ಕ್ರೀಡೆ

ಕೆನಡಾದಲ್ಲಿ ರಿಕೈರ್ಡೋ ಫಸ್ಟ್

Published On :

ಮಾಂಟ್ರೆಯಲ್: ಕೆನಡಾ ಗ್ರ್ಯಾನ್ ಪ್ರಿಯಲ್ಲಿ ವೃತ್ತಿ ಜೀವನದ ಮೊತ್ತ ಮೊದಲ ಫಾರ್ಮುಲಾ ಒನ್ ಪ್ರಶಸ್ತಿ ಗೆದ್ದುಕೊಂಡ ರೆಡ್ಬುಲ್ ಚಾಲಕ ಡ್ಯಾನಿಯಲ್ ರಿಕೈರ್ಡೋ ಅವರು, ಋತುವಿನ ಆರಂಭದಿಂದಲೂ ಪಾರಮ್ಯ ಮೆರೆದಿದ್ದ ಮರ್ಸಿಡೀಸ್ ತಂಡಕ್ಕೆ ಕಡಿವಾಣ ಹಾಕಿದ್ದಾರೆ. ಚಾಂಪಿಯನ್ಶಿಪ್ನ ಅಗ್ರ ಚಾಲಕರಾದ ನಿಕೊ ರೋಸ್ಬರ್ಗ್ ಮತ್ತು ಅವರ ಸಹ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅವರು ರೇಸ್ ಅಂತ್ಯದಲ್ಲಿ ತಾಂತ್ರಿಕ ದೋಷ ಎದುರಿಸಿದ್ದು, 24 ವರ್ಷದ ಆಸ್ಟ್ರೇಲಿಯಾದ ಚಾಲಕನಿಗೆ ಅನುಕೂಲವಾಗಿ ಪರಿಣಮಿಸಿತು.
ಈ ಕಾರಣ ಬ್ರಿಟನ್ನ ಹ್ಯಾಮಿಲ್ಟನ್ ಅವರು ಅರ್ಧದಲ್ಲೇ ಸ್ಪರ್ಧೆಯಿಂದ ಹಿಂದೆ ಸರಿದರೆ, ಜರ್ಮನಿಯ ರೋಸ್ಬರ್ಗ್ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಆದರೆ, ಚಾಂಪಿಯನ್ಶಿಪ್ನಲ್ಲಿ ರೋಸ್ಬರ್ಗ್ ಅವರು  22 ಅಂಕಗಳಿಂದ ಮುನ್ನಡೆ ಕಂಡುಕೊಂಡಿದ್ದಾರೆ. ಅಂತಿಮ ಲ್ಯಾಪ್ನಲ್ಲಿ ಸಹರಾ ಫೋರ್ಸ್ ಇಂಡಿಯಾದ ಸೆರ್ಜಿಯೋ ಪೆರೆಜ್ ಮತ್ತು ವಿಲಿಯಮ್ಸ್ನ ಫೆಲಿಪೆ ಮಸ್ಸಾ ಅವರ ಕಾರುಗಳು ಭಾರೀ ವೇಗದಲ್ಲಿ ಡಿಕ್ಕಿ ಹೊಡೆದ ಘಟನೆ ನಡೆಯಿತು. ಇಬ್ಬರ ನಡುವೆ 240 ಕಿ.ಮೀ ವೇಗದಲ್ಲಿ ಅಪಘಾತ ಸಂಭವಿಸಿದರೂ, ಇಬ್ಬರೂ ಚಾಲಕರು ಗಂಭೀರವಾಗಿ ಗಾಯಗೊಂಡಿಲ್ಲ ಎನ್ನಲಾಗಿದೆ.
ಮೆಕ್ಲಾರೆನ್ ತಂಡದ ಜೆನ್ಸನ್ ಬಟನ್ ಅವರು 4ನೇ ಸ್ಥಾನ ಪಡೆದರೆ, ಸಹರಾ ಫೋರ್ಸ್ ಇಂಡಿಯಾದ ನಿಕೋ ಹಲ್ಕನ್ಬರ್ಗ್ ಅವರು 5ನೇ ಸ್ಥಾನ ಹಾಗೂ ಫೆರಾರಿಯ ಫೆರ್ನಾಂಡೋ ಅಲಾನ್ಸೋ 6ನೇ ಸ್ಥಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.