ಟಿನೊ-ಮಲಿಕ್ಗೆ ದಂಡ
ಬ್ರಿಡ್ಜ್ಟೌನ್: ಕೆರಿಬಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿಯ ಬಾರ್ಬಡೊಸ್ ಟ್ರಿಡೆನ್ಸ್ ಹಾಗೂ ಸೆಂಟ್ ಲೂಸಿಯಾ ಜೌಕ್ಸ್ ನಡುವಣ ಪಂದ್ಯದಲ್ಲಿ ವೇಗಿ ಟಿನೊ ಬೆಸ್ಟ್ ಹಾಗೂ ಪಾಕ್ ಮಾಜಿ ಬ್ಯಾಟ್ಸ್ಮನ್ ಶೊಹೆಬ್ ಮಲಿಕ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರೂ ಆಟಗಾರರಿಗೆ ದಂಡ ವಿಧಿಸಲಾಗಿದೆ. ಬುಧವಾರ ಕಿಂಗ್ಸ್ಸ್ಟನ್ ಓವೆಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ಇಬ್ಬರು ಮೈದಾನದಲ್ಲೇ ಮಾತಿನ ಚಕಮಕಿಗೆ ಇಳಿದ ಕಾರಣ ಟಿನೊ ಬೆಸ್ಟ್ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ.60ರಷ್ಟು ಹಾಗೂ ಮಲಿಕ್ಗೆ ಶೇ.50ರಷ್ಟು ದಂಡ ವಿಧಿಸಲಾಗಿದೆ. ಪ್ರಕರಣದಲ್ಲಿ ಈ ಇಬ್ಬರು ಆಟಗಾರರು ತಪ್ಪು ಮಾಡಿರುವ ಹಿನ್ನೆಲೆಯಲ್ಲಿ ಇಬ್ಬರಿಗೂ ದಂಡ ವಿಧಿಸಲಾಗಿದೆ.
ಜಡೇಜಾಗೆ ದಂಡ
ಸೌಥಂಪ್ಟನ್: ಟ್ರೆಂಟ್ಬ್ರಿಡ್ಜ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ಬೌಲರ್ ಆ್ಯಂಡರ್ಸನ್ ಜತೆಗೆ ಜಗಳವಾಡಿದ್ದ ಪ್ರಕರಣದಲ್ಲಿ ಪಂದ್ಯದ ರೆಫರಿ ಡೇವಿಡ್ ಬೂನ್ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ.50ರಷ್ಟು ಮೊತ್ತವನ್ನು ದಂಡ ವಿಧಿಸಲಾಗಿದೆ. ಮೊದಲ ಟೆಸ್ಟ್ನ ಎರಡನೇ ದಿನದಾಟದ ಭೋಜನ ವಿರಾಮದ ವೇಳೆ ಆ್ಯಂಡರ್ಸನ್ ಜತೆ ಮಾತಿನ ಚಕಮಕಿ ನಡೆಸಿದ್ದ ಹಿನ್ನಲೆಯಲ್ಲಿ ದಂಡ ವಿಧಿಸಲಾಗಿದೆ. ಪಂದ್ಯದ ವೇಳೆ ಆ್ಯಂಡರ್ಸನ್ ಜಡೇಜಾ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಅವರನ್ನು ನೂಕಿದ್ದರು. ಈ ಕುರಿತು ಭಾರತ ತಂಡ ದೂರು ನೀಡಿತ್ತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡ ಸಹ ಜಡೇಜಾ ವಿರುದ್ಧ ಐಸಿಸಿ 2ನೇ ಮಟ್ಟದ ನಿಯಮಾವಳಿ ಉಲ್ಲಂಘನೆಯ ದೂರು ದಾಖಲಿಸಿತ್ತು. ಆದರೆ ವಿಚಾರಣೆ ನಡೆಸಿದ ಪಂದ್ಯದ ರೆಫರಿ ಡೇವಿಡ್ ಬೂನ್, ಜಡೇಜಾ ಅವರು ಈ ಮಟ್ಟದ ನಿಯಮ ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದು, ಕೇವಲ ಪಂದ್ಯದ ಶೇ.50ರಷ್ಟು ದಂಡ ವಿಧಿಸಿದ್ದಾರೆ. ಈ ವೇಳೆ ಜಡೇಜಾಗೆ ದಂಡ ವಿಧಿಸಿರುವ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಬಿಸಿಸಿಐ ನಿರ್ಧರಿಸಿದೆ.
