ಸದ್ದು ಮಾಡದ ಸರ್ದಾರ್ ಪಡೆ

ದಿ ಹೇಗ್ (ಹಾಲೆಂಡ್): ಪ್ರಸಕ್ತ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ನೀರಸ ಪ್ರದರ್ಶನ ಮುಂದುವರಿಸಿರುವ ಭಾರತ ತಂಡ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ.
ಸೋಮವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡ 0-4 ಅಂತರದಲ್ಲಿ ದಯನೀಯವಾಗಿ ಸೋಲುಂಡಿತು. ಈ ಮೂಲಕ ಪಂದ್ಯಾವಳಿಯಲ್ಲಿ ಕೇವಲ 1 ಗೆಲವಿನೊಂದಿಗೆ ಭಾರತ ತಂಡ ತನ್ನ ಅಭಿಯಾನ ಅಂತ್ಯಗೊಳಿಸಿದೆ.
ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಕೆಟ್ಟ ಆರಂಭ ಪಡೆದಿದ್ದ ಭಾರತ ತಂಡ, ಮೂರನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಡ್ರಾ ಸಾದಿಸುವ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ನಂತರ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿ, ತೃಪ್ತಿಪಟ್ಟಿತ್ತು. ಆದರೆ ಈ ಪಂದ್ಯದಲ್ಲಿ ಮತ್ತೆ ಪ್ರಬಲ ಎದುರಾಳಿ ಆಸೀಸ್ ವಿರುದ್ಧ ಬೃಹತ್ ಅಂತರದಲ್ಲಿ ಸೋಲುವ ಮೂಲಕ ಭಾರತ ನಿರಾಸೆ ಮೂಡಿಸಿತು.
ಆರಂಭದಲ್ಲೇ ಭಾರತ ತಂಡದ ವಿರುದ್ಧ ಪರಾಕ್ರಮ ತೋರಿದ ಆಸ್ಟ್ರೇಲಿಯಾ ಮೊದಲಾರ್ಧದಲ್ಲೇ 4 ಗೋಲು ದಾಖಲಿಸಿ ಪಂದ್ಯದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.
ಪ್ರಾರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಕಾಂಗರೂ ಪಡೆ, 3ನೇ ನಿಮಿಷದಲ್ಲಿ ಕೀರನ್ ಗೊವರ್ಸ್ ಗಳಿಸಿದ ಗೋಲಿನಿಂದ ಅತ್ಯುತ್ತಮ ಆರಂಭ ಪಡೆಯಿತು. ನಂತರ 16ನೇ ನಿಮಿಷದಲ್ಲಿ ಕ್ರಿಸ್ ಸಿರಿಲ್ಲೊ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ತಂಡಕ್ಕೆ ಹೆಚ್ಚಿನ ಮುನ್ನಡೆ ತಂದುಕೊಟ್ಟರು.
20ನೇ ನಿಮಿಷದಲ್ಲಿ ಕಾಂಗರೂ ಪರ ಜೆರೆಮಿ ಹೇವರ್ಡ್ ಗೋಲು ದಾಖಲಿಸುವ ಮೂಲಕ, ಭಾರತೀಯರ ಮುಖದಲ್ಲಿ ಉತ್ಸಾಹ ಕುಗ್ಗುವಂತೆ ಮಾಡಿದರು. ಇದಾದ ಎರಡೇ ನಿಮಿಷದಲ್ಲಿ ಅಂದರೆ, 22ನೇ ನಿಮಿಷದಲ್ಲಿ ಮತ್ತೆ ಚಾಣಕ್ಷ ಪ್ರದರ್ಶನ ತೋರಿದ ಕ್ರಿಸ್ ಸಿರಿಲ್ಲೊ ತಮ್ಮ ಎರಡನೇ ಗೋಲು ದಾಖಲಿಸುವ ಮೂಲಕ ಪಂದ್ಯವನ್ನು ಬಹುತೇಕ ತಂಡದ ವಶಕ್ಕೆ ತೆಗೆದುಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


