ಕ್ರೀಡೆ

ವಿಶ್ವ ಜೂ. ಚಾಂಪಿಯನ್ ಮೇಘನಾ ಶೆಟ್ಟಿ

Published On :

ಉಡುಪಿ: ಬೆಂಗಳೂರಿನ ಸೇಂಟ್ ಜೊಸೆಫ್ ಕಾಲೇಜಿನ ಬಿ.ಬಿ.ಎಂ. ವಿದ್ಯಾರ್ಥಿನಿ ಮೇಘನಾ ಶೆಟ್ಟಿ ಜುಲೈಯಲ್ಲಿ ಅಮೆರಿಕಾ ಓರೆಗಾಂವ್‌ನಲ್ಲಿ ನಡೆಯುವ ಹರ್ಡಲ್ಸ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ.
ಮೇಘನಾ ಉಡುಪಿ ಮೂಲದ, ಟಾಟಾ ಸೋಲಾರ್ ಪವರ್ ಕಂಪನಿಯ ಮಹಾಪ್ರಬಂಧಕ ತೋನ್ಸೆ ಅಜಿತ್ ಪ್ರಸಾದ್ ಶೆಟ್ಟಿ-ಬೆಂಗಳೂರಿನ ದಂತವೈದ್ಯ ಕಾಲೇಜಿನ ಪ್ರಾಧ್ಯಾಪಕಿ ಡಾ. ತಿಮ್ಮಂಗೂರ್ ಶ್ರೀತ ಭಂಡಾರಿ ದಂಪತಿ ಪುತ್ರಿ.
 ಈಕೆ ಪ್ರಸ್ತುತ 16, 18 ಮತ್ತು 20 ವರ್ಷದೊಳಗಿನ ಮಹಿಳೆಯರ ವಿಭಾಗದ 100 ಮೀಟರ್ ಹರ್ಡಲ್ಸ್ ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.
ಟೀಂ ಇಂಡಿಯಾಗೆ ಉತ್ತಮ ಅಭ್ಯಾಸ
ಲಿಸೆಸ್ಟರ್‌ಶೈರ್: ಭಾರತ ತಂಡದ ಆಟಗಾರರು ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದಲ್ಲಿ ಉತ್ತಮ ರೀತಿಯಲ್ಲಿ ಅಭ್ಯಾಸಕ್ಕೆ ಅಣಿಯಾಗಿದ್ದಾರೆ.
ಗ್ರೇಸ್ ರೋಡ್‌ನಲ್ಲಿ ಗುರುವಾರ ಲಿಸೆಸ್ಟರ್‌ಶೈರ್ ತಂಡದ ವಿರುದ್ಧ ಆರಂಭವಾದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ 60 ಓವರುಗಳಾದ 2 ವಿಕೆಟ್ ನಷ್ಟಕ್ಕೆ 220 ರನ್‌ಗಳಿಸಿತ್ತು.  ಮಧ್ಯಮ ಕ್ರಮಾಂಕದ ದಾಂಡಿಗರಾದ ಚೇತೇಶ್ವರ ಪೂಜಾರ 37 ರನ್ ಮತ್ತು ವಿರಾಟ್ ಕೊಹ್ಲಿ 26 ರನ್‌ಗಳಿಸಿ ಆಡುತ್ತಿದ್ದರು.
ಆರಂಭಿಕ ಮುರಳಿ ವಿಜಯ್ ಕೇವಲ 20 ರನ್‌ಗಳಿಸಿ ಔಟಾದರೆ, ಮತ್ತೊಬ್ಬ ಆರಂಭಿಕ ಶಿಖರ್ ಧವನ್ (60 ನಿವೃತ್ತಿ) ಮತ್ತು ಮೂರನೇ ಕ್ರಮಾಂಕದಲ್ಲಿ ಬಂದ ಗೌತಮ್ ಗಂಭೀರ್ (54) ವೈಯಕ್ತಿಕ ಅರ್ಧಶತಕಗಳೊಂದಿಗೆ ಗಮನ ಸೆಳೆದರು.
ಸಂಕ್ಷಿಪ್ತ ಸ್ಕೋರ್
ಭಾರತ 60 ಓವರುಗಳಲ್ಲಿ 1 ವಿಕೆಟ್‌ಗೆ 220 (ಶಿಖರ್ ಧವನ್ ನಿವೃತ್ತಿ 60, ಗೌತಮ್ ಗಂಭೀರ್ 54, ಮುರಳಿ ವಿಜಯ್ 20).


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.