ಕ್ರೀಡೆ

ಫೆಡರರ್ ಶುಭಾರಂಭ, ಸೋಮ್‌ಗೆ ಸೋಲು

ಫೆಡರರ್ ಶುಭಾರಂಭ, ಸೋಮ್‌ಗೆ ಸೋಲು
Published On :

ಲಂಡನ್: ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ನಾಲ್ಕನೇ ಶ್ರೇಯಾಂಕಿತ ಫೆಡರರ್ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ
ಇಟಲಿಯ ಪೌಲೊ ಲೊರೆಂಜಿ ವಿರುದ್ಧ 6-1, 6-1, 6-3 ನೇರ ಸೆಟ್‌ಗಳಿಂದ ಜಯಗಳಿಸಿ ಎರಡನೇ ಸುತ್ತು ಪ್ರವೇಶಿಸಿದರು.
ಆದರೆ, ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸೋಮ್‌ದೇವ್ ದೇವ್‌ವರ್ಮನ್ ಮಾತ್ರ ಮೊದಲ ಸುತ್ತಿನಲ್ಲೇ ಸೋಲಿನ ಕಹಿ ಅನುಭವಿಸಿ ಹೊರನಡೆದಿದ್ದಾರೆ.
ಇಂದೇ ನಡೆದ ಪುರುಷರ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಸೋಮ್‌ದೇವ್ 6-4, 3-6, 3-6, 6-3, 3-6 ಸೆಟ್‌ಗಳಿಂದ ಪೋಲೆಂಡ್‌ನ 15ನೇ ಶ್ರೇಯಾಂಕಿತ ಜೆರ್ಜಿ ಜಾನೊವಿಚ್ ಎದುರು ಸೋಲನುಭವಿಸಿದರು.
ಉಳಿದಂತೆ, ಸ್ವಿಜರ್ಲೆಂಡ್‌ನ 5ನೇ ಶ್ರೇಯಾಂಕಿತ ಆಟಗಾರ ಸ್ಟಾನಿಸ್ಲಾಸ್ ವಾರ್ವಿಂಕ ತಮ್ಮ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಪೋರ್ಚುಗಲ್‌ನ ಜೊವೊ ಸೌಸಾ ವಿರುದ್ಧ 6-3, 6-4, 6-3 ನೇರ ಸೆಟ್‌ಗಳಿಂದ ಪರಾಭವಗೊಳಿಸಿದರು.
ಫ್ರಾನ್ಸ್‌ನ 14ನೇ ಶ್ರೇಯಾಂಕಿತ ಜೋ ವಿಲ್‌ಫ್ರೆಡ್ ಸೋಂಗಾ ಐದು ಸೆಟ್‌ಗಳ ಸುದೀರ್ಘ ಹೋರಾಟದಲ್ಲಿ ಆಸ್ಟ್ರಿಯಾದ ಜರ್ಗೆನ್ ಮೆಲ್ಜರ್ ಅವರ ವಿರುದ್ಧ 6-1, 3-6, 3-6, 6-2, 6-4ರಿಂದ ಪ್ರಯಾಸದ ಗೆಲವು ದಾಖಲಿಸಿ ಎರಡನೇ ಸುತ್ತು ತಲುಪಿದರು.
ಆಸ್ಟ್ರೇಲಿಯಾದ ಲಿಟನ್ ಹೇವಿಟ್ 6-2, 6-7 (14-16), 6-1, 6-4ರಿಂದ ಪೋಲೆಂಡ್‌ನ ಮೈಕಲ್ ಪ್ರಜೇಸಿಂಜಿ ವಿರುದ್ಧ ಎರಡನೇ ಸುತ್ತಿನಲ್ಲಿ ಜಯಗಳಿಸಿದರು.
ಮಹಿಳೆಯರ ವಿಭಾಗದಲ್ಲಿ ಜರ್ಮನಿಯ ಸಬಿನೆ ಲಿಸಿಕಿ ಅವರು ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಇಸ್ರೇಲ್‌ನ ಜೂಲಿಯಾ ಗ್ಲುಶ್‌ಕೋ ಅವರನ್ನು 6-2, 6-1 ನೇರ ಸೆಟ್‌ಗಳಿಂದ ಮಣಿಸಿ ಮುನ್ನಡೆದರು.
ಪೋಲೆಂಡ್‌ನ ನಾಲ್ಕನೇ ಶ್ರೇಯಾಂಕಿತೆ ಆಗ್ನೆಸ್ಕಾ ರಾಡ್‌ವಾಂಸ್ಕಾ 6-2, 6-1 ಸೆಟ್‌ಗಳಿಂದ ರೊಮೇನಿಯಾದ ಆ್ಯಂಡ್ರಿ ಮಿಟು ಅವರನ್ನು ಸೋಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.