ಕೆಎಸ್ಸಿಎ ಇಲೆವೆನ್ ಬೃಹತ್ ಮೊತ್ತ
ಬೆಂಗಳೂರು: ಎದುರಾಳಿ ಬೌಲರ್ಗಳ ಬೆವರಿಳಿಸಿದ ಕೆ.ಸಿ ಅವಿನಾಶ್ (ಅಜೇಯ 200) ದ್ವಿಶತಕ ಮತ್ತು ಶ್ರೇಯಸ್ ಗೋಪಾಲ್ (150) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನೊಂದಿಗೆ ಕೆಎಸ್ಸಿಎ ಇಲೆವೆನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ತ್ರಿಪುರ ಕ್ರಿಕೆಟ್ ಸಂಸ್ಥೆಯ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 7 ವಿಕೆಟ್ಗೆ 506 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ನಂತರ ಇನಿಂಗ್ಸ್ ಆರಂಭಿಸಿದ ತ್ರಿಪುರ 2ನೇ ದಿನಾಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿದೆ.ಇನ್ನೊಂದು ಪಂದ್ಯದಲ್ಲಿ ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ತಂಡ ಹಿಮಾಚಲ ಪ್ರದೇಶ ಕ್ರಿಕೆಟ್ಸಂಸ್ಥೆ ವಿರುದ್ಧ 341 ರನ್ಗಳಿಗೆ ಆಲೌಟ್ ಆಯಿತು. ಅಧ್ಯಕ್ಷರ ಇಲೆವೆನ್ ಪರ ಸಾದಿಕ್ ಕೀರ್ಮಾನಿ (82) ಮತ್ತು ಅಬ್ರಾರ್ ಕಾಜಿ (ಅಜೇಯ 71) ಅರ್ಧ ಶತಕ ದಾಖಲಿಸಿದರು. ನಂತರ ಹಿಮಾಚಲ ಪ್ರದೇಶ 46.5 ಓವರ್ಗಳಲ್ಲಿ 138 ರನ್ ಗಳಿಸಿ ಆಲೌಟ್ ಆಯಿತು. ಇನ್ನು ಕೆಎಸ್ಸಿಎ ಕಾಲ್ಟ್ಸ್ ತಂಡ ಡಿವೈ ಪಾಟೀಲ್ ಅಕಾಡೆಮಿ ವಿರುದ್ಧ 384ಕ್ಕೆ ಆಲೌಟ್ ಆಯಿತು. ಡಿವೈ ಪಾಟೀಲ್ ಅಕಾಡೆಮಿ 60 ಓವರ್ಗಳಲ್ಲಿ 4 ವಿಕೆಟ್ಗೆ 213 ರನ್ ಗಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

