ಕ್ರೀಡೆ

ಬ್ಯಾಕ್ ಕಿಕ್- 1994

Published On :

ಬ್ರೆಜಿಲ್‌ಗೆ ಐತಿಹಾಸಿಕ ಗೆಲವು


ಅಮೆರಿಕಾದಲ್ಲಿ ನಡೆದ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಮತ್ತೆ ತಮ್ಮ ಅಧಿಪತ್ಯ ಸ್ಥಾಪಿಸಿದ ಬ್ರೆಜಿಲ್ 4ನೇ ಬಾರಿಗೆ ಚಾಂಪಿಯನ್ ಕಿರೀಟವನ್ನು ಧರಿಸಿ, ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡವಾಗಿ ಹೊರಹೊಮ್ಮಿತು. ಇಟಲಿ ವಿರುದ್ಧದ ಅಂತಿಮ ಸುತ್ತಿನ ಕಾದಾಟದಲ್ಲಿ 3-1 ಅಂತರದ ಮುನ್ನಡೆ ಕಂಡುಕೊಂಡ ಬ್ರೆಜಿಲ್ ಪ್ರಶಸ್ತಿಯನ್ನು ಬಾಚಿಕೊಂಡಿತು. ಬ್ರೆಜಿಲ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ರೊಮಾರಿಯೊ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು.  ಈ ವಿಶ್ವಕಪ್‌ನಲ್ಲಿ ಅಡಿಡಾಸ್ ಕ್ವೆಸ್ಟ್ರಾ ಎಂಬ ಹೆಸರಿನ ಚೆಂಡನ್ನು ಪಂದ್ಯಾವಳಿಯಲ್ಲಿ ಬಳಸಲಾಯಿತು. ಈ ವಿಶ್ವಕಪ್‌ಗೆ ಅಭಿಮಾನಿಗಳಿಂದ ಅಭೂತಪೂರ್ವ ಪ್ರಿತಿಕ್ರಿಯೆ ದೊರೆಕಿತು. ಪಂದ್ಯಾವಳಿಯನ್ನು 3,587,538 ಅಭಿಮಾನಿಗಳು ವೀಕ್ಷಿಸಿದ್ದು, ಪ್ರತಿ ಪಂದ್ಯಕ್ಕೆ 68.991 ಸರಾಸರಿ ಕಾಯ್ದಕೊಂಡಿದ್ದು, ಅದುವರೆಗಿನ ವಿಶ್ವಕಪ್‌ನಲ್ಲಿ ಗರಿಷ್ಠವಾಗಿತ್ತು. ಈ ಪಂದ್ಯಾವಳಿಯಲ್ಲಿ ಪ್ರಮುಖ ಸುತ್ತಿನಲ್ಲಿ ಒಟ್ಟು ತಂಡಗಳ ಭಾಗವಹಿಸುವಿಕೆಯನ್ನು 32ಕ್ಕೆ ಏರಿಸಲು ಚಂತನೆ ನಡೆಯಿತಾದರೂ, ಸಾಧ್ಯವಾಗಲಿಲ್ಲ.


1998


ಫ್ರಾನ್ಸ್ ಪರಾಕ್ರಮ


ಎರಡನೇ ಬಾರಿಗೆ ವಿಶ್ವಕಪ್ ಆತಿಥ್ಯ ವಹಿಸುವ ಅವಕಾಶ ಗಿಟ್ಟಿಸಿಕೊಂಡ ಫ್ರಾನ್ಸ್, ಟೂರ್ನಿಯಲ್ಲಿ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಟೂರ್ನಿಯ ಪ್ರಮುಖ ಹಂತದಲ್ಲಿ ತಂಡಗಳ ಭಾಗವಹಿಸುವಿಕೆಯನ್ನು 24 ತಂಡಗಳಿಂದ 32 ತಂಡಗಳಿಗೆ ಏರಿಕೆ ಮಾಡಲಾಯಿತು. ಇಲ್ಲಿ ತಂಡಗಳನ್ನು ಎಂಟು ಗುಂಪುಗಳನ್ನಾಗಿ ವಿಂಗಡಿಸಿದ್ದು, ಒಟ್ಟು 64 ಪಂದ್ಯಗಳನ್ನು ನಡೆಸಲಾಯಿತು. ಹಾಲಿ ಚಾಂಪಿಯನ್ ಬ್ರೆಜಿಲ್ ವಿರುದ್ಧ ಫೈನಲ್‌ನಲ್ಲಿ 3-0 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿದ ಫ್ರಾನ್ಸ್ ಪ್ರಶಸ್ತಿಗೆ ಮುತ್ತಿಕ್ಕಿತು. ಪಂದ್ಯಾವಳಿಯಲ್ಲಿ ಬ್ರೆಜಿಲ್ ಪರ ಅತ್ಯುತ್ತಮ ಪ್ರದರ್ಶನ ತೋರಿದ ರೊನಾಲ್ಡೊ ಅತ್ಯುತ್ತಮ ಆಟಗಾರ ಎಂಬ ಗೌರವ ಪಡೆದರು. ಈ ವಿಶ್ವಕಪ್‌ನಿಂದ ಇಎ ಸ್ಪೋರ್ಟ್ಸ್ ವಿಶ್ವಕಪ್ ಹೆಸರಿನಲ್ಲಿ ವಿಡಿಯೊ ಗೇಮ್ ಪ್ರಾರಂಭಿಸಲಾಯಿತು. ಈ ಟೂರ್ನಿಯಲ್ಲಿ ಅಡಿಡಾಸ್ ಟ್ರೈಕಲರ್ ಚೆಂಡನ್ನು ಅಧಿಕೃತ ಚೆಂಡಾಗಿ ಬಳಸಲಾಯಿತು. ಪಂದ್ಯಾವಳಿಯಲ್ಲಿ ತಂಡಗಳ ಹಾಗೂ ಪಂದ್ಯಗಳ ಸಂಖ್ಯೆ ಹೆಚ್ಚಾದ ಪರಿಣಾಮ 171 ಗೋಲುಗಳು ದಾಖಲಾದವು.



