ಕಾಮನ್ವೆಲ್ತ್ ಉದ್ಘಾಟನಾ ಸಮಾರಂಭಕ್ಕೆ ಸಚಿನ್
ಗ್ಲಾಸ್ಗೋ: ಭಾರತ ಕ್ರಿಕೆಟ್ನ ಐಕಾನ್ ಸಚಿನ್ ತೆಂಡೂಲ್ಕರ್ ಅವರು ಬುಧವಾರ ಗ್ಲಾಸ್ಗೋದಲ್ಲಿ ನಡೆಯಲಿರುವ 20ನೇ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗ್ಲಾಸ್ಗೋ ಕ್ರೀಡಾಕೂಟದ ಸಂಘಟಕರು ಮತ್ತು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ಜತೆ ಪಾಲುದಾರಿಕೆ ಹೊಂದಿರುವ ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ಸ್ನ (ಯುನಿಸೆಫ್) ಜಾಗತಿಕ ರಾಯಭಾರಿಯಾಗಿರುವ ಸಚಿನ್ ಉದ್ಘಾಟನಾ ಸಮಾರಂಭದಲ್ಲಿ ಯಾವ ಪಾತ್ರ ವಹಿಸಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಕಾಮನ್ವೆಲ್ತ್ನ 71 ರಾಷ್ಟ್ರಗಳು ಹಾಗೂ ಕ್ಷೇತ್ರಗಳನ್ನು 248 ದಿನಗಳ ಕಾಲ ಪ್ರವಾಸ ಮಾಡಿ ಸ್ಕಾಟ್ಲೆಂಡ್ಗೆ ಮರಳಿರುವ ಕ್ವೀನ್ಸ್ ಬೇಟನ್ನ ಸಂದೇಶವನ್ನು ರಾಣಿ ಎಲಿಜಬೆತ್ ಅವರು ಕಾರ್ಯಕ್ರಮದಲ್ಲಿ ಓದಲಿದ್ದಾರೆ.
ಸ್ಕಾಟ್ಲೆಂಡ್ನ ಸಂಗೀತ ದಂತಕತೆ ಮತ್ತು ಗ್ರಾಮಿ ಪ್ರಶಸ್ತಿ ವಿಜೇತ ರಾಡ್ ಸ್ಟೀವರ್ಟ್ ಅವರು ಕಾರ್ಯಕ್ರಮದಲ್ಲಿ ಎರಡು ಗಂಟೆಗಳ ಕಾಲ ಪ್ರದರ್ಶನ ನೀಡಲಿದ್ದಾರೆ.
ಸಾವಿರಾರು ಆಲ್ಬಮ್ಗಳನ್ನು ಮಾರಾಟ ಮಾಡಿರುವ ಸ್ಕಾಟ್ಲೆಂಡ್ನ ಗಾಯಕಿ ಸೂಸನ್ ಬಾಯ್ಲೆ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸುಮಾರು 4500 ಕ್ರೀಡಾಪಟುಗಳು ಭಾಗವಹಿಸುತ್ತಿರುವ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ಭಾಗವಹಿಸುತ್ತಿರುವುದು ಭಾರತದ ಅಥ್ಲೀಟ್ಗಳಲ್ಲಿ ಸ್ಫೂರ್ತಿ ತುಂಬಲಿದೆ.
ಇಬ್ಬರು ಅಥ್ಲೀಟ್ಗಳು ತವರಿಗೆ ವಾಪಸ್
ಕ್ರೀಡಾಕೂಟಕ್ಕೆ ಒಂದು ದಿನ ಬಾಕಿ ಇರುವಾಗ ಇಬ್ಬರು ಭಾರತೀಯ ಅಥ್ಲೀಟ್ಗಳು ಅನಾರೋಗ್ಯದ ಹಿನ್ನೆಲೆಯಲ್ಲಿ ಭಾರತಕ್ಕೆ ಹಿಂತಿರುಗಿದ್ದಾರೆ.
ಬುಧವಾರದಿಂದ ಕ್ರೀಡಾಕೂಟ ಆರಂಭವಾಗಲಿದ್ದು, ಇಬ್ಬರು ಅಥ್ಲೀಟ್ಗಳಾದ ಸಚಿನ್ ರೊಬಿ ಹಾಗೂ ಸಚಿನ್ ಚೌಧರಿ ಸ್ವದೇಶಕ್ಕೆ ಮರಳಿದ್ದಾರೆ.
ಸಚಿನ್ ರೊಬಿ ಪುರುಷರ 4್ಗ100 ಮೀ. ರಿಲೆಯಲ್ಲಿ ಭಾಗವಹಿಸಲಿದ್ದು, ಕಳೆದ ಕೆಲವು ದಿನಗಳಿಂದ ಜಾಂಡೀಸ್ನಿಂದ ಬಳಲುತ್ತಿರುವುದರಿಂದ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಸಚಿನ್ ಚೌಧರಿ ಅವರ ತಂದೆಯ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅವರು ಸಹ ತವರಿಗೆ ವಾಪಸ್ಸಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

