ಕ್ರೀಡೆ

ಅರ್ಹತಾ ಹಂತದಲ್ಲೇ ಸೋತ ಜ್ವಾಲಾ-ಅಶ್ವಿನಿ

Published On :

ಬರ್ಮಿಂಗ್‌ಹ್ಯಾಮ್: ಭಾರತದ ಅಗ್ರಮಾನ್ಯ ಜೋಡಿಯಾದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರು 40 ಲಕ್ಷ ಡಾಲರ್ ಬಹುಮಾನ ಮೊತ್ತದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಧಾನ ಘಟ್ಟ ತಲುಪಲು ವಿಫಲರಾಗಿದ್ದಾರೆ.
ಇಲ್ಲಿನ ನ್ಯಾಷನಲ್ ಒಳಾಂಗಣ ಏರೆನಾದಲ್ಲಿ ಮಂಗಳವಾರ ರಾತ್ರಿ ನಡೆದ ಅರ್ಹತಾ ಹಂತದ ಎರಡನೇ ಸುತ್ತಿನಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರು 21-14, 15-21, 17-21 ಅಂಕಗಳ ಅಂತರದಲ್ಲಿ ಚೀನಾದ ಜಿನ್ ಮಾ ಮತ್ತು ಯುಯಾಂಟಿಂಗ್ ಟಾಂಗ್ ಎದುರು ಸೋಲನುಭವಿಸಿದರು.
 ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಭಾರತೀಯ ಜೋಡಿ 54 ನಿಮಿಷಗಳ ಹೋರಾಟದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಮೊದಲ ಸೆಟ್ ಗೆದ್ದು ಶುಭಾರಂಭ ಮಾಡಿದ್ದ ಜ್ವಾಲಾ ಮತ್ತು ಅಶ್ವಿನಿ ನಂತರದ ಎರಡು ಸೆಟ್‌ಗಳಲ್ಲಿ ಮಾತ್ರ ಅನಗತ್ಯ ತಪ್ಪುಗಳನ್ನೆಸಗಿ ಅಂಕಗಳನ್ನು ಕಳೆದುಕೊಳ್ಳುವುದರೊಂದಿಗೆ ಅಂತಿಮವಾಗಿ ಕಣದಿಂದ ಹೊರನಡೆಯಬೇಕಾಯಿತು.
ಆನಂದ್ ಪವಾರ್‌ಗೆ ಸೋಲು: ಈ ಮಧ್ಯೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಹ ಭಾರತಕ್ಕೆ ಭಾರಿ ನಿರಾಸೆ ಕಾದಿತ್ತು. ಅರ್ಹತಾ ಹಂತದ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಆನಂದ್ ಪವಾರ್ ಸೋಲಿನ ಕಹಿ ಅನುಭವಿಸಿದರು.
ಇಂಡೋನೇಷಿಯಾದ ಆ್ಯಂಡ್ರೆ ಕುರ್ನಿಯಾವಾನ್ ಟೆಜೆನೊ ಅವರು 18-21, 21-3, 21-19 ಅಂಕಗಳ ಅಂತರದಲ್ಲಿ ಮುಂಬಯಿ ಹುಡುಗನಿಗೆ ಅಚ್ಚರಿ ಆಘಾತ ನೀಡಿದರು.
ಅದೇ ರೀತಿ ಥಾಣೆಯ ಹುಡುಗಿ ಸೈಲಿ ರಾಣೆ ತಮ್ಮ ಸೆಣಸಿನಲ್ಲಿ ಐರ್ಲೆಂಡ್‌ನ ಚಲೊಯೆ ಮ್ಯಾಗೀ ವಿರುದ್ಧ 21-23, 20-22ರಿಂದ ಸೋಲುಂಡರು. ಕೇವಲ 47 ನಿಮಿಷಗಳ ಆಟದಲ್ಲಿಯೇ ಭಾರತೀಯ ಆಟಗಾರ್ತಿಗೆ ಸೋಲು ಎದುರಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.