ಕ್ರೀಡೆ

ಹೊಸ ಮುಖಗಳ ನವ ಕೌಶಲ್ಯ

Published On :

ಈ ಬಾರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಹಲವು ದಿಗ್ಗಜರುಗಳು ಕಣಕ್ಕಿಳಿಯುತಿರುವುದು, ಟೂರ್ನಿಯ ಒಂದು ವಿಶೇಷವಾದರೆ, ನಿರೀಕ್ಷೆಗೂ ಮೀರಿ ತಮ್ಮ ಚುರುಕಿನ ಪ್ರದರ್ಶನದೊಂದಿಗೆ ಅಭಿಮಾನಿಗಳ ಗಮನ ಸೆಳೆಯುವ ಆಟಗಾರರ ಕಾದಾಟ ಮತ್ತೊಂದು ವಿಶೇಷ. ಈ ಯುವ ಆಟಗಾರರು ತಮ್ಮ ಕೌಶಲ್ಯವನ್ನು ವಿಶ್ವಕ್ಕೆ ಪರಿಚಯಿಸಲು ಉತ್ಸುಕರಾಗಿದ್ದು, ಯಾರು ಯಶ ಸಾಧಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕು.



ಥಿಬೌಟ್ ಕರ್ಟೊಸ್
ಚೆಲ್ಸಿ ಆಟಗಾರ ಕರ್ಟೊಸ್, ಗೋಲ್ಕೀಪರ್ ಆಗಿದ್ದರೂ ಇದುವರೆಗಿನ ಪ್ರದರ್ಶನ ಗಮನಾರ್ಹವಾಗಿದೆ. ಕಳೆದ ಮೂರು ಆವೃತ್ತಿಗಳಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ ತಂಡದ ಪರ ಆಡಿದ್ದ ಈತ 37 ಪಂದ್ಯಗಳಲ್ಲಿ 20 ಕ್ಲೀನ್ಶೀಟ್ ಪಡೆದಿದ್ದಾರೆ. ಅಲ್ಲದೆ ತಂಡ 18 ವರ್ಷಗಳ ನಂತರ ಲಾ ಲೀಗಾ ಚಾಂಪಿಯನ್ಶಿಪ್ ಅನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಚಾಂಪಿಯನ್ಸ್ ಲೀಗ್ನಲ್ಲಿ ಚೆಲ್ಸಿ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಈತನ ಪ್ರದರ್ಶನ ಕಂಡ ಫುಟ್ಬಾಲ್ ಪಂಡಿತರು, ಈತ ಭವಿಷ್ಯದ ಅತ್ಯುತ್ತಮ ಗೋಲ್ಕೀಪರ್ ಎಂದು ಅಭಿಪ್ರಾಯ ಪಟ್ಟಿದ್ದರು. ಹಾಗಾಗಿ ಬೆಲ್ಜಿಯಂ ತಂಡಕ್ಕೆ ಈತನ ಕಾಣಿಕೆ ಮಹತ್ವದ್ದಾಗಿದ್ದು, ಕರ್ಟೊಸ್ ಮೇಲೆ ಹೆಚ್ಚಿನ ನಿರೀಕ್ಷೆಗಳು ಮೂಡಿವೆ.


ಪೌಲ್ ಪೊಗ್ಬಾ
ವಿಶ್ವಕಪ್ನಲ್ಲಿ ಹೊಸ ಪ್ರತಿಭೆಯ ಸಾಲಿನಲ್ಲಿ ಕಂಡುಬರುವ ಮತ್ತೊಂದು ಹೆಸರು ಪೌಲ್ ಪೊಗ್ಬಾ. ಸರ್ ಅಲೆಕ್ಸ್ ಫರ್ಗ್ಯುಸನ್ ನೇತೃತ್ವದ ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿ ಹೆಚ್ಚು ಬೆಂಚ್ ಬಿಸಿ ಮಾಡಿ ಬೇಸತ್ತ ಈತ, ನಂತರ ಜುವೆಂಟಸ್ ತಂಡಕ್ಕೆ ಸೇರಿದ. ನಂತರ ಇಟಲಿಯನ್ ಚಾಂಪಿಯನ್ಶಿಪ್ನಲ್ಲಿ ಮನಮೋಹಕ ಆಟದಿಂದ ಎಲ್ಲರ ಕೇಂದ್ರ ಬಿಂದುವಾದರು. ಪೊಗ್ಬಾ, ಉಡಿನೆಸ್ ವಿರುದ್ಧ 40 ಗಜ ದೂರದಿಂದ ಗಳಿಸಿದ ಗೋಲು 2012/13ನೇ ಸಾಲಿನ ಅತ್ಯಂತ ಉತ್ತಮ ಗೋಲುಗಳಲ್ಲಿ ಒಂದಾಯಿತು. ಜುವಂಟಸ್ ತಂಡದ ಟ್ರಂಪ್ ಕಾರ್ಡ್ ಆಗಿದ್ದ ಈತ, ಫ್ರಾನ್ಸ್ ತಂಡಕ್ಕೂ ಆಸರೆಯಾಗಿ ನಿಂತರೆ ಅಚ್ಚರಿ ಪಡುವಂತಿಲ್ಲ.

ರಹೀಮ್ ಸ್ಟೆರ್ಲ್ಲಿಂಗ್
ಮೈದಾನದಲ್ಲಿ ಪಾದರಸದ ರೀತಿಯಲ್ಲಿ ಚುರುಕಿನ ಆಟ ಪ್ರದರ್ಶಿಸುವ ಈತನ ಮೇಲೆ ಹೆಚ್ಚು ನಿರೀಕ್ಷೆಗಳಿವೆ. ಮೂಲತಃ ಜಮೈಕದವರಾದರೂ, ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿರುವ ಸ್ಟೆರ್ಲ್ಲಿಂಗ್ ಈ ಬಾರಿಯ ಮತ್ತೊಬ್ಬ ಯುವ ಪ್ರತಿಭೆ. ಲಿವರ್ಪೂಲ್ ತಂಡ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ ಈತ, 9 ಗೋಲು ದಾಖಲಿಸಿ, 5 ಗೋಲಿಗೆ ನೆರವಾಗಿದ್ದರು. ಅಲ್ಲದೆ ಪಿಎಫ್ಎ ಯಂಗ್ ಪ್ಲೇಯರ್ ಆಫ್ ದ ಇಯರ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಥಿಯೊ ವಾಲ್ಕಾಟ್ ಅನುಪಸ್ಥಿತಿಯನ್ನು, ಸ್ಟೆರ್ಲ್ಲಿಂಗ್ ತಮ್ಮ ವೇಗದ ಕೌಶಲ್ಯದಿಂದ ತುಂಬುವ ನಿರೀಕ್ಷೆ ಇದೆ. ಅಲ್ಲದೆ ತಂಡ ಆಕ್ರಮಣಕಾರಿ ಪ್ರದರ್ಶನಕ್ಕೆ ಈತ ಪ್ರಮುಖ ಅಸ್ತ್ರವಾಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.