ಬಂಗಾರ ಬೇಟೆಯಾಡಿದ ಜೀತು

ಬೆಳ್ಳಿ ನಾರಂಗ್: ಇನ್ನು ಭಾರತದ ಹಿರಿಯ ಶೂಟರ್ ಗಗನ್ ನಾರಂಗ್ ಸಹ ತಮ್ಮ ಕೊರಳಿಗೆ ಬೆಳ್ಳಿ ಪದಕ ಹಾಕಿಕೊಂಡಿದ್ದಾರೆ. ಪುರುಷರ 50 ಮೀ. ರೈಫಲ್ ಪ್ರೊನ್ವಿಭಾಗದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಭಾರತದ ಪದಕ ಪಟ್ಟಿಗೆ ಕಾಣಿಕೆ ನೀಡಿದ್ದಾರೆ.
ಆರಂಭದಲ್ಲಿ ಎರಡನೇ ಸ್ಥಾನ ಪಡೆದಿದ್ದ ನಾರಂಗ್ ನಂತರ ಮೂರನೇ ಸ್ಥಾನಕ್ಕೆ ಕುಸಿದು, ನಿಯಂತ್ರಣ ಕಳೆದುಕೊಂಡಂತ ಪರಿಸ್ಥಿತಿ ಎದುರಿಸಿದರು. ಮತ್ತೆ ಚೇತರಿಕೆ ಕಂಡ ನಾರಂಗ್, ತೀಕ್ಷ್ಣ ಗುರಿಯೊಂದಿಗೆ ಎರಡನೇ ಸ್ಥಾನ ಪಡೆದರು. ಆದರೆ ಕೂದಲೆಳೆಯ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾದರು.
ಆಸ್ಟ್ರೇಲಿಯಾದ ವಾರೆನ್ ಪೊಟೆಂಟ್ 204.3 ಅಂಕಗಳೊಂದಿಗೆ ಚಿನ್ನದ ಪದಕ ಪಡೆದರೆ, ಗಗನ್ ನಾರಂಗ್ 203.6 ಅಂಕಗಳೊಂದಿಗೆ ಬೆಳ್ಳಿ ಪದಕ ಬಾಚಿಕೊಂಡರು. ಇಂಗ್ಲೆಂಡ್ನ ಕೆನ್ನೆತ್ ಪಾರ್ 182 ಅಂಕಗಳೊಂದಿಗೆ ಕಂಚಿನ ಪದಕ ಪಡೆದುಕೊಂಡರು.
ಗ್ಲಾಸ್ಗೊ: ಪ್ರಸಕ್ತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರ ಪದಕಗಳ ಕೊಳ್ಳೆಹೊಡೆಯುತ್ತಿರುವ ಶೂಟರ್ಗಳು ತಮ್ಮ ಪ್ರಭುತ್ವದ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಭಾರತದ ಜಿತು ರೈ ಚಿನ್ನದ ಬೇಟೆಯಾಡಿದರೆ, ಗುರ್ಪಾಲ್ ಸಿಂಗ್ ಬೆಳ್ಳಿ ಬಾಚಿಕೊಂಡರು.
ಸೋಮವಾರ ನಡೆದ ಪುರುಷರ 50 ಮೀ. ಪಿಸ್ತೂಲ್ ವಿಭಾಗದಲ್ಲಿ ವಿಶ್ವದ ನಾಲ್ಕನೇ ರ್ಯಾಂಕಿಂಗ್ನ ಜಿತು ಅದ್ಭುತ ಪ್ರದರ್ಶನ ನೀಡಿದರು. ಒಟ್ಟಾರೆಯಾಗಿ ಫೈನಲ್ ಸ್ಪರ್ಧೆಯಲ್ಲಿ 194.1 ಅಂಕಗಳನ್ನು ಗಳಿಸಿದ ಜಿತು ರೈ ಅಗ್ರಸ್ಥಾನ ಪಡೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ಕ್ರೀಡಾಕೂಟದಲ್ಲಿ ಪದಾರ್ಪಣೆ ಮಾಡಿದ ಆವೃತ್ತಿಯಲ್ಲೇ ಚಿನ್ನದ ಪದಕ ಪಡೆದ ಸಾಧನೆ ಮಾಡಿದ್ದಾರೆ.
ಇನ್ನು ಭಾರತದ ಮತ್ತೋರ್ವ ಶೂಟರ್ ಗುರ್ಪಾಲ್ ಸಿಂಗ್ ಒಟ್ಟು 187.2 ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿ ಪದಕವನ್ನು ಪಡೆದರು. ಈ ಮೂಲಕ ಗುರ್ಪಾಲ್ ಮೊದಲ ಅಂತಾರಾಷ್ಟ್ರೀಯ ಪದಕ ಪಡೆದುಕೊಂಡರು. ಇನ್ನು ಆಸ್ಟ್ರೇಲಿಯಾದ ಡೇನಿಯಲ್ ರೆಪಾಚೊಲಿ ಕಂಚಿಗೆ ತೃಪ್ತಿಪಟ್ಟರು.
ಕಳೆದ ತಿಂಗಳು ನಡೆದ ವಿಶ್ವಕಪ್ನಲ್ಲಿ ಜಿತು ರೈ 10ಮೀ. ಏರ್ ಪಿಸ್ತೂಲ್ನಲ್ಲಿ ಚಿನ್ನ ಹಾಗೂ 50 ಮೀ. ಪಿಸ್ತೂಲ್ನಲ್ಲಿ ಬೆಳ್ಳಿ ಪದಕ ಪಡೆದು ಅದ್ಭುತ ಲಯದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


