ಕ್ರೀಡೆ

ಹೆಲಿಕಾಪ್ಟರ್ ಅಫಘಾತ: ಪರ್ನಾಂಡೊ ಸಾವು

Published On :

ಸಾವೋ ಪೊಲೊ: ಬ್ರೆಜಿಲ್ ಫುಟ್ಬಾಲ್ ತಂಡದ ಮಾಜಿ ಸ್ಟ್ರೈಕರ್ ಪರ್ನಾಂಡೊ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪರ್ನಾಂಡೊ ಎಂದೇ ಖ್ಯಾತರಾಗಿದ್ದ ಪರ್ನಾಂಡೊ ಲೂಸಿಯೋ ಡಾ ಕೋಸ್ಟಾ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಬ್ರೆಜಿಲ್ ಫುಟ್ಬಾಲ್ ತಂಡ ತಿಳಿಸಿದೆ.
ಶನಿವಾರ ಬೆಳಗಿನಜಾವ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃಪತಟ್ಟ ಐವರು ಪ್ರಯಾಣಿಕರಲ್ಲಿ 36 ವರ್ಷದ ಫರ್ನಾಂಡೊ ಸಹ ಒಬ್ಬರಾಗಿದ್ದಾರೆ ಎಂದು ತಂಡ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ಅಪಘಾತ ಉಂಟಾದ ನಂತರ ಪೊಲೀಸರು ಆಗಮಿಸಿದಾಗ ಪರ್ನಾಂಡೊ ಮಾತ್ರ ಜೀವಂತವಾಗಿದ್ದರು. ಆದರೆ, ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಅವರು ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಡಾ ಕೊಸ್ಟಾ ಅವರು ಅಂತಾರಾಷ್ಟ್ರೀಯ ಜನಪ್ರೀಯ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 2006ರಲ್ಲಿ ಅವರು ಬ್ರೆಜಿಲ್ ಫುಟ್ಬಾಲ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ಫಿಫಾ ಕ್ಲಬ್ ವಿಶ್ವಕಪ್, ಕೋಪಾ ಲಿಬೆರಟರ್ಸ್, ಲ್ಯಾಟಿನ್ ಅಮೆರಿಕ ದೊಡ್ಡ ಕ್ಲಬ್ನ ಪಂದ್ಯಾವಳಿಯಲ್ಲಿ ಬ್ರೆಜಿಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.