ಕ್ರೀಡೆ

ಬ್ಯಾಡ್ಮಿಂಟನ್‌ನಲ್ಲಿ ನಿರಾಸೆ

Published On :

ಗ್ಲಾಸ್ಗೋ: ಭಾರತಕ್ಕೆ ಚಿನ್ನದ ಪದಕ ತಂದುಕೊಡಬಲ್ಲ ನಿರೀಕ್ಷೆ ಹುಟ್ಟಿಸಿದ್ದ ಭಾರತದ ಮಿಶ್ರ ಬ್ಯಾಡ್ಮಿಂಟನ್ ತಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸಿಂಗಾಪುರ ವಿರುದ್ಧ 2-3 ಅಂತರದ ಸೋಲನುಭವಿಸಿತು.
ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತಂಡ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿದೆ. ಗುರುಸಾಯಿದತ್ ಹಾಗೂ ಅಶ್ವಿನಿ ಪೊನ್ನಪ್ಪ 19-21, 19-21ರ ಅಂತರದಲ್ಲಿ ನಿಯೊ ವನ್ನೆಸ್ಸಾ ಹಾಗೂ ಡ್ಯಾನಿ ವಿರುದ್ಧ ನಿರಾಸೆ ಅನುಭವಿಸುವ ಮೂಲಕ ಭಾರತ ಕೆಟ್ಟ ಆರಂಭ ಪಡೆಯಿತು. ನಂತರ ಪಿ.ಕಶ್ಯಪ್ ಸಿಂಗಲ್ಸ್ ಪಂದ್ಯದಲ್ಲಿ ಚಾವ್ ಹಾಂಗ್ ವಿರುದ್ಧ 21-15, 22-10 ಅಂತರದ ಗೆಲವು ದಾಖಲಿಸಿ ತಂಡದ ಅಂತರವನ್ನು ಸಮಗೊಳಿಸಿದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತ ಸೋಲನುಭವಿಸಿತು. ನಂತರ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ ಸಿಂಧು, ಕ್ಷೈಯು ಲಿಯಾಂಗ್ ವಿರುದ್ಧ 24-22, 21-13 ಅಂತರದ ಗೆಲವು ದಾಖಲಿಸಿ ಸಮಬಲ ಸಾಧಿಸಲು ನೆರವಾದರು. ಅಂತಿಮ ಪಂದ್ಯದಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿಯು, 21-17, 29-27ಅಂತರದಲ್ಲಿ ನಿರಾಸೆ ಅನುಭವಿಸಿದ್ದು ತಂಡ ಕಂಚಿನ ಪದಕ ವಂಚಿತವಾಗುವಂತೆ ಮಾಡಿತು.
ಇನ್ನು ಭಾನುವಾರ ನಡೆದ ಮಿಶ್ರ ತಂಡ ವಿಭಾಗದ ಉಪಾಂತ್ಯದ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ 0-3 ಅಂತರದಲ್ಲಿ ಮುಖಭಂಗ ಅನುಭವಿಸಿತ್ತು. ಆರಂಭಿಕ ಗೇಮ್‌ನಲ್ಲಿ ಜತೆಯಾಗಿ ಕಣಕ್ಕಿಳಿದ ಜ್ವಾಲಾ ಗುಟ್ಟಾ ಹಾಗೂ ಅಕ್ಷಯ್ ದೇವಾಲ್ಕರ್ 16-21,21-16, 11-21 ಅಂತರದಲ್ಲಿ ಎದುರಾಳಿ ಜೋಡಿಗೆ ಮಣಿಯಿತು. ನಂತರ ಸಿಂಗಲ್ಸ್‌ನಲ್ಲಿ ಪಿ.ಕಶ್ಯಪ್ ಎದುರಾಳಿ ರಾಜೀವ್ ಔಸೆಫ್ ವಿರುದ್ಧ 16-21, 19-21 ಅಂತರದಲ್ಲಿ ಸೋಲನುಭವಿಸಿದರು. ಇನ್ನು ಮೂರನೇ ಗೇಮ್‌ನಲ್ಲಿ ಅಕ್ಷಯ್ ಹಾಗೂ ಪ್ರಣವ್ ಪುರುಷರ ಡಬಲ್ಸ್‌ನಲ್ಲಿ 21-12 13-21, 16-21 ಕ್ರಿಸ್ ಹಾಗೂ ಆ್ಯಂಡ್ರೂ ಎಲ್ಲಿಸ್ ವಿರುದ್ಧ ಮಣಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.