ಕ್ರೀಡೆ

ಫೈನಲ್‌ಗೆ ವಿಕಾಸ್, ಸಹನಾ

Published On :

ಗ್ಲಾಸ್ಗೋ: ಗಮನಾರ್ಹ ಪ್ರದರ್ಶನ ನೀಡಿದ ಭಾರತದ ವಿಕಾಸ್ ಗೌಡ ಪುರುಷರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇನ್ನು ಸಹನಾ ನಾಗರಾಜ್ ಅವರು ಮಹಿಳೆಯರ ಎತ್ತರ ಜಿಗಿತ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ವಿಕಾಸ್ ಗೌಡ, ಬುಧವಾರ ನಡೆದ ಹೀಟ್ಸ್‌ನ ಮೊದಲ ಯತ್ನದಲ್ಲಿ 64.32 ಮೀಟರ್ ಅಂತರ ಎಸೆಯುವ ಮೂಲಕ ಮೊದಲ ಸ್ಥಾನ ಗಿಟ್ಟಿಸಿದರೆ, 61.91 ದೂರ ಎಸೆದ ಸಿರ್ಪಸ್‌ನ ಅಪಾಸ್ಟೋಲೊಸ್ ಪಾರೆಲ್ಲೀಸ್ ಅವರು ದ್ವಿತೀಯ ಸ್ಥಾನ ಪಡೆದರು. ಇನ್ನು 61.08 ಮೀಟರ್ ದೂರ ಎಸೆದ ಜಮೈಕಾದ ಚಾದ್ ರೈಟ್ ಮೂರನೇ ಸ್ಥಾನ ಗಿಟ್ಟಿಸಿದರು. 2010ರ ಡೆಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿಕಾಸ್ ಗೌಡ ಅವರು, ಬೆಳ್ಳಿ ಪದಕ ಗೆದ್ದುಕೊಂಡಿದ್ದರು. 66.28 ಮೀಟರ್ ದೂರ ಎಸೆದಿರುವುದು ವಿಕಾಸ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಇನ್ನು ಮಹಿಳೆಯರ ಎತ್ತರ ಜಿಗಿತದ ಹೀಟ್ಸ್‌ನ 4ನೇ ಯತ್ನದಲ್ಲಿ ಸಹನಾ ನಾಗರಾಜ್ ಅವರು, 1.81 ಮೀಟರ್ ಎತ್ತರ ಜಿಗಿಯುವ ಮೂಲಕ 7ನೇ ಸ್ಥಾನ ಪಡೆದು ಅಂತಿಮ ಸುತ್ತಿಗೆ ಅರ್ಹತೆ ಪಡೆದುಕೊಂಡರು. 1.85 ಮೀಟರ್ ಎತ್ತರ ಜಿಗಿದ 6 ಸ್ಪರ್ಧಿಗಳು ಸಹನಾ ವಿಭಾಗದಲ್ಲಿ ಜಂಟಿ ಅಗ್ರ ಸ್ಥಾನ ಹಂಚಿಕೊಂಡರೆ, ಮತ್ತೊಂದು ಗುಂಪಿನಲ್ಲಿ ಸಹ 1.85 ಮೀಟರ್ ಎತ್ತರ ಜಿಗಿದ ಇತರ ನಾಲ್ವರು ಅಗ್ರಸ್ಥಾನ ಪಡೆದರು. 1.89 ಮೀಟರ್ ಎತ್ತರ ಜಿಗಿದಿರುವುದು ಸಹನಾ ನಾಗರಾಜ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಏತನ್ಮಧ್ಯೆ, 6.11 ಜಿಗಿದ ಮಯೂಖಾ ಜಾನಿ ಅವರು, ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವೈಫಲ್ಯ ಕಂಡರು. ಪುರುಷರ ಹ್ಯಾಮರ್ ಥ್ರೋ ವಿಭಾಗದಲ್ಲಿ ಭಾರತದ ನಾರಾಯಣ ಸಿಂಗ್‌ಗೆ 8ನೇ ಸ್ಥಾನ ದೊರಕಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.