ಪದಕ ಭರವಸೆಗಳ ಆಯ್ಕೆಗೆ ವಿಶೇಷ ಸಮಿತಿ ರಚನೆ
ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯವು 2016 ಹಾಗೂ 2020ರ ಒಲಿಂಪಿಕ್ಸ್ನಲ್ಲಿ ಉತ್ತಮ ಪ್ರದರ್ಶನ ಪಡೆಯುವ ನಿಟ್ಟಿನಲ್ಲಿ ಪದಕ ತರಬಲ್ಲ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆಗೆ ವಿಶೇಷ ತಂಡ ರಚಿಸಿದೆ. ಭಾರತದ ಕ್ರಿಕೆಟ್ ತಾರೆ ರಾಹುಲ್ ದ್ರಾವಿಡ್, ಒಲಂಪಿಯನ್ ಶೂಟರ್ ಅಭಿನವ್ ಬಿಂದ್ರಾ ಸೇರಿದಂತೆ ಹಿರಿಯ ಕ್ರೀಡಾಪಟುಗಳ ಸಮಿತಿಯನ್ನು ರಚಿಸಿದ್ದು, ಟಾರ್ಗೆಟ್ ಮಿಷನ್ ಒಲಿಂಪಿಕ್ ಪೊಡಿಯಂ ಫಿನಿಶ್ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿಯಿಂದ ಹಣಕಾಸಿನ ಬಳಕೆಯಿಂದ ಭಾರತಕ್ಕೆ ಪದಕ ತರಬಲ್ಲ ಪ್ರಮುಖ ಪ್ರತಿಭೆಗಳನ್ನು ಹುಡುಕಿ ಆಯ್ಕೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದು 2016ರ ರಿಯೋ ಡಿ ಜೆನೈರೊ ಮತ್ತು 2020 ಟೊಕಿಯೊ ಒಲಿಂಪಿಕ್ಸ್ ಸೇರಿದಂತೆ 2020ರವರೆಗೆನ ಪ್ರಮುಖ ಕ್ರೀಡಾಕೂಟಗಳಿಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸಲಿದೆ. ಎಂಟು ಸದಸ್ಯರ ಈ ಸಮಿತಿಯಲ್ಲಿ ದ್ರಾವಿಡ್ ಹಾಗೂ ಬಿಂದ್ರಾ ಜತೆಗೆ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪಿ.ಗೋಪಿಚಂದ್, ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಧಾನ ನಿರ್ದೇಶಕರು, ಕ್ರೀಡಾ ಜಂಟಿ ಕಾರ್ಯದರ್ಶಿ, ಎಂವೈಎಎಸ್, ಮಿತಲ್ ಚಾಂಪಿಯನ್ಸ್ ಟ್ರಸ್ಟ್ನ ಸಿಇಒ ಮಿನಿಶಾ ಮಲ್ಹೋತ್ರಾ ಮತ್ತು ಸಮನ್ವಯಕರಾಗಿ ಅಮೃತ್ ಮಾಥೂರ್ ಇದ್ದಾರೆ.
ಡೇವಿಸ್ ಕಪ್ ಆಯೋಜನೆಗೆ 1.57 ಕೊರತೆ
ಬೆಂಗಳೂರು: ಮುಂಬರುವ ಸೆಪ್ಟೆಂಬರ್ನಲ್ಲಿ ಪ್ರಬಲ ಸರ್ಬಿಯಾ ವಿರುದ್ಧದ ಡೇವಿಸ್ಕಪ್ ಪಂದ್ಯಾವಳಿಯ ಆಯೋಜನೆಗೆ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ರಾಜ್ಯ ಸರ್ಕಾರದಿಂದ ರು. 1ಕೋಟಿ ನೆರವು ಪಡೆದಿದ್ದು, ಪಂದ್ಯಾವಳಿಯ ಆಯೋಜನೆಗೆ ಇನ್ನು 1.5 ಕೋಟಿ ಅಗತ್ಯವಿದ್ದು, ಈ ಮೊತ್ತವನ್ನು ಪ್ರಾಯೋಜಕತ್ವದ ಮೂಲಕ ಸಂಗ್ರಹಿಸಲು ನಿರ್ಧರಿಸಿದೆ. ನಾವು ಸರ್ಕಾರದಿಂದ ಡೇವಿಸ್ಕಪ್ ಪಂದ್ಯಾವಳಿಯ ಆಯೋಜನೆಗೆ ಒಂದು ಕೋಟಿ ನೆರವು ಪಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ಅಲ್ಲದೆ ಉಳಿದ ಹಣವನ್ನು ಪ್ರಾಯೋಜಕತ್ವದ ಮೂಲಕ ಪಡೆಯಲು ಚಿಂತನೆ ನಡೆಸುತ್ತಿರುವುದಾಗಿ ಕೆಎಸ್ಎಲ್ಟಿಎ ಕಾರ್ಯದರ್ಶಿ ಸಿ.ಎಸ್ ಸುಂದರ್ ರಾಜು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

