ಹಿರಿಯರತ್ತ ಫ್ರಾಂಚೈಸಿ ಒಲವು
ಮುಂಬೈ: ಅನುಭವಿ ಫುಟ್ಬಾಲ್ ಆಟಗಾರರಾದ ಸಂದೀಪ್ ನ್ಯಾಂಡಿ, ಕ್ಲೈಮ್ಯಾಕ್ಸ್ ಲಾರೆನ್ಸ್, ಎನ್.ಪಿ ಪ್ರದೀಪ್ ಹಾಗೂ ಸ್ಟೀವನ್ ಡಯಾಸ್ ಅವರು ಬಹುನಿರೀಕ್ಷಿತ ಇಂಡಿಯನ್ ಸೂಪರ್ ಲೀಗ್‌ನ ಹರಾಜಿನಲ್ಲಿ ಬಿಕರಿಯಾಗಿದ್ದಾರೆ.
ಬುಧವಾರ ಮುಕ್ತಾಯಗೊಂಡ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 84 ಆಟಗಾರರನ್ನು ಆರು ಫ್ರಾಂಚೈಸಿಗಳು ಆಯ್ಕೆ ಮಾಡಿಕೊಂಡಿದ್ದು, ಪ್ರತಿ ಫ್ರಾಂಚೈಸಿಗಳು ಪ್ರಬಲ ತಂಡವನ್ನು ಪಡೆದ ತೃಪ್ತಿಯಲ್ಲಿವೆ.
ಎರಡನೇ ದಿನದ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಮಾಜಿ ಗೋಲ್‌ಕೀಪರ್ ಸಂದೀಪ್ ನ್ಯಾಂಡಿ ಅವರನ್ನು ಸಚಿನ್ ತೆಂಡೂಲ್ಕರ್ ಮಾಲೀಕತ್ವದ ಕೇರಳ ಬ್ಲಾಸ್ಟರ್ಸ್ ತಂಡ ಆಯ್ಕೆ ಮಾಡಿಕೊಂಡಿತು.
ಇನ್ನು ಉಳಿದ ಹಿರಿಯ ಆಟಗಾರರಾದ ಲಾರೆನ್ಸ್, ಸ್ಟೀವನ್ ಡಯಾಸ್ ಮತ್ತು ಪ್ರದೀಪ್ ಅವರು ಬಿಕರಿಯಾಗಲು ಕಡೇಯ ಸುತ್ತಿನವರೆಗೂ ಕಾಯಬೇಕಾಯ್ತು. ಈ ಮೂವರು ಆಟಗಾರರನ್ನು ಕ್ರಮವಾಗಿ ಅಟ್ಲೆಟಿಕೊ ಡಿ ಕೋಲ್ಕತಾ, ಡೆಲ್ಲಿ ಡೈನಮೊಸ್ ಹಾಗೂ ಬೆಂಗಳೂರು ತಂಡಗಳು ಬಿಡ್ ಮಾಡಿದವು. ಇನ್ನು ಸಂಜು ಪ್ರಧಾನ್ ಹಾಗೂ ಮೆಹ್ರಾಜುದ್ದೀನ್ ವಡೂ ಅವರನ್ನು ಕ್ರಮವಾಗಿ ಕೋಲ್ಕತಾ ಹಾಗೂ ಪುಣೆ ತಂಡಗಳು ಆಯ್ಕೆ ಮಾಡಿಕೊಂಡವು.
ಈ ಬಿಡ್ಡಿಂಗ್ ವಿಭಾಗದಲ್ಲಿ 27 ಮುನ್ನಡೆ ಆಟಗಾರರು, 21 ಸಂಪರ್ಕ ಆಟಗಾರರು, 26 ರಕ್ಷಣಾ ಆಟಗಾರರು ಹಾಗೂ 10 ಗೋಲ್ ಕೀಪರ್‌ಗಳನ್ನು ಬಿಕರಿ ಮಾಡಲಾಯಿತು. ಅಲ್ಲದೆ ಈ ಗುಂಪಿನಲ್ಲಿ ನಾಲ್ಕು ಐ ಲೀಗ್ ಕ್ಲಬ್‌ಗಳಿಂದ 30 ಆಟಗಾರರನ್ನು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

