ಕ್ರೀಡೆ

ಆನಂದ್‌ಗೆ ಜಂಟಿ 5ನೇ ಸ್ಥಾನ

Published On :

ದುಬೈ: ಭಾರತದ ಖ್ಯಾತ ಚೆಸ್ ತಾರೆ ವಿಶ್ವನಾಥನ್ ಆನಂದ್ ಅವರು ಶನಿವಾರ ಮುಕ್ತಾಯಗೊಂಡ ವಿಶ್ವ ಬ್ಲಿಜ್ ಚಾಂಪಿಯನ್‌ಶಿಪ್‌ನಲ್ಲಿ ಜಂಟಿ 5ನೇ ಸ್ಥಾನ ಪಡೆದುಕೊಂಡಿದ್ದಾರೆ.
ವಿಶ್ವ ಚಾಂಪಿಯನ್ ರಷ್ಯಾದ ಮ್ಯಾಗ್ನಸ್ ಕಾರ್ಲ್ಸ್‌ನ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಶನಿವಾರದ ಪಂದ್ಯ ಆರಂಭಕ್ಕೂ ಮುನ್ನ, ಮೊದಲ 11  ಪಂದ್ಯಗಳಿಂದ 7.5 ಅಂಕಗಳನ್ನು ಪಡೆದುಕೊಂಡಿದ್ದ ಆನಂದ್, ಅಂತಿಮವಾಗಿ 13.5 ಅಂಕಗಳೊಂದಿಗೆ ಜಂಟಿ 5ನೇ ಸ್ಥಾನಕ್ಕೆ ತಮ್ಮ ಹೋರಾಟ ಅಂತ್ಯಗೊಳಿಸಿದರು. ಆದರೆ, ಜಂಟಿ ಸ್ಥಾನಗಳನ್ನು ಬಿಡಿಸಿದಾಗ 5 ಬಾರಿ ವಿಶ್ವ ಚಾಂಪಿಯನ್ ಆನಂದ್ ಅವರು ಒಟ್ಟಾರೆ 7ನೇ ಸ್ಥಾನ ಪಡೆದುಕೊಂಡರು.
17 ಅಂಕಗಳೊಂದಿಗೆ ಬ್ಲಿಜ್ ಚಾಂಪಿಯನ್‌ಶಿಪ್ ಗೆದ್ದುಕೊಂಡ ಕಾರ್ಲ್ಸ್‌ನ್ ಅವರು, ರ್ಯಾಪಿಡ್ ಸೇರಿದಂತೆ ಮೂರು ಮಾದರಿಯ ಚಾಂಪಿಯನ್‌ಶಿಪ್‌ಗಳನ್ನು ಒಂದೇ ಬಾರಿಗೆ ಗೆದ್ದುಕೊಂಡ ಮೊದಲ ಆಟಗಾರ ಎನಿಸಿದ್ದಾರೆ. ರಷ್ಯಾದ ಇನ್ನೊಬ್ಬ ಆಟಗಾರ ಇಯಾನ್ ನೆಪೋಮ್ನಿಯಾಚಚಿ ಅವರು ಕಾರ್ಲ್ಸ್‌ನ್ ಅವರಿಗೆ ಕಠಿಣ ಸವಾಲೊಡ್ಡಿದ್ದರು. ಆದರೆ, ಇಯಾನ್ ನೆಪೋಮ್ನಿಯಾಚಚಿ ಮತ್ತು ಅಮೆರಿಕದ ಹಿಕಾರು ನಕಾಮುರಾ ಅವರು ಜಂಟಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.   ಇಯಾನ್ ನೆಪೋಮ್ನಿಯಾಚಚಿ ಅವರು ಬೆಳ್ಳಿ ಪದಕ ಗೆದ್ದುಕೊಂಡರೆ, ಅಗ್ರಶ್ರೇಯಾಂಕಿತ ಆಟಗಾರನಾಗಿದ್ದ ನಕಾಮುರಾ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.