ಕ್ರೀಡೆ

ಗೋಲ್ಡನ್ ಬೂಟ್

Published On :

ಗೋಲ್ಡನ್ ಶೂ ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರನು ಪಡೆಯಲು ಹಂಬಲಿಸುವ ಗೌರವ. ಫಿಫಾ ವಿಶ್ವಕಪ್ ಪಂದ್ಯಾವಳಿ ಆರಂಭವಾದಾಗಲಿಂದಲೂ ಪ್ರತಿ ಬಾರಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರನಿಗೆ ಗೋಲ್ಡನ್ ಬೂಟ್ ನೀಡಲಾಗುತ್ತಿದ್ದು, 19 ವಿಶ್ವಕಪ್ ಪಂದ್ಯಾವಳಿಯಲ್ಲಿ ಐದು ಬಾರಿ ಜರ್ಮನಿ ತಂಡದ ಆಟಗಾರರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಗರಿಷ್ಠ ಸಾಧನೆಯಾಗಿದೆ. ಅಲ್ಲದೆ ಗೋಲ್ಡನ್ ಬೂಟ್ ಜತೆಗೆ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿಎರಡು ಹಾಗೂ ಮೂರನೇ ಸ್ಥಾನ ಪಡೆದವರಿಗೆ ಕ್ರಮವಾಗಿ ಸಿಲ್ವರ್ ಹಾಗೂ ಬ್ರಾನ್ಸ್ ಬೂಟ್ ನೀಡಲಾಗುವುದು.


ಗೋಲ್ಡನ್ ಬಾಲ್



ಗೋಲ್ಡನ್ ಬಾಲ್ ಇದು ಫಿಫಾ ವಿಶ್ವಕಪ್ನಲ್ಲಿ ನೀಡುವ ಮತ್ತೊಂದು ಪ್ರಮುಖ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಫಿಫಾ ತಾತಂತ್ರಿಕ ಸಮಿತಿ ಮಾದ್ಯಮಗಳ ಮೂಲಕ ಅಭಿಮಾನಿಗಳಿಂದ ಮತವನ್ನು ಕಲೆಹಾಕಿ ಹೆಚ್ಚು ಮತ ಪಡೆಯುವ ಆಟಗಾರನಿಗೆ ಈ ಪ್ರಶಸ್ತಿ ನೀಡಲಾಗುವುದು. ಇದುವರೆಗೂ ಬ್ರೆಜಿಲ್ನ ಏಳು ಆಟಗಾರರು ಈ ಪ್ರಶಸ್ತಿ ಪಡೆದಿದ್ದಾರೆ. ಇದರ ಜತೆಗೆ ಎರಡನೇ ಹಾಗೂ ಮೂರನೇ ಸ್ಥಾನ ಪಡೆದವರಿಗೆ ಸಿಲ್ವರ್ ಹಾಗೂ ಬ್ರಾನ್ಸ್ ಬಾಲ್ ನೀಡಲಾಗುವುದು.


ಗೋಲ್ಡನ್ ಗ್ಲೌ



ಆರಂಭಿಕ ಆವೃತ್ತಿಯಿಂದಲೂ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ, ್ತ್ಯುತ್ತಮ ಪ್ರದರ್ಶನ ನೀಡಿದ ಗೋಲ್ಕೀಪರ್ಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 1990ರ ವರೆಗೆ ಈ ಪ್ರಶಸ್ತಿಗೆ ಯಾವುದೇ ಹೆಸರು ನೀಡಿರಲಿಲ್ಲ. ನಂತರ 1994ರಿಂದ 2006ರವರೆಗೆ ಈ ಪ್ರಸಸ್ತಿಯನ್ನು ಸೋವಿಯತ್ನ ಖ್ಯಾತ ಗೋಲ್ಕೀಪರ್ ಲೆವ್ ಯಾಶಿನ್ ಅವರ ನೆನಪಿನಲ್ಲಿ ಯಾಶಿನ್ ಅವಾರ್ಡ್ ಎಂದು ನೀಡಲಾಗುತ್ತಿತ್ತು. ನಂತರ 2010ರಿಂದ ಈ ಪ್ರಶಸ್ತಿಯನ್ನು ಗೋಲ್ಡನ್ ಗ್ಲೌ ಎಂದು ಕರೆಯಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.