ಮಾಯಾಂಕ್ ಶತಕಕ್ಕೆ ಮರುಳಾದ ಗೋವಾ
ಬೆಂಗಳೂರು: ಬಲಗೈ ಬ್ಯಾಟ್ಸ್ಮನ್ ಮಾಯಾಂಕ್ ಅಗರ್ವಾಲ್(116) ಅವರ ಅಮೋಘ ಶತಕದ ನೆರವಿನಿಂದ ಕರ್ನಾಟಕ ತಂಡವು ಗೋವಾ ವಿರುದ್ಧದ ಸುಬ್ಬಯ್ಯ ಪಿಳ್ಳೈ ಟ್ರೋಫಿಯಲ್ಲಿ ಭರ್ಜರಿ ಗೆಲವು ದಾಖಲಿಸಿದೆ.
ಸೋಮವಾರ ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ 71 ರನ್ಗಳ ಗೆಲವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡ ನಿಗದಿತ 45 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಭರ್ಜರಿ 312 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಗೋವಾ 43.2 ಓವರ್ಗಳಲ್ಲಿ 241 ರನ್ಗಳಿಗೆ ಆಲೌಟ್ ಆಯಿತು.
ಭಾನುವಾರ ಸುರಿದ ಮಳೆಯಿಂದಾಗಿ ಪಿಚ್ ಒದ್ದೆಯಾಗಿತ್ತು. ಹಾಗಾಗಿ ಪಂದ್ಯವನ್ನು ತಡವಾಗಿ ಆರಂಭಿಸಲಾಯಿತು. ಅಲ್ಲದೆ ಪಂದ್ಯವನ್ನು 45 ಓವರ್ಗಳಿಗೆ ಸೀಮಿತಗೊಳಿಸಲಾಯಿತು.
ಮಾಯಾಂಕ್ ಮಾಯೆ: ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಕರ್ನಾಟಕ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ(27) ಹಾಗೂ ಮಾಯಾಂಕ್ ಅಗರ್ವಾಲ್(116) ತಂಡಕ್ಕೆ 54 ರನ್ಗಳ ಜತೆಯಾಟ ನೀಡಿದರು. ಉತ್ತಪ್ಪ ಔಟಾದ ನಂತರ ಅಗರ್ವಾಲ್ ಜತೆಗೂಡಿದ ರಾಹುಲ್(40) ತಂಡಕ್ಕೆ 96 ರನ್ಗಳ ಜತೆಯಾಟ ನೀಡಿದರು.
ನಂತರ ಬಂದ ಮನೀಷ್ ಪಾಂಡೆ(45), ಕರುಣ್ ನಾಯರ್(23), ಸಿ.ಎಂ.ಗೌತಮ್(20) ಚುಟುಕಿನ ಆಟ ಪ್ರದರ್ಶಿಸಿದರು. ಆದರೆ ಕರ್ನಾಟಕದ ಇನಿಂಗ್ಸ್ ಕಟ್ಟಿದ ಮಾಯಾಂಕ್ ಅಗರ್ವಾಲ್(116 ರನ್, 102 ಎಸೆತ, 13 ಬೌಂಡರಿ, 3 ಸಿಕ್ಸರ್) ಶತಕ ದಾಖಲಿಸಿದರು.
ರಾಜ್ಯದ ಬೌಲಿಂಗ್ ಪ್ರಯೋಗ: ಕರ್ನಾಟಕ ನೀಡಿದ ಬೃಹತ್ ಗುರಿಯನ್ನು ಬೆಂಬತ್ತಿದ ಗೋವಾಗೆ ಸಗುನ್ ಕಾಮತ್(63) ಹಾಗೂ ಮಿಸ್ಲಾ(42) ಹೋರಾಟ ನೀಡಲು ಜೀವ ತುಂಬಿದರು. ಆದರೆ ಉಳಿದ ಬ್ಯಾಟ್ಸ್ಮನ್ಗಳಿಂದ ಸಮರ್ಪಕವಾಗಿ ಸಾಥ್ ದೊರೆಯದ ಕಾರಣ ಪಂದ್ಯವನ್ನು ಕೈಚೆಲ್ಲುವಂತಾಯಿತು.
ಆರಂಭಿಕರಾಗಿ ಕಣಕ್ಕಿಳಿದ ಸುನಿಲ್ ದೇಸಾಯಿ(30) ಹಾಗೂ ಸೂರಜ್ ದೋಂಗ್ರೆ(18) ತಂಡಕ್ಕೆ 49 ರನ್ಗಳ ಸಾಧಾರಣ ಆರಂಭ ನೀಡಿದರು. ನಂತರ ಬಂದ ಕಾಮತ್ (63 ರನ್, 74 ಎಸೆತ, 4 ಬೌಂಡರಿ ಹಾಗೂ 3 ಸಿಕ್ಸರ್) ಕರ್ನಾಟಕದ ಬೌಲರ್ಗಳಿಗೆ ಪ್ರತಿರೋಧ ನೀಡಲು ಪ್ರಯತ್ನಿಸಿದರು. ಇವರಿಗೆ ಸ್ವಲ್ಪ ಹೊತ್ತು ಸಾಥ್ ನೀಡಿದ ಮಿಸ್ಲಾ (42 ರನ್, 60 ಎಸೆತ, 3 ಬೌಂಡರಿ) ಅರ್ಧಶತಕ ದಾಖಲಿಸಲು ವಿಫಲರಾದರು.
