ಕ್ರೀಡೆ

ಒಂದೇ ಸೂರಿನಡಿ ಮೂವರು ಚಾಂಪಿಯನ್ನರು

ಒಂದೇ ಸೂರಿನಡಿ ಮೂವರು ಚಾಂಪಿಯನ್ನರು
Published On :

ಈ ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಧರಿಸಿದ ಮೂರು ಮಾಜಿ ತಂಡಗಳನ್ನ ಹೊಂದಿರುವ ಬಲಾಢ್ಯ ಗುಂಪೆಂದರೆ ಅದು 'ಡಿ' ಗುಂಪು. ಇಟಲಿ, ಉರುಗ್ವೆ ಹಾಗೂ ಇಂಗ್ಲೆಂಡ್ ಈ ಗುಂಪಿನಲ್ಲಿರುವ ಮೂರು ಮಾಜಿ ಚಾಂಪಿಯನ್ ತಂಡಗಳಾಗಿವೆ. ಇನ್ನು ಕೋಸ್ಟರಿಕಾ ಗುಂಪಿನ ನಾಲ್ಕನೇ ತಂಡವಾಗಿದೆ.
ಬಲಿಷ್ಠ ಇಟಲಿ ತಂಡ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಫೇವರಿಟ್ ತಂಡವೆನಿಸಿದೆ. ಅಲ್ಲದೆ, ಬ್ರೆಜಿಲ್ ನಂತರ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ತಂಡ ಇಟಲಿ. ಬ್ರೆಜಿಲ್ 5 ಬಾರಿ ವಿಶ್ವಕಪ್ ಗೆದ್ದರೆ, ಇಟಲಿ ನಾಲ್ಕು ಬಾರಿ ವಿಶ್ವಕಪ್ ಗೆದ್ದುಕೊಂಡಿದೆ.
2010ರಲ್ಲಿ ಹಾಲಿ ಚಾಂಪಿಯನ್ ಹೆಗ್ಗಳಿಕೆಯೊಂದಿಗೆ ಕಣಕ್ಕಿಳಿದಿದ್ದ ಇಟಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿ ಅಚ್ಚರಿ ಮೂಡಿಸಿತ್ತು. ಸ್ಲೊವಾಕಿಯಾ, ಪರಾಗ್ವೆ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಹೊಂದಿದ್ದ ತನ್ನ ಗುಂಪಿನಲ್ಲಿ ಇಟಲಿ ಕೊನೆಯ ಸ್ಥಾನ ಪಡೆದಿತ್ತು. ಮೊದಲ ಬಾರಿಗೆ ವಿಶ್ವಕಪ್ ಫೈನಲ್ಸ್ನಲ್ಲಿ ಇಟಲಿ ತಂಡಕ್ಕೆ ಒಂದೂ ಪಂದ್ಯ ಗೆಲ್ಲಲಾಗಿರಲಿಲ್ಲ. ಅಲ್ಲದೆ, ವಿಶ್ವಕಪ್ ಇತಿಹಾಸದಲ್ಲಿ ಹಾಲಿ ಚಾಂಪಿಯನ್ ಆಗಿದ್ದುಕೊಂಡು ಮೊದಲ  ಸುತ್ತಿನಲ್ಲೇ ನಿರ್ಗಮಿಸಿದ ಒಟ್ಟಾರೆ ಮೂರನೇ ತಂಡ ಎಂಬ ಅಪಖ್ಯಾತಿಗೂ ಅದು ಪಾತ್ರವಾಗಿತ್ತು. ಇಂಗ್ಲೆಂಡ್ ಮತ್ತು ಉರುಗ್ವೆ ಹಾಗೂ ಕೋಸ್ಟರಿಕಾ ಕೂಡ ಮೊದಲೆರಡು ಸ್ಥಾನ ಪಡೆಯಲು ತುದಿಗಾಲಲ್ಲಿ ನಿಂತಿವೆ. ಇಂಗ್ಲೆಂಡ್ ಮತ್ತು ಇಟಲಿ ಗುಂಪಿನ ಫೇವರಿಟ್ ಎನಿಸಿದ್ದರೂ, ಉರುಗ್ವೆ ಮತ್ತು ಕೋಸ್ಟರಿಕಾವನ್ನು ಕಡೆಗಣಿಸುವಂತಿಲ್ಲ.


