ಕ್ರೀಡೆ

ಮೇಲೆ ಸಹಜ ನಿರೀಕ್ಷೆ

ಮೇಲೆ ಸಹಜ ನಿರೀಕ್ಷೆ
Published On :

ಕಳೆದ 2010ರ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಸ್ಪೇನ್ ಮತ್ತು ಹಾಲೆಂಡ್ ಈ ಬಾರಿ ಒಂದೇ ಗುಂಪಿನಲ್ಲಿವೆ. 'ಬಿ' ಗುಂಪಿನಲ್ಲಿರುವ ಈ ಎರಡೂ ತಂಡಗಳು ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡು ಮುಂದಿನ ಹಂತಕ್ಕೆ ತೇರ್ಗಡೆ ಹೊಂದುವುದು ಬಹುತೇಕ ಖಚಿತವಾಗಿದೆ. ಕಳೆದ ವಿಶ್ವಕಪ್ ಪ್ರಶಸ್ತಿ ಸಮರದಲ್ಲಿ ಹಾಲೆಂಡ್ ವಿರುದ್ಧ ಅಭೂತಪೂರ್ವ ಜಯ ದಾಖಲಿಸಿದ್ದ ಸ್ಪೇನ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಕೈಯಲ್ಲಿದ ಅವಕಾಶಗಳನ್ನು ಕೈಚೆಲ್ಲಿದ್ದ ಹಾಲೆಂಡ್ ರನ್ನರ್‌ಅಪ್‌ಗೆ ಸಮಾಧಾನಗೊಂಡಿತ್ತು. ಆದರೆ, ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಸ್ಪೇನ್ ಮತ್ತು ಹಾಲೆಂಡ್ ಮೇಲೆ ಗುಂಪು ಸೆಣಸಿನಲ್ಲಿ ಸಹಜವಾದ ನಿರೀಕ್ಷೆ ಇಟ್ಟುಕೊಳ್ಳಲಾಗಾಗಿದೆ. ಆದರೆ, ಇದೇ ಗುಂಪಿನ ಮತ್ತೆರಡು ತಂಡಗಳಾದ ಆಸ್ಟ್ರೇಲಿಯಾ, ಚಿಲಿ ಕೂಡ ಸಮರ್ಥ ಹೋರಾಟ ನಡೆಸುವ ಭರವಸೆ ಇಟ್ಟುಕೊಂಡಿವೆ. ಹಾಗಾಗಿ, ಈ ತಂಡಗಳನ್ನು ಕಡೆಗಣಿಸಲಿಕ್ಕಾಗದು.

ಹಾಲೆಂಡ್
ಕೋಚ್:     ಲೂಯಿಸ್ ವ್ಯಾನ್ ಗಾಲ್
ಸ್ಟಾರ್ ಆಟಗಾರ:     ರಾಬಿನ್ ವ್ಯಾನ್ ಪರ್ಸಿ
ಶ್ರೇಷ್ಠ ಪ್ರದರ್ಶನ:     -1974, 1978, 2010ರಲ್ಲಿ ರನ್ನರ್ಸ್ ಅಪ್
-ವ್ಯಾನ್ ಗಾಲ್ ಅವರು 2002ರ ಪಂದ್ಯಾವಳಿಯಲ್ಲಿ ಕಂಡ ವೈಫಲ್ಯಗಳನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡಿದ್ದಾರೆ.
-ಅರ್ಹತಾ ಪಂದ್ಯಾವಳಿಯಲ್ಲಿ ನೀಡಿದ ಪ್ರದರ್ಶನ ಗಮನಾರ್ಹವಾಗಿತ್ತು.
-ಅಲ್ಲದೆ 2012ರ ಯೂರೋ ಫುಟ್ಬಾಲ್ ಪಂದ್ಯಾವಳಿಯಲ್ಲಿ ನೀಡಿದ ಅದ್ಭುತ ಪ್ರದರ್ಶನ ಇನ್ನೂ ಹಸಿರಾಗಿದೆ.
-ಅಹಂಕಾರವನ್ನು ಬದಿಗಿಟ್ಟರೆ, ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ತಂಡ ಇದಾಗಿದೆ.

