ಆಂಗ್ಲರನ್ನು ಹಣಿಯಲು ಮಹಿ ಸಜ್ಜು
ಸೌಥಂಪ್ಟನ್: ಲಾರ್ಡ್ಸ್ ಅಂಗಣದಲ್ಲಿ ಸಿಕ್ಕ ಐಸಿಹಾಸಿಕ ಗೆಲವಿನಿಂದ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮತ್ತಷ್ಟು ಮುನ್ನಡೆ ಸಾಧಿಸುವತ್ತ ಗಮನ ಹರಿಸಿದೆ.
ಭಾನುವಾರ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ ಭಾರತ ತಂಡ ಸರಣಿಯ ಮೇಲೆ ಮತ್ತಷ್ಟು ಬಿಗಿ ಹಿಡಿತ ಸಾಧಿಸುವ ಚಿಂತನೆ ನಡೆಸಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿದ್ದ ಭಾರತ, ಎರಡನೇ ಟೆಸ್ಟ್ ಪಂದ್ಯದಲ್ಲಿ ಬೌಲರ್ಗಳ ಸ್ವರ್ಗ ಎಂದೇ ಬಣ್ಣಿಸಲಾಗುವ ಲಾರ್ಡ್ಸ್ ಅಂಗಣದಲ್ಲಿ 95 ರನ್ಗಳ ಗೆಲವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
ಇತ್ತ ಇಂಗ್ಲೆಂಡ್ ತಂಡ ಸತತ ವೈಫಲ್ಯದಿಂದ ಕಂಗೆಟ್ಟಿದ್ದು, ಭಾರತಕ್ಕೆ ಪ್ಲಸ್ಪಾಯಿಂಟ್ ಆಗಿದೆ. ನಾಯಕ ಅಲಸ್ಟೇರ್ ಕುಕ್ ಲಯ ಕಾಣದೇ ಪರದಾಡುತ್ತಿದ್ದಾರೆ. ಇನ್ನು ಜೋ ರೂಟ್ ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ ಭಾರತೀಯ ಬೌಲರ್ಗಳನ್ನು ಪೂರ್ಣ ಪ್ರಮಾಣದಲ್ಲಿ ಕಾಡಿಲ್ಲ. ಇನ್ನು ಬೌಲಿಂಗ್ ವಿಭಾಗದಲ್ಲಿ ಜೇಮ್ಸ್ ಆ್ಯಂಡರ್ಸನ್ ಹಾಗೂ ಬ್ರಾಡ್ ಟ್ರಂಪ್ಕಾರ್ಡ್ ಆಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿಲ್ಲ.
ಭಾರತ ತಂಡದಲ್ಲಿ ಆರಂಭಿಕ ಮುರಳಿ ವಿಜಯ್ ಫಾರ್ಮ್, ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಉಳಿದಂತೆ ಚೇತೇಶ್ವರ ಪೂಜಾರ ಹಾಗೂ ಕೊಹ್ಲಿ ಬ್ಯಾಟ್ನಿಂದ ರನ್ ಹರಿಯಲಾರಂಭಿಸಿದರೆ ಆಂಗ್ಲರ ಪಾಡು ಶೋಚನಿಯವಾಗಲಿದೆ. ಬೌಲಿಂಗ್ನಲ್ಲಿ ಭುವನೇಶ್ವರ್ ಹಾಗೂ ಇಶಾಂತ್ ಸಂಪೂರ್ಣ ಪ್ರಾಬಲ್ಯ ಮೆರೆಯಲು ಸಜ್ಜಾಗಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಧೋನಿ, ತಂಡದಲ್ಲಿ ಬದಲಾವಣೆ ಮಾಡಲು ಮುಂದಾಗುವ ಅವಕಾಶ ಕಡಿಮೆ ಇದೆ. ಒಂದು ವೇಳೆ ಮಾಡಲು ಮುಂದಾದರೆ, ಶಿಖರ್ ಧವನ್ ಬದಲಿಗೆ ಆರಂಭಿಕರಾಗಿ ಗೌತಮ್ ಗಂಭೀರ್ ಕಣಕ್ಕಿಳಿಯಬಹುದು. ಇನ್ನು ಸ್ಟುವರ್ಟ್ ಮತ್ತೊಂದು ಅವಕಾಶ ಪಡೆದರೆ ಅಚ್ಚರಿ ಪಡುವಂತಿಲ್ಲ.
ತಂಡಗಳು
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಗೌತಮ್ ಗಂಭೀರ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಾಹ, ಸ್ಟುವರ್ಟ್ ಬಿನ್ನಿ, ಆರ್.ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ಇಶಾಂತ್ ಶರ್ಮಾ, ವರುಣ್ ಅರುಣ್, ಪಂಕಜ್ ಸಿಂಗ್, ಈಶ್ವರ್ ಪಾಂಡೆ.
ಇಂಗ್ಲೆಂಡ್: ಅಲಸ್ಟೇರ್ ಕುಕ್ (ನಾಯಕ), ಸ್ಯಾಮ್ ರಾಬ್ಸನ್, ಇಯಾನ್ ಬೆಲ್, ಜೋ ರೂಟ್, ಜೋಸ್ ಬಟ್ಲರ್, ಮೋಯಿನ್ ಅಲಿ, ಗ್ಯಾರಿ ಬ್ಯಾಲೆನ್ಸ್, ಕ್ರಿಸ್ ಜೋರ್ಡನ್, ಬೆನ್ ಸ್ಟೋಕ್ಸ್, ಕ್ರಿಸ್ ವೊಕ್ಸ್, ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಲಿಯಾಮ್ ಪ್ಲಂಕೆಟ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

