ಕ್ವಾರ್ಟರ್ಫೈನಲ್ಗೆ ಸೈನಾ

ಜಕಾರ್ತ: ಭಾರತದ ಅಗ್ರಮಾನ್ಯ ಶಟ್ಲರ್ ಸೈನಾ ನೆಹವಾಲ್ ಇಂಡೊನೇಶಿಯಾ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಸಿಂಗಲ್ಸ್ನಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದಾರೆ.
ಇಸ್ಟೊರಾ ಗೆಲೋರಾ ಬಂಗ್ ಕರ್ನೊ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ 21-17, 21-19 ನೇರ ಅಂಕಗಳಿಂದ ಸ್ಕಾಟ್ಲೆಂಡ್ನ ಕರ್ಸ್ಟಿ ಗಿಲ್ಮೋರ್ ಅವರನ್ನು ಸೋಲಿಸಿದರು.
ಎಂಟನೇ ಶ್ರೇಯಾಂಕಿತ ಭಾರತೀಯ ಆಟಗಾರ್ತಿ ಕೇವಲ 36 ನಿಮಿಷಗಳ ಆಟದಲ್ಲಿಯೇ ಅಂತಿಮ ಗೆಲವು ತಮ್ಮದಾಗಿಸಿಕೊಂಡರು. ಇದರೊಂದಿಗೆ ವಿಶ್ವದ 17ನೇ ಶ್ರೇಯಾಂಕಿತೆ ಕರ್ಸ್ಟಿ ಗಿಲ್ಮೋರ್ ವಿರುದ್ಧದ ತಮ್ಮ ಈವರೆಗಿನ ಹೋರಾಟದಲ್ಲಿ ಅವರು ಗೆಲವಿನ ಅಂತರವನ್ನು 3-0ಗೆ ವಿಸ್ತರಿಸಿ ತಮ್ಮ ಪ್ರಾಬಲ್ಯ ಮುಂದುವರಿಸಿದರು.
ಈ ಮಧ್ಯೆ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಅಗ್ರಮಾನ್ಯ ಜೋಡಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರು ಎರಡನೇ ಸುತ್ತಿನ ಪಂದ್ಯದಲ್ಲೇ ನಿರ್ಗಮಿಸಿದ್ದಾರೆ.
ಗುರುವಾರವೇ ನಡೆದ ಪಂದ್ಯದಲ್ಲಿ ಜ್ವಾಲಾ ಮತ್ತು ಅಶ್ವಿನಿ 16-21, 21-15, 12-21 ಅಂಕಗಳಿಂದ ದಕ್ಷಿಣ ಕೊರಿಯಾದ ಯೇ ನಾ ಜಂಗ್ ಮತ್ತು ಸೋ ಯಂಗ್ ಕಿಮ್ ಎದುರು ತಲೆಬಾಗಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