ಸ್ಪೇನ್
ಕೋಚ್:     ವಿಸೆಂಟ್ ಡೆಲ್ ಬಾಸ್ಕ್
ಸ್ಟಾರ್ ಆಟಗಾರ:     ಆ್ಯಂಡ್ರೆಸ್ ಇನಿಯಸ್ಟಾ
ಶ್ರೇಷ್ಠ ಪ್ರದರ್ಶನ:     -2010ರ ಚಾಂಪಿಯನ್
- ದೇಶದ ಫುಟ್ಬಾಲ್ ಇತಿಹಾಸದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದ ಸ್ಪೇನ್ 2010ರಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು.
- ಹೀಗಾಗಿ, ಈಗ ಸತತ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ದಾಖಲೆಯನ್ನು ಬರೆಯುವ ಸುವರ್ಣಾವಕಾಶವನ್ನು ಅದು ಹೊಂದಿದೆ.
- ಆದರೆ, ಸ್ಪೇನ್ ಆಟಗಾರರ ಪ್ರತಿಭೆಯನ್ನು ಹಗುರವಾಗಿ ಪರಿಗಣಿಸಲಾಗಿದೆ.
- ರಾಬರ್ಟೊ ಸೊಲ್ಡಾಡೊ, ಅಲ್ವಾರೊ ನೆಗ್ರೆಡೋ, ಜೀಸಸ್ ನಾವಾಸ್ ಹಾಗೂ ಮಿಚು ಅವರು ಹೊಸ ಭರವಸೆಯಾಗಿದ್ದಾರೆ.
- ಇನಿಯಸ್ಟಾ, ಡೇವಿಡ್ ಸಿಲ್ವಾ ಹಾಗೂ ಜಾವಿ ತಂಡದ ಪ್ರಮುಖ ಆಟಗಾರರು ಎನಿಸಿದ್ದಾರೆ.

ಚಿಲಿ
ಕೋಚ್:     ಜಾರ್ಜ್ ಸಾಂಪೋಲಿ
ಸ್ಟಾರ್ ಆಟಗಾರ:     ಅಲೆಕ್ಸೀಸ್ ಸ್ಯಾಂಚೆಜ್
ಶ್ರೇಷ್ಠ ಪ್ರದರ್ಶನ:     -1992ರಲ್ಲಿ ಮೂರನೇ ಸ್ಥಾನ
- ಕ್ಲೌಡಿಯೋ ಬ್ರಾವೋ, ಪಬ್ಲೋ ಕಾಂಟ್ರೆರಾಸ್ ಹಾಗೂ ಜಾರ್ಜ್ ವಾಲ್ಡಿವಿಯಾ ಅವರಂತಹ ಅನುಭವಿ ಆಟಗಾರರನ್ನು ಹೊಂದಿದೆ.
- ಇನ್ನು ಬಾರ್ಸಿಲೋನಾ ಮುನ್ನಡೆ ಆಟಗಾರ ಅಲೆಕ್ಸಿಯಾಸ್ ಸಾಂಚೆಜ್ ಹಾಗೂ ಮಟಿಯಾಸ್ ಫೆರ್ನಾಂಡೆಜ್ ಯುವ ಆಟಗಾರರು ಎನಿಸಿದ್ದಾರೆ.
-ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿರುವ ಚಿಲಿ ಉತ್ತಮ ಪ್ರದರ್ಶನ ನ ನೀಡುವ ಸಾಮರ್ಥ್ಯ ಹೊಂದಿದೆ.

ಆಸ್ಟ್ರೇಲಿಯಾ    
ಕೋಚ್:     ಆ್ಯಂಜೆ ಪೊಸೆಕೊಗ್ಲು
ಸ್ಟಾರ್ ಆಟಗಾರ:     ರಾಬೀ ಕ್ರೂಸ್
ಶ್ರೇಷ್ಠ ಪ್ರದರ್ಶನ:     - 2006ರಲ್ಲಿ ಅಂತಿಮ 16ರ ಘಟ್ಟ ಪ್ರವೇಶ
- ಏಷ್ಯನ್ ರಾಷ್ಟ್ರಗಳೊಂದಿಗೆ ಸೆಣಸುವ ಮೂಲಕ ಅರ್ಹತೆ ಗಿಟ್ಟಿಸಿದ ಆಸ್ಟ್ರೇಲಿಯಾ.
- ಆದರೆ, ಕೆಲ ಸೌಹಾರ್ದ ಪಂದ್ಯಗಳಲ್ಲಿ ಕಂಡ ಫಲಿತಾಂಶ ಅಷ್ಟೊಂದು ಗಮನಸೆಳೆಯುಂತಿರಲಿಲ್ಲ.
- ಆದಾಗ್ಯೂ ಪಂದ್ಯಾವಳಿಯಲ್ಲಿ ಮಿಂಚುವ ಭರವಸೆನ್ನುಟ್ಟುಕೊಂಡು ತಂಡ ಅಂಗಣಕ್ಕಿಳಿಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.