2002 ಮತ್ತೆ ಬ್ರೆಜಿಲ್ ಆಧಿಪತ್ಯ


ಮೊದಲ ಬಾರಿಗೆ ಫಿಫಾ ವಿಶ್ವಕಪ್ ಪಂದ್ಯಾವಳಿಯನ್ನು ಏಷ್ಯಾ ರಾಷ್ಟ್ರದಲ್ಲಿ ಆಯೋಜಿಸಿದ್ದು 2002ರಲ್ಲಿ. ಅಲ್ಲದೆ ದಕ್ಷಿಣ ಕೊರಿಯಾ ಹಾಗೂ ಜಪಾನ್ ರಾಷ್ಟ್ರಗಳು ಜಂಟಿಯಾಗಿ ಈ ಟೂರ್ನಿಯ ಅತಿಥ್ಯವಹಿಸಿದ್ದು ಮತ್ತೊಂದು ವಿಶೇಷ. ಅಲ್ಲದೆ ಈ ಟೂರ್ನಿಯನ್ನು 20 ನಗರಗಳಲ್ಲಿ ಆಯೋಜಿಸಲಾಗಿತ್ತು. ಟೂರ್ನಿಯ ಫೈನಲ್ ಪಂದ್ಯದಲ್ಲಿ ಬ್ರೆಜಿಲ್, ಜರ್ಮನಿ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿತು. ಈ ಮೂಲಕ 5ನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡು, ಅತಿ ಹೆಚ್ಚು ಬಾರಿ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪಂದ್ಯಾವಳಿಯಲ್ಲೂ ಮಿಂಚಿದ ರೊನಾಲ್ಡೊ 8 ಗೋಲು ದಾಖಲಿಸಿ ಗೋಲ್ಡನ್‌ಶೂ ಪಡೆದರೆ, ಜರ್ಮನಿಯ ಓಲಿವರ್ ಖಾನ್ ಅತ್ಯುತ್ತಮ ಆಟಗಾರ ಎಂಬ ಗೌರವ ಪಡೆದರು. ಈ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ವಿಶ್ವಕಪ್ ಟಿಕೆಟ್ ಬ್ಯೂರೊ ಟಿಕೆಟ್ ಮಾರಾಟ ಮಾಡುವ ಹಕ್ಕು ಪಡೆದಿತ್ತು. ಇಲ್ಲಿ ಕೆಲವು ಗೊಂದಲದ ಕಾರಣ ಆರಂಭಿಕ ಪಂದ್ಯದಲ್ಲಿ ಕ್ರೀಡಾಂಗಣ ಖಾಲಿ ಖಾಲಿಯಾಗಿತ್ತು. ನಂತರ ಸ್ಥಳೀಯ ಆಯೋಜಕರಿಗೆ ಇದರ ಹಕ್ಕು ನೀಡಲು ಫಿಫಾ ಅನುಮತಿ ನೀಡಿದ ನಂತರ, ಪಂದ್ಯಾವಳಿಗೆ ಹೆಚ್ಚಿನ ಅಭಿಮಾನಿಗಳು ಆಗಮಿಸಿದರು.




1930
ಈ ವರ್ಷ ನಡೆದ ಪಂದ್ಯಾವಳಿಯಲ್ಲಿ
ಅಮೆರಿಕದ ಬೆರ್ಟ್ ಪಾಟೆನಾಡೆ ಅವರು ಪರಾಗ್ವೆ ವಿರುದ್ಧ ಸತತ ಮೂರು ಗೋಲು ದಾಖಲಿಸಿದ್ದು ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್  ಸಾಧನೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.