ಸ್ಕೋರ್ ವಿವರ:
ಕರ್ನಾಟಕ 45 ಓವರ್ಗಳಲ್ಲಿ 9 ವಿಕೆಟ್ಗೆ 312
ರಾಬಿನ್ ಉತ್ತಪ್ಪ ಸಿ ಗಡೇಕರ್ ಬಿ ಗಾರ್ಗ್ 27, ಮಾಯಾಂಕ್ ಅಗರ್ವಾಲ್ ಸಿ ಕಾಮತ್ ಬಿ ಅಮಿತ್ 116, ಕೆ.ಎಲ್ ರಾಹುಲ್ ಬಿ ದೇಸಾಯಿ 40, ಮನೀಷ್ ಪಾಂಡೆ ಸ್ಟಂಪ್ ಕೆನಿ ಬಿ ಜಕಾಟಿ 45, ಕರುಣ್ ನಾಯರ್ ಸಿ ಜಕಾಟಿ ಬಿ ಗಡೇಕರ್ 23, ವಿನಯ್ ಕುಮಾರ್ ಸ್ಟಂಪ್ ಕೆನಿ ಬಿ ಜಕಾಟಿ 10, ಸಿ.ಎಂ ಗೌತಮ್ ಸಿ ವಾಜ್ ಬಿ ಸೈಯದ್ 20, ಅಮಿತ್ ವರ್ಮಾ ಸ್ಟಂಪ್ ಕೆನಿ ಬಿ ಅಮೀತ್ 11, ಖಾಜಿ ಅಜೇಯ 4, ಶರತ್ ಸ್ಟಂಪ್ ಕೆನಿ ಬಿ ಅಮಿತ್ 4, ಎಸ್.ಅರವಿಂದ್ ಅಜೇಯ 1
ಇತರೆ: (ವೈಡ್ 10, ನೊಬಾಲ್1) ಒಟ್ಟು 11ವಿಕೆಟ್ ಪತನ: 1-54, 2-150, 3-220, 4-244, 5-262, 6-276, 7-293, 8-307, 9-311
ಬೌಲಿಂಗ್ ವಿವರ:
ಗಡೇಕರ್ 8-1-63-1
ಸೈಯದ್ 8-0-66-1
ಲಕ್ಷಯ್ ಗಾರ್ಗ್ 4-0-24-1
ಶಡಬ್ ಜಕಾಟಿ 8-0-52-2
ಅಮಿತ್ ಯಾದವ್ 9-0-54-3
ದರ್ಶನ್ ಮಿಸ್ಲಾ 3-0-24-0
ಸುನಿಲ್ ದೆಸಾಯಿ 5-0-29-1
ಗೋವಾ 43.2 ಓವರ್ಗಳಲ್ಲಿ 241
ಸುನಿಲ್ ದೆಸಾಯಿ ಸಿ ಅಮಿತ್ ವರ್ಮಾ ಬಿ ವಿನಯ್ 30, ಸೂರಜ್ ದೊಂಗ್ರೆ ಸಿ ಅಗರ್ವಾಲ್ ಬಿ ವಿನಯ್ 18, ಕಾಮತ್ ಸಿ ಶರತ್ ಬಿ ವಿನಯ್ 63, ಅಮಿತ್ ಯಾದವ್ ಸಿ ಗೌತಮ್ ಬಿ ಖಾಜಿ 18, ಕೀನನ್ ವಾಜ್ ಸಿ ಗೌತಮ್ ಬಿ ಖಾಜಿ 4, ರಾಹುಲ್ ಕೆನಿ ಬಿ ಖಾಜಿ 6, ದರ್ಶನ್ ಮಿಸ್ಲಾ ಸ್ಟಂಪ್ ಗೌತಮ್ ಬಿ ರಾಹುಲ್ 42, ಗಡೇಕರ್ ಸಿ ರಾಹುಲ್ ಬಿ ಖಾಜಿ 1, ಶಡಬ್ ಜಕಾಟಿ ಸಿ ಗೌತಮ್ ಬಿ ನಾಯರ್ 4, ಗಾರ್ಗ್ ಸ್ಟಂಪ್ ಗೌತಮ್ ಬಿ ಮನೀಷ್ 19, ಸೈಯದ್ ಅಜೇಯ 18
ಇತರೆ: (ಬೈ 2, ಎಲ್ಬಿ 8, ವೈಡ್ 8) ಒಟ್ಟು 18
ವಿಕೆಟ್ ಪತನ: 1-49, 2-52, 3-81, 4-101, 5-109, 6-167, 7-171, 8-187, 9-223, 10-241
ಬೌಲಿಂಗ್ ವಿವರ:
ಅಬ್ರಾರ್ ಖಾಜಿ 11-1-49-4
ವಿನಯ್ ಕುಮಾರ್ 6-0-47-3
ಎಸ್ ಅರವಿಂದ್ 5-0-30-0
ಎಚ್.ಎಸ್ ಶರತ್ 6-0-19-0
ಅಮಿತ್ ವರ್ಮಾ 3-0-7-0
ಕರುಣ್ ನಾಯರ್ 7-0-36-1
ಮಾಯಾಂಕ್ 1-0-4-0
ಮನೀಷ್ ಪಾಂಡೆ 1.2-0-6-1
ಕೆ.ಎಲ್ ರಾಹುಲ್ 2-0-23-1
ರಾಬಿನ್ ಉತ್ತಪ್ಪ 1-0-10-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