ಕೋಸ್ಟ ರಿಕಾ
ಕೋಚ್: ಜಾರ್ಜ್ ಲೂಯಿಸ್ ಪಿಂಟೋ
ಸ್ಟಾರ್ ಆಟಗಾರ: ಬ್ರಯಾನ್ ರೂಯಿಜ್
ಶ್ರೇಷ್ಠ ಪ್ರದರ್ಶನ: 1990ರಲ್ಲಿ ಅಂತಿಮ 16ರ ಘಟ್ಟ ಪ್ರವೇಶಿಸಿದ್ದು.
4ಕಷ್ಟಪಟ್ಟು ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿರುವ ಕೋಸ್ಟ ರಿಕಾ ಉತ್ತಮ ಆಟಗಾರರನ್ನೇ ಹೊಂದಿದೆ.
4ಆದರೆ, ಈ ಮಹತ್ವದ ಪಂದ್ಯಾವಳಿಯಲ್ಲಿ ಗುಂಪು ಹಂತ ಪ್ರವೇಶಿಸಿದರೆ, ಅದೇ ದೊಡ್ಡ ಸಾಧನೆಯಾಗಲಿದೆ.




ಉರುಗ್ವೆ
ಕೋಚ್: ಆಸ್ಕರ್ ವಾಷಿಂಗ್ಟನ್ ಟಾಬರೆಜ್
ಸ್ಟಾರ್ ಆಟಗಾರ: ಎಡಿನ್ಸನ್ ಕವಾನಿ
ಶ್ರೇಷ್ಠ ಪ್ರದರ್ಶನ: 1930, 1950ರಲ್ಲಿ ಚಾಂಪಿಯನ್.
4ಕೋಪಾ ಅಮೆರಿಕ ಟ್ರೋಫಿ ಗೆದ್ದ ಉರುಗ್ವೆ ಅರ್ಹತಾ ಪಂದ್ಯಾವಳಿಯಲ್ಲಿ ಪರದಾಡಿತ್ತು.
4ಆಗ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದ ನಂತರ, ಪ್ಲೇ ಆಫ್ ಪಂದ್ಯದಲ್ಲಿ ಜೋರ್ಡಾನ್ ವಿರುದ್ಧ ಜಯ ಸಾಧಿಸಬೇಕಾಗಿತ್ತು.
4ಅಂತಿಮವಾಗಿ ಜೋರ್ಡಾನ್ ಗೆದ್ದು ದಕ್ಷಿಣ ಆಮೆರಿಕ ಅರ್ಹತಾ ಪಂದ್ಯಾವಳಿಯಲ್ಲಿ ವಿಶ್ವಕಪ್ಗೆ ಪ್ರವೇಶ ಪಡೆದಿತ್ತು.
4ಕವಾನಿ ಮತ್ತು ಲೂಯಿಸ್ ಸೂರೆಜ್ ಅವರಂತಹ ಬಲಿಷ್ಠ ಆಟಗಾರರನ್ನು ಹೊಂದಿರುವ ಉರುಗ್ವೆ ತಕ್ಕ ಪ್ರದರ್ಶನ ನೀಡುವ ಭರವಸೆ ಹೊಂದಿದೆ.
4ಈ ಹಿಂದೆ 1950ರಲ್ಲಿ ಬ್ರೆಜಿಲ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದ ಉರುಗ್ವೆ ಈಗ ಮತ್ತೆ 50ರ ದಶಕದ ವೈಭವ ಮರುಕಳಿಸುವ ಕನಸು ಕಾಣುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.