ಹರ್ಪ್ರೀತ್ಗೆ ಬೆಳ್ಳಿ

ಗ್ಲಾಸ್ಗೋ: ಭಾರತದ ಗುರಿಕಾರ ಹರ್ಪ್ರೀತ್ ಸಿಂಗ್ 20ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಸಂಪಾದಿಸುವಲ್ಲಿ ಸಫಲರಾಗಿದ್ದಾರೆ.
ಬ್ಯಾರಿ ಬಡ್ಡನ್ ಶೂಟಿಂಗ್ ಕೇಂದ್ರದಲ್ಲಿ ಮಂಗಳವಾರ ನಡೆದ ಪುರುಷರ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಹರ್ಪ್ರೀತ್ ಸಿಂಗ್ ಈ ಸಾಧನೆ ಮಾಡಿದರು.
ಎರಡು ಸುತ್ತುಗಳಲ್ಲಿ ಚೇತರಿಸಿಕೊಂಡ ನಂತರ ಭಾರತೀಯ ಗುರಿಕಾರ ಈ ಸಾಧನೆ ಮಾಡವಲ್ಲಿ ಯಶಸ್ವಿಯಾದರು. ಹರಿಯಾಣ ಮೂಲದ 33ರ ಹರ್ಪ್ರೀತ್, ಅರ್ಹತಾ ಸುತ್ತಿನಲ್ಲಿ ಅಗ್ರಗಣ್ಯರಾಗಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದರು.
ಈ ಮಧ್ಯೆ ಅರ್ಹತಾ ಸುತ್ತಿನಲ್ಲಿ ವೈಫಲ್ಯ ಅನುಭವಿಸಿದ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ವಿಜಯ್ ಕುಮಾರ್, ಫೈನಲ್ಗೆ ಪ್ರವೇಶಿಸದೇ ಇದ್ದುದರಿಂದ ಭಾರತಕ್ಕೆ ಈ ಸ್ಪರ್ಧೆಯಲ್ಲಿ ಪದಕ ದಕ್ಕುವುದು ಕಷ್ಟವಾಗಿತ್ತು. ಆದರೆ, ಹರ್ಪ್ರೀತ್ ಸಿಂಗ್ ಉತ್ತಮ ಗುರಿ ನೆಡುವ ಮೂಲಕ ಬೆಳ್ಳಿ ಪದಕದ ಸಾಧನೆ ಮಾಡಿದರು. ಭಾರಿ ಭರವಸೆ ಇಡಲಾಗಿದ್ದ ವಿಜಯ್ ಕುಮಾರ್ ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನ ಪಡೆದು ನಿರಾಶೆ ಅನುಭವಿಸಿದರು. ಅರ್ಹತಾ ಸುತ್ತಿನಲ್ಲಿ ಅಗ್ರ 6 ಸ್ಥಾನಗಳನ್ನು ಪಡೆದ ಗುರಿಕಾರರು ಮಾತ್ರ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದರು.
ದೆಹಲಿಯಲ್ಲಿ ನಡೆದ 2010ರ ಕಾಮನ್ವೆಲ್ತ್ ಕೂಟದಲ್ಲಿ ಹರ್ಪ್ರೀತ್ ಸಿಂಗ್ ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು. 25 ಮೀ. ಸೆಂಟರ್ ಫೈರ್ ಪಿಸ್ತೂಲ್ ಸಿಂಗಲ್ಸ್ನಲ್ಲಿ ಹಾಗೂ 25 ಮೀ. ಸೆಂಟರ್ ಫೈರ್ ಪಿಸ್ತೂಲ್ ಜೋಡಿ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದರು. ಆದರೆ, ಇಲ್ಲಿ ಚಿನ್ನದ ಪದಕಕ್ಕೆ ಗರು ಇಡುವಲ್ಲಿ ವಿಫಲರಾದರು.
ಆಸ್ಟ್ರೇಲಿಯಾದ ಡೇವಿಡ್ ಡೆ. ಚಾಪ್ಮನ್ ಚಿನ್ನ ಹಾಗೂ ಕೆನಡಾದ ಮೆಟೋಡಿ ಐಗೋರೋವ್ ಕಂಚಿನ ಪದಕ ಜಯಿಸಿದರು.
ಮಾನವ್ಜೀತ್ಗೆ ಕಂಚು
ಗ್ಲಾಸ್ಗೋ: ಅನುಭವಿ ಗುರಿಕಾರ ಮಾನವ್ಜೀತ್ ಸಿಂಗ್ ಸಂಧು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಮಂಗಳವಾರ ನಡೆದ ಪುರುಷರ ಟ್ರ್ಯಾಪ್ ಸ್ಪರ್ಧೆಯಲ್ಲಿ ಮಾನವ್ಜೀತ್, ಕಂಚಿನ ಪದಕ್ಕಾಗಿ ನಡೆದ ಪೈಪೋಟಿಯಲ್ಲಿ ಆಸ್ಟ್ರೇಲಿಯಾದ ಮೈಕೆಲ್ ಡೈಮಂಡ್ ಅವರನ್ನು ಪರಾಭವಗೊಳಿಸಿ ಈ ಸಾಧನೆ ಮಾಡಿದರು. ಆದರೆ, ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಶೂಟರ್ ಮನ್ಶೇರ್ ಸಿಂಗ್ 6ನೇ ಸ್ಥಾನಕ್ಕೆ ತೃಪ್ತಿ ಹೊಂದಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


