ಜಯ ತಂದ ಜಾಧವ್, ಸ್ಯಾಮ್ಸನ್
ಡಾರ್ವಿನ್: ಸಂಘಟಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ನೆರವಿನಿಂದ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಿದ ಭಾರತ ಎ ತಂಡ ಚತುಷ್ಕೋನ ಏಕದಿನ ಸರಣಿಯಲ್ಲಿ ಭಾರತ, ನ್ಯಾಷನಲ್ ಪರ್ಫಾಮೆನ್ಸ್ ಸ್ಕ್ವಾಡ್ (ಎನ್ಪಿಎಸ್) ವಿರುದ್ಧ ಗೆಲವು ದಾಖಲಿಸಿದೆ.
ಮಂಗಳವಾರ ಗಾರ್ಡನ್ಸ್ ಒವೆಲ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 3 ವಿಕೆಟ್ಗಳ ಗೆಲವು ದಾಖಲಿಸಿದೆ. ಈ ಮೂಲಕ ಭಾರತ ಸರಣಿಯಲ್ಲಿ ಸತತ ನಾಲ್ಕನೇ ಗೆಲವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡ ಭಾರತ ತಂಡ, ಎದುರಾಳಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ನಂತರ ಭಾರತೀಯ ಬೌಲರ್ಗಳ ದಾಳಿಗೆ ತತ್ತರಿಸಿದ ಎನ್ಪಿಎಸ್ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 234 ರನ್ ದಾಖಲಿಸಿದರು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 39.5 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 238 ರನ್ ದಾಖಲಿಸಿತು.ಟರ್ನರ್ ಆಸರೆ: ಬೃಹತ್ ಗುರಿ ದಾಖಲಿಸುವ ಉದ್ದೇಶದೊಂದಿಗೆ ಕಣಕ್ಕಿಳಿದ ಎನ್ಪಿಎಸ್ ಆರಂಭಿಕ ಆಘಾತ ಎದುರಿಸಿತು. ತಂಡದ 45 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ವರು ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡಿತು. ಮ್ಯಾಥ್ಯೂ ಶಾರ್ಟ್ (3), ಕೆಲ್ವಿನ್ ಸ್ಮಿತ್ (1), ಅಲೆಕ್ಸ್ ಕೇತ್ (9) ಹಾಗೂ ಟ್ರಾವೆಸ್ ಹೆಡ್ (5) ಪೆವಿಲಿಯನ್ ಸೇರಿಕೊಂಡರು.
ಈ ವೇಳೆ ಜತೆಯಾದ ಜೋರ್ಡನ್ ಸಿಲ್ಕ್ (67) ಹಾಗೂ ಆ್ಯಶ್ಟನ್ ಟರ್ನರ್ (73) 94 ರನ್ ಜೆತೆಯಾಟ ನೀಡಿ ತಂಡಕ್ಕೆ ಆಸರೆಯಾದರು.ಅಂತಿಮದಲ್ಲಿ ಅಬ್ಬೊಟ್ 41 ರನ್ ದಾಖಲಿಸಿ ತಂಡ 200ರ ಗಡಿ ದಾಟಲು ನೆರವಾದರು.
ಜಾಧವ್ ಜಾದು: ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಉತ್ತಪ್ಪ (17), ಮನನ್ ವೊಹ್ರಾ (25), ಮನೀಶ್ ಪಾಂಡೆ (9), ಮನೋಜ್ ತಿವಾರಿ (0), ಅಂಬಟಿ ರಾಯುಡು (0) ವಿಕೆಟ್ ಒಪ್ಪಿಸಿದರು. ಈ ವೇಳೆ ಜತೆಯಾದ ಕೇದಾರ್ ಜಾಧವ್ (87) ಹಾಗೂ ಸಂಜು ಸ್ಯಾಮ್ಸನ್ (ಅಜೇಯ 55) ತಂಡ ಗೆಲವಿನ ದಡ ಸೇರಲು ನೆರವಾದರು.
ಸಂಕ್ಷಿಪ್ತ ಸ್ಕೋರ್: ಎನ್ಪಿಎಸ್ 50 ಓವರುಗಳಲ್ಲಿ 9 ವಿಕೆಟ್ಗೆ 234
(ಆ್ಯಶ್ಟನ್ ಟರ್ನರ್ (73), ಜೋರ್ಡನ್ ಸಿಲ್ಕ್ 67, ರುಶಿ ಧವನ್ 38ಕ್ಕೆ2, ರಾಹುಲ್ ಶುಕ್ಲಾ 54ಕ್ಕೆ2)
ಭಾರತ 39.5 ಓವರುಗಳಲ್ಲಿ 7 ವಿಕೆಟ್ಗೆ 238 (ಕೇದಾರ್ ಜಾಧವ್ 87, ಸಂಜು ಸ್ಯಾಮ್ಸನ್ ಅಜೇಯ 55, ಜೇಮ್ಸ್ ಮ್ಯೂರ್ಹೆಡ್ 92ಕ್ಕೆ4, ಸೀನ್ ಅಬ್ಬೊಟ್ 52ಕ್ಕೆ2)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

