ರೋಸ್‌ಬರ್ಗ್‌ಗೆ ಆಸ್ಟ್ರಿಯಾ ಕಿರೀಟ
ಸ್ಪೈಲ್‌ಬರ್ಗ್: ಪ್ರಸಕ್ತ ಸಾಲಿನಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿರುವ ಮರ್ಸಿಡೀಸ್ ತಂಡ, ಆಸ್ಟ್ರಿಯಾ ಗ್ರ್ಯಾನ್ ಪ್ರೀ ಫಾರ್ಮುಲಾ ಒನ್ ರೇಸ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಬಾಚಿಕೊಂಡಿದೆ. ಅಲ್ಲದೆ ರೋಸ್‌ಬರ್ಗ್ ಗ್ರ್ಯಾನ್ ಪ್ರೀ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ನಡೆದ ರೇಸ್‌ನಲ್ಲಿ ತಮ್ಮ ತಂಡದ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಜತೆಗೆ ಸ್ಪರ್ಧೆಗೆ ಬಿದ್ದ ನಿಕೊ ರೋಸ್‌ಬರ್ಗ್, ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹ್ಯಾಮಿಲ್ಟನ್ ಎರಡನೇ ಸ್ಥಾನ ಪಡೆಯುವ ಮೂಲಕ ಪ್ರಸಕ್ತ ಋತುವಿನಲ್ಲಿ ಮರ್ಸಿಡೀಸ್ ತಂಡ ಆರನೇ ಬಾರಿಗೆ ಅಗ್ರ ಎರಡು ಸ್ಥಾನಗಳನ್ನು ಬಾಚಿಕೊಂಡಂತಾಗಿದೆ.
ಪ್ರಸಕ್ತ ಸಾಲಿನಲ್ಲಿ ಮೂರನೇ ರೇಸ್ ಗೆದ್ದ ರೋಸ್‌ಬರ್ಗ್ ಋತುವಿನ ಅಂಕಪಟ್ಟಿಯಲ್ಲಿ 165 ಅಂಕಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದು, 136 ಅಂಕ ಪಡೆದಿರುವ ಲೂಯಿಸ್ ಹ್ಯಾಮಿಲ್ಟನ್ ಅವರಿಗಿಂತ 29 ಅಂಕಗಳ ಮುನ್ನಡೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಇನ್ನು ರೆಡ್‌ಬುಲ್ ತಂಡಕ್ಕೆ ಇದು ತವರು ಅಂಗಣವಾಗಿದ್ದರೂ, ಅದೃಷ್ಟ ಮಾತ್ರ ರೆಡ್‌ಬುಲ್ ಪರವಾಗಿರಲಿಲ್ಲ. ಕಾರಣ ನಾಲ್ಕು ಬಾರಿ ಎಫ್1 ಚಾಂಪಿಯನ್ ಸೆಬಾಸ್ಟಿಯನ್ ವೆಟಲ್ ಕಾರು ಎರಡನೇ ಲ್ಯಾಪ್‌ನಲ್ಲಿ ತಾಂತ್ರಿಕ ದೋಷಕ್ಕೆ ಒಳಗಾಗಿದ್ದು, 36ನೇ ಲ್ಯಾಪ್ ವೇಳೆ ಅವರು ಹೊರನಡೆದರು. ಹಾಗಾಗಿ ತಂಡ ಹಿನ್ನಡೆ ಅನುಭವಿಸಲು ಕಾರಣವಾಯಿತು. ಇನ್ನು ವಿಲಿಯಮ್ಸ್ ಮರ್ಸಿಡೀಸ್‌ನ ವಾಲ್ಟೆರಿ ಬೊಟ್ಟಾಸ್ ಹಾಗೂ ಫೆಲಿಪೆ ಮಸ್ಸಾ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಪೆರೆಜ್ 6ನೇ ಸ್ಥಾನ: ಸಹರಾ ಫೋರ್ಸ್ ಇಂಡಿಯಾದ ಸೆರ್ಗಿಯೊ ಪೆರೆಜ್ 6ನೇ ಸ್ಥಾನ ಪಡೆದರೆ, ನಿಕೊ ಹಲ್ಕೆನ್‌ಬರ್ಗ್ 9ನೇ ಸ್ಥಾನ ಪಡೆದರು. ಅಲ್ಲದೆ ಕ್ರಮವಾಗಿ 8 ಮತ್ತು 2 ಅಂಕಗಳನ್ನು ಸಂಪಾದಿಸಿದರು. ಇದರೊಂದಿಗೆ ಸಹರಾ ತಂಡ ಈ ಗ್ರ್ಯಾನ್ ಪ್ರೀಯಲ್ಲಿ 10 ಅಂಕಗಳನ್ನು ಪಡೆದುಕೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

