ಕ್ರೀಡೆ

ಸಾರ್ವಜನಿಕರಿಗೆ ಕಡಿಮೆ ಟಿಕೆಟ್ ಲಭ್ಯ

Published On :

ವಿಶ್ವಕಪ್ ಉದ್ಘಾಟನೆ ಪಂದ್ಯಕ್ಕೆ ಟಿಕೆಟ್ಗೆ ಭಾರಿ ಬೇಡಿಕೆ ಬಂದಿದೆ. ಆದರೆ ಸಂಘಟನಾಕಾರರು ಕ್ರೀಡಾಂಗಣದ ಸಾಮರ್ಥ್ಯದ ಅರ್ಧಭಾಗದಷ್ಟು ಟಿಕೆಟ್ಗಳನ್ನು ಸಾರ್ವಜನಿಕರಿಗೆ ನೀಡದೇ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದಾರೆ. ಆತಿಥೇಯ ಬ್ರೆಜಿಲ್ ಮತ್ತು ಕ್ರೊವೇಷಿಯಾ ತಂಡಗಳ ನಡುವೆ ಸೌ ಪೊಲೊದಲ್ಲಿ ಕ್ರೀಡಾಂಗಣದಲ್ಲಿ ಉದ್ಘಾಟನೆ ಪಂದ್ಯ ನಡೆಯಲಿದ್ದು, ಒಟ್ಟಾರೆ 61,600 ಟಿಕೆಟ್ಗಳು ಲಭ್ಯ ಇವೆ. ಆದರೆ, ಈ ಪೈಕಿ ಸಾರ್ವಜನಿಕರಿಗೆ ಕೇವಲ 25,636 ಟಿಕೆಟ್ಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಇದು ಒಟ್ಟು ಟಿಕೆಟ್ಗಳ ಅರ್ಧದಷ್ಟು ಸಹ ಇಲ್ಲ. ಉಳಿದ ಟಿಕೆಟ್ಗಳನ್ನು ಹೆಚ್ಚಾಗಿ ವಾಣಿಜ್ಯ ಪಾಲುದಾರರಿಗೆ, ಪ್ರಸಾರಕರಿಗೆ, ಸ್ಥಳೀಯ ಸಂಘಟನಾಕಾರರಿಗೆ ಹಾಗೂ ವಾಸ್ತವ್ಯ ಕಲ್ಪಿಸಿದವರಿಗೆ ನೀಡಲಾಗುತ್ತದೆ. ಗಣ್ಯರು ಮತ್ತು ಪತ್ರಕರ್ತರಿಗೆ ತಲಾ 1,500ಕ್ಕೂ ಹೆಚ್ಚು ಟಿಕೆಟ್ಗಳನ್ನು ಮೀಸಲಿರಿಸಲಾಗಿದೆ ಎಂದು ಫುಟ್ಬಾಲ್ ಆಡಳಿತ ಮಂಡಳಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.