ಕ್ರೀಡೆ

ಗೇಯ್ಲ್ ಅಬ್ಬರಕ್ಕೆ ಕಿವೀಸ್ ಕಂಗಾಲು

ಗೇಯ್ಲ್ ಅಬ್ಬರಕ್ಕೆ ಕಿವೀಸ್ ಕಂಗಾಲು
Published On :

ಟ್ರಿನಿಡಾಡ್: ಖ್ಯಾತ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಯ್ಲ್(ಅಜೇಯ 80) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಶುಕ್ರವಾರ ಇಲ್ಲಿನ ಕ್ವೀನ್ಸ್ ಪಾರ್ಕ್ ಒವಲ್ ಕ್ರೀಡಾಂಗಣದಲ್ಲಿ ಅಂತ್ಯಗೊಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಗೇಯ್ಲ್, ಅಬ್ಬರದ ಅರ್ಧಶತಕ ದಾಖಲಿಸಿ ತಂಡ ಸುಲಭವಾಗಿ ಗೆಲವಿನ ದಡ ಸೇರುವಂತೆ ನೋಡಿಕೊಂಡರು.      ವಿಂಡೀಸ್ ಪಡೆ ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 221 ರನ್‌ಗಳಿಗೆ ಕಟ್ಟಿ ಹಾಕಿ, ನಂತರ 460 ರನ್ ದಾಖಲಿಸಿ 239 ರನ್‌ಗಳ ಬೃಹತ್ ಇನಿಂಗ್ಸ್ ಮುನ್ನಡೆ ಪಡೆಯಿತು. ನಂತರ ನ್ಯೂಜಿಲೆಂಡ್ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 331 ರನ್‌ಗಳಿಗೆ ನಿಯಂತ್ರಿಸುವ ಮೂಲಕ ಕೇವಲ 92 ರನ್‌ಗಳ ಗುರಿಯನ್ನು ಪಡೆಯಿತು.
ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್‌ಗೆ, ಕ್ರಿಸ್ ಗೇಯ್ಲ್ ಕೇವಲ 46 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 80 ರನ್ ದಾಖಲಿಸಿ ತಂಡಕ್ಕೆ ಗೆಲವು ತಂದುಕೊಟ್ಟರು. ಮತ್ತೊಬ್ಬ ಆರಂಭಿಕ ಕ್ರೇಗ್ ಬ್ರಾತ್‌ವೈಟ್ ಅಜೇಯ 14 ರನ್ ದಾಖಲಿಸಿದರು.ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 221
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 460
ನ್ಯೂಜಿಲೆಂಡ್ ಎರಡನೇ ಇನಿಂಗ್ಲ್ 331
ಮಾರ್ಕ್ ಕ್ರೇಗ್ 67, ಬ್ರಾಡ್ಲಿ ವಾಟ್ಲಿಂಗ್ ಅಜೇಯ 66, ಕೆಮಾರ್ ರೋಚ್ 74ಕ್ಕೆ4
ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್ ವಿಕೆಟ್‌ನಷ್ಟವಿಲ್ಲದೆ 95
ಕ್ರಿಸ್ ಗೇಯ್ಲ್ ಅಜೇಯ 80, ಬ್ರಾತ್‌ವೈಟ್ ಅಜೇಯ 14
ಪಂದ್ಯಶ್ರೇಷ್ಠ: ಕ್ರೇಗ್ ಬ್ರಾತ್‌ವೈಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.