ಕ್ರೀಡೆ

ನಿಷೇಧಿತ ಔಷಧ ಸೇವಿಸಿದ್ದ ರಾಣಿ ಅಶ್ವ

Published On :

ಲಂಡನ್: ಕಳೆದ ವರ್ಷ ನಡೆದ ಪ್ರತಿಷ್ಠಿತ ಗೋಲ್ಡ್ ಕಪ್ ಗೆದ್ದುಕೊಂಡ ಎರಡನೇ ಎಲಿಜೆಬೆತ್ ರಾಣಿಯ ಒಡೆತನದ ರೇಸಿನ ಕುದುರೆ ನಿಷೇಧಿತ ಔಷಧ ಸೇವಿಸಿರುವುದು ಪತ್ತೆಯಾಗಿದೆ. ಇದನ್ನು ಬಕಿಂಗ್‌ಹ್ಯಾಮ್ ಅರಮನೆ ಪ್ರಕಟಿಸಿದೆ.ಮೈಕೆಲ್ ಸ್ಟೌಟೆ ಎಂಬುವರಲ್ಲಿ ತರಬೇತಿ ಪಡೆದಿರುವ ಐದು ಕುದುರೆಗಳಲ್ಲಿ ಒಂದಾದ 5 ವರ್ಷದ ಕುದುರೆ ಮಾರ್ಫಿನೆ ಎಂಬ ಔಷಧ ಸೇವಿಸಿರುವುದು ಖಚಿತಪಟ್ಟಿದೆ. ಅಶುದ್ಧವಾದ ಅಹಾರ ಉತ್ಪಾದನೆಗಳನ್ನು ಕುದುರೆಗೆ ನೀಡಿರುವುದೇ, ಮಾರ್ಫಿನೆ ಅದರ ದೇಹದಲ್ಲಿ ಸೇರಿಕೊಳ್ಳಲು ಕಾರಣ ಎಂದು ಅರಮನೆ ತಿಳಿಸಿದೆ.ಈ ಕುದುರೆ, ಬ್ರಿಟನ್‌ನ ರಾಜಮನೆತನದ ಪರವಾಗಿ ಮೊದಲ ಬಾರಿಗೆ ರಾಣಿ ಗೋಲ್ಡ್ ಕಪ್ ಗೆಲ್ಲುವಂತೆ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.