ಕ್ರೀಡೆ

ಸೆರೆನಾ, ಇವಾನೊವಿಚ್ ಮುನ್ನಡೆ

Published On :

ಲಂಡನ್: ನಂಬರ್ ಒನ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್
6-1, 6-1 ನೇರ ಸೆಟ್ಗಳಿಂದ ದಕ್ಷಿಣ ಆಫ್ರಿಕಾದ ಚಾನೆಲ್ಲೆ ಸೀಪರ್ಸ್ ವಿರುದ್ಧ ಜಯಗಳಿಸಿ ಶುಭಾರಂಭ ಮಾಡಿದರು. ಅದೇ ರೀತಿ ಮತ್ತೊಂದು ಎರಡನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಅನಾ ಇನಾನೊವಿಚ್ 6-4, 6-0 ನೇರ ಸೆಟ್ಗಳಿಂದ ಚೀನಾದ ಜೀ ಜೆಂಗ್ ಅವರನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿದರು.
ಇನ್ನು ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಜಪಾನಿನ 10ನೇ ಶ್ರೇಯಾಂಕಿತ ಕೀ ನಿಶಿಕೋರಿ 6-3, 6-2, 6-1ರಿಂದ ಅಮೆರಿಕದ ಡೆನಿಸ್ ಕುಡ್ಲಾ ಅವರನ್ನು ಮಣಿಸಿದರು. ಜೆಕ್ ಗಣರಾಜ್ಯದ ಜಿರಿ ವೆಸೆಲಿ 7-6 (7-3), 6-3, 7-6 (7-1), 7-6, 6-4 ಸೆಟ್ಗಳಿಂದ ಫ್ರಾನ್ಸ್ನ 24ನೇ ಶ್ರೇಯಾಂಕಿತ ಗೇಲ್ ಮೊನ್ಫೀಲ್ಸ್ ಅವರ ವಿರುದ್ಧ ರೋಚಕ ಗೆಲವು ದಾಖಲಿಸಿದರೆ, ಕೆನಡಾದ ಮಿಲೋಸ್ ರಾನಿಕ್ ಅಮೆರಿಕದ ಜಾಕ್ ಸೋಕ್ರನ್ನು 6-3, 6-4, 6-4ರಿಂದ  ಸೋಲಿಸಿ ಮೂರನೇ ಸುತ್ತಿಗೆ ಹೆಜ್ಜೆ ಹಾಕಿದರು.
ಆದರೆ, 13ನೇ ಶ್ರೇಯಾಂಕಿತ ಫಾನ್ಸ್ನ ರಿಚರ್ಡ್ ಗ್ಯಾಸ್ಕೆಟ್ ಎರಡನೇ ಸುತ್ತಿನಲ್ಲೇ ಸೋಲಿನ ಕಹಿ ಅನುಭವಿಸಿದ್ದಾರೆ. ಆಸ್ಟ್ರೇಲಿಯಾದ ನಿಕ್ ಕೈರ್ಜಿಯಸ್ ಅವರು 3-6, 6-7 (4-7), 6-4, 7-5, 10-8 ಸೆಟ್ಗಳಿಂದ ಗ್ಯಾಸ್ಕೆಟ್ ವಿರುದ್ಧ ಜಯಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.