ಕ್ರೀಡೆ

ಎಂಇಜಿಗೆ ಸೋತ ಜವಹಾರ್

Published On :

ಬೆಂಗಳೂರು: ಅತ್ಯುತ್ತಮ ಪ್ರದರ್ಶನ ತೋರಿದ ಎಂಇಜಿ ತಂಡದ ಆಟಗಾರರು ಬೆಂಗಳೂರು ಸೂಪರ್ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಜವಹಾರ್ ಯೂನಿಯನ್ ತಂಡವನ್ನು 3-0 ಗೋಲುಗಳ ಅಂತರದಿಂದ ಪರಾಭವಗೊಳಿಸಿದರು.ಎಂಇಜಿ ತಂಡದ ಪರ ಗಿರೀಶ್ ವಿ.ಕೆ 66 ಮತ್ತು 70ನೇ ನಿಮಿಷದಲ್ಲಿ ಗೋಲು ದಾಖಲಿಸಿ, ತಂಡಕ್ಕೆ 2-0 ಅಂತರದ ಮುನ್ನಡೆ ತಂದುಕೊಟ್ಟರು.
 ನಂತರ ಪಂದ್ಯದ ಕೊನೆ ಘಟ್ಟದ 89ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಗ್ಯಾಬ್ರಿಯಲ್ ತಂಡಕ್ಕೆ 3-0 ಅಂತರದ ಮುನ್ನಡೆ ತಂದುಕೊಟ್ಟರು. ಆದರೆ, ಜವಹಾರ್ ಯೂನಿಯನ್ ತಂಡದ ಪರ ಯಾವುದೇ ಆಟಗಾರರು ಗೋಲು ದಾಖಲಿಸಲಿಲ್ಲ.
ಇನ್ನು 'ಎ' ಡಿವಿಷನ್‌ನಲ್ಲಿ ಶನಿವಾರವೇ ನಡೆದ ಪಂದ್ಯದಲ್ಲಿ ಬೆಂಗಳೂರು ಇಂಡೆಪೆಂಡೆಂಟ್ಸ್ ತಂಡ ಪೊಸ್ಟಲ್ ಡಿಪಾರ್ಟ್‌ಮೆಂಟ್ ವಿರುದ್ಧ 2-0 ಗೋಲುಗಳ ಅಂತರದಿಂದ ಜಯ ಕಂಡಿತು.
ಇಂಡೆಪೆಂಡೆಂಟ್ ತಂಡದ ಪರ ಪಂದ್ಯದ 13ನೇ ನಿಮಿಷದಲ್ಲಿ ಅರುಣ್ ಗೋಲು ದಾಖಲಿಸಿದರೆ, 61ನೇ ನಿಮಿಷದಲ್ಲಿ ಶಿವಕುಮಾರ್ ಗೋಲು ದಾಖಲಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.