2006 ಇಟಲಿಗೆ 4ನೇ ಕಿರೀಟ
ತೀವ್ರ ಕುತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಫ್ರಾನ್ಸ್ ವಿರುದ್ಧ 5-3 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿದ ಇಟಲಿ ಪ್ರಶಸ್ತಿಯನ್ನು ಬಾಚಿಕೊಂಡಿತು. ಈ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆರು ಖಂಡಗಳಿಂದ ಒಟ್ಟು 198 ರಾಷ್ಟ್ರಗಳು ಭಾಗವಹಿಸಿದ್ದು, ಅದರಲ್ಲಿ 32 ತಂಡಗಳು ಪ್ರಮುಖ ಸುತ್ತಿಗೆ ಅರ್ಹತೆ ಪಡೆದವು. ಟೂರ್ನಿಯಲ್ಲಿ ಒಟ್ಟು 64 ಪಂದ್ಯಗಳು ನಡೆದು 147 ಗೋಲುಗಳು ದಾಖಲಾದವು. ಜರ್ಮನಿಯ ಮಿರೊಸ್ಲವ್ ಕ್ಲೊಸೆ 5 ಗೋಲು ದಾಖಲಿಸಿ ಹೆಚ್ಚು ಗೋಲು ಗಳಿಸಿದ ಆಟಗಾರನಾದರು. ಇನ್ನು ಫ್ರಾನ್ಸ್ನ ಜಿನೆಡಿನ್ ಜಿನಾಡೆ ಅತ್ಯುತ್ತಮ ಆಟಗಾರ ಎಂಬ ಗೌರವ ಪಡೆದರೆ, ಇಟಲಿಯ ಜಿಲುಗಿ ಬಫನ್ ಅತ್ಯುತ್ತಮ ಗೋಲ್ಕೀಪರ್ ಎಂದು ಆಯ್ಕೆಯಾದರು. ಈ ಪಂದ್ಯಾವಳಿಯಲ್ಲಿ 3,359,439 ಪ್ರೇಕ್ಷಕರು ಕ್ರೀಡಾಂಗಣಕ್ಕೆ ಅಗಮಿಸಿದ್ದು, ಪಂದ್ಯಾವಳಿಯ ಯಶಸ್ಸಿಗೆ ಸಾಕ್ಷಿಯಾಗಿತ್ತು.
2010 ಸ್ಪೇನ್ ಹೊಸ ಇತಿಹಾಸ
ವಿಶ್ವ ಫುಟ್ಬಾಲ್ನಲ್ಲಿ ಪ್ರಮುಖ ತಂಡಗಳಲ್ಲೊಂದಾಗಿದ್ದ ಸ್ಪೇನ್ ತಂಡ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, 2010ರಲ್ಲಿ. ಫೈನಲ್ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಿಸಿದ ಸ್ಪೇನ್ 1-0 ಅಂತರದಿಂದ ಮಣಿಸುವ ಮೂಲಕ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು. ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಈ ಟೂರ್ನಿಯಲ್ಲಿ ಉರುಗ್ವೆಯ ಡಿಗೊ ಫ್ಲೊರನ್, ಜರ್ಮನಿಯ ಥಾಮಸ್ ಮುಲ್ಲರ್, ಹಾಲೆಂಡ್ನ ವೆಸ್ಲೆ ಸ್ನಿಜ್ಡರ್, ಸ್ಪೇನ್ನ ಡೇವಿಡ್ ವಿಲ್ಲಾ ತಲಾ 5 ಗೋಲು ದಾಖಲಿಸಿದ್ದರು. ಇನ್ನು ಉರುಗ್ವೆಯ ಡಿಗೊ ಫ್ಲೊರನ್ ಅತ್ಯುತ್ತಮ ಆಟಗಾರ ಎಂಬ ಗೌರವ ಪಡೆದರು. ಸ್ಪೇನ್ನ ಐಕರ್ ಕ್ಯಾಸಿಲ್ಲಾಸ್ ಅತ್ಯುತ್ತಮ ಗೋಲ್ಕೀಪರ್ ಎನಿಸಿದರು. ಈ ಟೂರ್ನಿಯಲ್ಲಿ ಫಿಫಾದ 208 ಫುಟ್ಬಾಲ್ ರಾಷ್ಟ್ರಗಳಿಂದ 204 ರಾಷ್ಟ್ರೀಯ ತಂಡಗಳು ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದವು. ಇನ್ನು ಪಾಪ್ ಸಂಗೀತ ಗಾಯಕಿ ಶಕಿರಾ ಅವರ ವಕಾ ವಕಾ ವಿಶ್ವಕಪ್ ಗೀತೆ ವಿಶ್ವದ ಅಭಿಮಾನಿಗಳನ್ನು ರಂಜಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

