂದ ಜವಾಬ್ದಾರಿಯುತ 96 ರನ್ ದಾಖಲಿಸಿ ಶತಕದ ಹೊಸ್ತಿಲಲ್ಲಿ ಎಡವಿದರು. ಇವರಿಗೆ ತಕ್ಕ ಸಾಥ್ ನೀಡಿದ ಮಿಚೆಲ್ ಮಾರ್ಷ್ ಸಹ ಜವಾಬ್ದಾರಿಯುತ ಅರ್ಧ ಶತಕ ದಾಖಲಿಸಿ ತಂಡಕ್ಕೆ ನೆರವಾದರು. 62 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ನೆರವಿನಿಂದ 63 ರನ್ ದಾಖಲಿಸಿದರು. ಉಳಿದಂತೆ ಫರ್ಗ್ಯೂಸನ್ 32 ರನ್ ಗಳಿಸಿದರು. ಈ ಮೂಲಕ ಆತಿಥೇಯರು 250ರ ಗಡಿ ದಾಟುವಲ್ಲಿ ಯಶಸ್ವಿಯಾದರು.
ಭಾರತದ ಪರ ಮೊಹಿತ್ ಶರ್ಮಾ ಹಾಗೂ ಧವಳ್ ಕುಲಕರ್ಣಿ ತಲಾ 3 ವಿಕೆಟ್ ಪಡೆದು ಮಿಂಚಿದರು.
ಹೋರಾಟ ವಿಫಲ: ಆಸೀಸ್ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕರಾದ ರಾಬಿನ್ ಉತ್ತಪ್ಪ (25) ಹಾಗೂ ಉನ್ಮುಕ್ತ್ ಚಾಂದ್ (23) 39 ರನ್ಗಳ ಆರಂಭ ನೀಡಿದರು.
ಈ ಇಬ್ಬರು ಬ್ಯಾಟ್ಸ್ಮನ್ಗಳು ಉತ್ತಮ ಆರಂಭ ಪಡೆದರಾದರೂ ಅದನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿದರು. ನಂತರ ಬಂದ ಮನೀಷ್ ಪಾಂಡೆ 7, ಮನೋಜ್ ತಿವಾರಿ 2, ಅಂಬಟಿ ರಾಯುಡು 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತ ತಂಡ 84 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಕ್ರೀಸ್ಗೆ ಬಂದ ಸಂಜು ಸ್ಯಾಮ್ಸನ್ ಮಾತ್ರ ಒಂದೆಡೆ ನಿಂತು ತಂಡದ ಇನಿಂಗ್ಸ್ ಕಟ್ಟುತ್ತಾ ಆಸೀಸ್ ದಾಳಿಗೆ ಪ್ರತ್ಯುತ್ತರ ನೀಡಿದರು. 98 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ 81 ರನ್ ದಾಖಲಿಸಿದ್ದ ಸ್ಯಾಮ್ಸನ್, ಭಾರತದ ಕಡೇಯ ವಿಕೆಟ್ ಆದರು. ಈ ಮುನ್ನ ಅಕ್ಷರ್ ಪಟೇಲ್ 0, ಹೊರತುಪಡಿಸಿ ಪರ್ವೇಜ್ ರಸೂಲ್ 25, ಧವಳ್ ಕುಲಕರ್ಣಿ 20, ಮೋಹಿತ್ ಶರ್ಮಾ 19 ರನ್ ಗಳಿಸಿ ಸಂಜುಗೆ ಉತ್ತಮ ಸಾಥ್ ನೀಡಿದರು.
ಅಂತಿಮ ಓವರ್ಗಳಲ್ಲಿ ಅಗತ್ಯ ರನ್ರೇಟ್ ಹೆಚ್ಚುತ್ತಿದ್ದ ಪರಿಣಾಮ ಭಾರತ ಗೆಲವಿನ ದಡ ಸೇರಲು ವಿಫಲವಾಯಿತು. ಆಸೀಸ್ ತಂಡದ ಪರ ರಿಚರ್ಡ್ಸನ್ 5, ಮಾರ್ಷ್ 3, ಕ್ಲಿಂಟ್ ಮೆಕೆ ಹಾಗೂ ಕೆಮರೂನ್ ಬೊಯ್ಸ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಎ 50 ಓವರ್ಗಳಲ್ಲಿ 252ಕ್ಕೆ7
(ಅಲೆಕ್ಸ್ ಡೂಲನ್ 96, ಮಿಚೆಲ್ ಮಾರ್ಷ್ 63, ಫರ್ಗ್ಯೂಸನ್ 32, ಧವಳ್ ಕುಲಕರ್ಣಿ 41ಕ್ಕೆ3, ಮೊಹಿತ್ ಶರ್ಮಾ 53ಕ್ಕೆ3)
ಭಾರತ ಎ 50 ಓವರ್ಗಳಲ್ಲಿ 224
(ಸಂಜು ಸ್ಯಾಮ್ಸನ್ 81, ರಾಬಿನ್ ಉತ್ತಪ್ಪ 25, ಪರ್ವೇಜ್ ರಸೂಲ್ 25, ಕೇನ್ ರಿಚರ್ಡ್ಸನ್ 31ಕ್ಕೆ5, ಮಿಚೆಲ್ ಮಾರ್ಷ್ 41ಕ್ಕೆ3,)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

