3ನೇ ಪಂದ್ಯಕ್ಕೆ ಮಳೆ ಟೆಸ್ಟ್

ಬಾರ್ಬಡಾಸ್: ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ವರುಣ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ದಿನದಾಟ ಪೂರ್ಣಗೊಳ್ಳಲಿಲ್ಲ.
ಇಲ್ಲಿನ ಕಿಂಗ್ಸ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಶುಕ್ರವಾರ ಎರಡನೇ ದಿನದಾಡದಲ್ಲಿ ಕೇವಲ 32.2 ಓವರ್ಗಳು ಮಾತ್ರ ನಡೆದಿದ್ದು, ವೆಸ್ಟ್ ಇಂಡೀಸ್ ತಂಡ 2 ವಿಕೆಟ್ ಕಳೆದುಕೊಂಡು 169 ರನ್ ದಾಖಲಿಸಿದೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡದ ಉತ್ತಮ ರನ್ ಓಟಕ್ಕೆ ಮಳೆ ಅಡ್ಡಗಾಲು ಹಾಕಿದೆ.
ಪಂದ್ಯದ ಮೊದಲ ದಿನ ಪ್ರವಾಸಿ ಕಿವೀಸ್ ತಂಡವನ್ನು 293 ರನ್ಗಳಿಗೆ ನಿಯಂತ್ರಿಸಿದ ವೆಸ್ಟ್ ಇಂಡೀಸ್ ತಂಡ, ವಿಕೆಟ್ ನಷ್ಟವಿಲ್ಲದೆ 32 ರನ್ ದಾಖಲಿಸಿತ್ತು. ನಂತರ ಎರಡನೇ ದಿನದಾಟದಲ್ಲಿ ಆಟ ಮುಂದುವರಿಸಿದ ಆರಂಭಿಕರಾದ ಕ್ರಿಸ್ ಗೇಯ್ಲ್ ಹಾಗೂ ಕ್ರೇಗ್ ಬ್ರಾತ್ವೈಟ್ ಮೊದಲ ವಿಕೆಟ್ಗೆ 79 ರನ್ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಈ ವೇಳೆ 53 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ನೆರವಿನಿಂದ 42 ರನ್ ದಾಖಲಿಸಿದ ಗೇಯ್ಲ್, ಮಾರ್ಕ್ ಕ್ರೇಗ್ಗೆ ವಿಕೆಟ್ ಒಪ್ಪಿಸಿದರು. ನಂತರ ಇನಿಂಗ್ಸ್ ಕಟ್ಟುವ ಕಾರ್ಯದಲ್ಲಿ ಮುಂದುವರಿದ ಬ್ರಾತ್ವೈಟ್, 116 ಎಸೆತಗಳಲ್ಲಿ 10 ಬೌಂಡರಿ ನೆರವಿನೊಂದಿಗೆ 68 ರನ್ ಗಳಿಸಿದರು. ನಂತರ ವಾಗ್ನರ್ ಎಸೆತದಲ್ಲಿ ಸೌಥಿಗೆ ಕ್ಯಾಚ್ ನೀಡುವ ಮೂಲಕ ತಮ್ಮ ಇನಿಂಗ್ಸ್ಗೆ ತೆರೆ ಎಳೆದರು.
ಮೂರನೇ ವಿಕೆಟ್ಗೆ ಜತೆಯಾದ ಕಿರ್ಕ್ ಎಡ್ವರ್ಡ್ಸ್ 42 ಹಾಗೂ ಡಾರೆನ್ ಬ್ರಾವೊ 8 ರನ್ಗಳಿಸಿದ್ದು ಅಜೇಯರಾಗುಳಿದ್ದಿದ್ದಾರೆ. ಎಡ್ವರ್ಡ್ಸ್ 64 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ್ದು, ಅರ್ಧಶತಕದ ಹೊಸ್ತಿಲಲ್ಲಿದ್ದಾರೆ. ವಿಂಡೀಸ್ ತಂಡ ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 125 ರನ್ಗಳ ಅಗತ್ಯವಿದ್ದು, ತಂಡ ಉತ್ತಮ ಮೊತ್ತ ಪೇರಿಸುವತ್ತ ಗಮನಹರಿಸಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 293
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 2 ವಿಕೆಟ್ಗೆ 169
(ಬ್ರಾತ್ವೈಟ್ 68, ಕ್ರಿಸ್ ಗೇಯ್ಲ್ 42, ಕಿರ್ಕ್ ಎಡ್ವರ್ಡ್ಸ್ ಅಜೇಯ 42, ಡಾರೆನ್ ಬ್ರಾವೊ ಅಜೇಯ 8, ವಾಗ್ನರ್ 11ಕ್ಕೆ1, ಮಾರ್ಕ್ ಗ್ರೇಗ್ 63ಕ್ಕೆ1)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


