ಕ್ರೀಡೆ

ಚೆಸ್: ಜಂಟಿ 3ನೇ ಸ್ಥಾನದಲ್ಲಿ ಆನಂದ್

ಚೆಸ್: ಜಂಟಿ 3ನೇ ಸ್ಥಾನದಲ್ಲಿ ಆನಂದ್
Published On :

ದುಬೈ: ಐದು ಬಾರಿ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಉತ್ತಮ ಪ್ರದರ್ಶನ ತೋರುವ ಮೂಲಕ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಜಂಟಿ ಮೂರನೇ ಸ್ಥಾನ ಪಡೆದಿದ್ದು, ಪಂದ್ಯಾವಳಿಯಲ್ಲಿ ತಮ್ಮ ಹೋರಾಟವನ್ನು ಬಲ ಪಡಿಸಿಕೊಂಡಿದ್ದಾರೆ.
ಟೂರ್ನಿಯ ಉಪಾಂತ್ಯ ದಿನವಾದ ಬುಧವಾರ ಅತ್ಯುತ್ತಮ ಪ್ರದರ್ಶನ ನೀಡಿದ ಆನಂದ್, 3.5 ಅಂಕಗಳನ್ನು ಬಾಚಿಕೊಳ್ಳುವ ಮೂಲಕ ಪಂದ್ಯಾವಳಿಯಲ್ಲಿ ತಮ್ಮ ಸ್ಪರ್ಧೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಆನಂದ್ ಪೊಡಿಯಂ ಸ್ಥಾನ ಪಡೆಯಬೇಕಾದರೆ ಅಂತಿಮ ದಿನದಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲೇಬೇಕಾಗಿದೆ.
10 ಪಂದ್ಯಗಳಿಂದ ಒಟ್ಟು 7 ಅಂಕಗಳನ್ನು ದಾಖಲಿಸಿರುವ ಆನಂದ್, ಅಂತಿಮ ಪಂದ್ಯದಲ್ಲಿ ಪ್ರಬಲ ಹೋರಾಟ ನೀಡಲು ಯೋಜನೆ ರೂಪಿಸಿದ್ದಾರೆ. ಇನ್ನು ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅತ್ಯುತ್ತಮ ಆಟದೊಂದಿಗೆ 10 ಪಂದ್ಯಗಳಿಂದ 8 ಅಂಕ ದಾಖಲಿಸಿ ಏಕಾಂಗಿಯಾಗಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ.
ಕಾರ್ಲ್‌ಸನ್ ನಂತರದ ಸ್ಥಾನದಲ್ಲಿ ಅರ್ಮೇನಿಯಾದ ಲೆವೊನ್ ಆರೋನಿಯನ್ 7.5 ಅಂಕಗಳೊಂದಿಗೆ ಅತ್ಯದ್ಭುತ ಲಯದಲ್ಲಿದ್ದಾರೆ.
ಆನಂದ್ ಅಂತಿಮ ದಿನದಲ್ಲಿ ರಷ್ಯಾದ ಇಯಾನ್ ನೆಪೊಮಿಯಾಚಿ ವಿರುದ್ಧ ಕಾದಾಟ ನಡೆಸಲಿದ್ದು, ಅಂತಿಮ ದಿನ ನಡೆಯಲಿರುವ ಐದು ಪಂದ್ಯಗಳ ಪೈಕಿ, ಮೂರರಲ್ಲಿ ಬಿಳಿ ಕಾಯಿಯನ್ನು ಮುನ್ನಡೆಸಲಿದ್ದಾರೆ. ಹಾಗಾಗಿ ಆನಂದ್ ಉತ್ತಮ ಫಲಿತಾಂಶ ಪಡೆಯಲು ಒಳ್ಳೆಯ ಅವಕಾಶವಿದೆ. ಇನ್ನು ಎರಡನೇ ದಿನದಾಟದ ಐದು ಪಂದ್ಯಗಳಿಂದ ನಾಲ್ಕು ಅಂಕ ದಾಖಲಿಸಿದ್ದ ಕಾರ್ಲ್‌ಸನ್, ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರ ಎನಿಸಿದರು. ಆದರೆ ಅಗ್ರಸ್ಥಾನದಲ್ಲಿರುವ ಕಾರ್ಲ್‌ಸನ್, ಅಂತಿಮ ದಿನ ಎರಡನೇ ಸ್ಥಾನದಲ್ಲಿರುವ ಆರೋನಿಯನ್ ಅವರನ್ನು ಕಪ್ಪು ಕಾಯಿಗಳಿಂದ ಕಟ್ಟಿ ಹಾಕಬೇಕಿದೆ.  ಭಾರತದ ಇತರೆ ಆಟಗಾರರಲ್ಲಿ ಪಿ. ಹರಿಕೃಷ್ಣ ಹೊರತುಪಡಿಸಿ ಉಳಿದ ಸ್ಪರ್ಧಿಗಳು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆನಂದ್ ವಿರುದ್ಧ ಸೋಲನುಭವಿಸಿದ ಹರಿಕೃಷ್ಣ, 6 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಂತರದ ಉತ್ತಮ ಪ್ರದರ್ಶನ ಎಂದರೆ ಗ್ರ್ಯಾಂಡ್ ಮಾಸ್ಟರ್ ಸೂರ್ಯ ಶೇಖರ್ ಗಂಗೂಲಿ ಮತ್ತು ಎಂ.ಶ್ಯಾಮ್ ಸುಂದರ್ ತಲಾ 4.5 ಅಂಕಗಳಿಸಿದ್ದಾರೆ. ಇನ್ನು ಸಂದೀಪನ್ ಚಾಂಡ ಹಾಗೂ ದೆಬಶೀಶ್ ದಾಸ್ ತಲಾ 4 ಅಂಕ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.