ಗೋವಾ ಎದುರು ಗುಡುಗಿದ ಛತ್ತೀಸ್ಗಡ
-ಡಿ.ಎನ್. ಮಹೇಂದ್ರ
ಮೈಸೂರು: ಛತ್ತೀಸ್ಗಡ ತಂಡದ ಸಧಾ ಸೆಂಗರ್ ಅವರ ಹ್ಯಾಟ್ರಿಕ್ ಸೇರಿದ ಐದು ಗೋಲ್ಗಳ ಅಟ್ಟಹಾಸಕ್ಕೆ ಗುರುವಾರ ಗೋವಾ ತಂಡ ನಿಟ್ಟುಸಿರು ಬಿಡುವುದೊಂದೆ ಬಾಕಿ ಇತ್ತು.
ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್ನಲ್ಲಿ ಗುರುವಾರ ಬೆಳಗ್ಗೆ 8ಕ್ಕೆ ಆರಂಭವಾದ ಬಿ ವಿಭಾಗದ ಪಂದ್ಯದ ಉದ್ದಕ್ಕೂ ಛತ್ತೀಸ್ಗಡ ತಂಡದ ಆಟಗಾರರು ಗೋವಾ ತಂಡದ ಅಂಕಣದಲ್ಲಿಯೆ ಇದ್ದರು. ಆದರೆ ಗೋವಾ ತಂಡದ ಆಟಗಾರರು, ಛತ್ತೀಸ್ಗಡ ಅಂಕಣ ಪ್ರವೇಶಿಸಲು ಪರದಾಡಿದರು. ತಮ್ಮ ತಂಡದ ಇತರ ಸದಸ್ಯರು ಇಲ್ಲದಿದ್ದರೂ ಅನಗತ್ಯವಾಗಿ ಚೆಂಡನ್ನು ತಳ್ಳಿ ಸಮಯ ವ್ಯರ್ಥ ಮಾಡಿದರು.
ಆದರೆ ಛತ್ತೀಸ್ಗಡ ತಂಡದ ಆಟಗಾರರು ಮಾತ್ರ ಅಕ್ಷರಶಃ ಸಂಘಟಿತ ಹೋರಾಟದ ಮೂಲಕ 13 ಗೋಲ್ ಬಾರಿಸಿ ಜಯ ಗಳಿಸಿದರು. ಮೊದಲಾರ್ಧದಲ್ಲಿ 5 ಗೋಲ್ ಬಾರಿಸಿದ್ದ ಛತ್ತೀಸ್ಗಡ ತಂಡವು, ಉಳಿದಾರ್ಧದಲ್ಲಿ ತನ್ನ ಖಾತೆಗೆ ಮತ್ತೆ 8 ಗೋಲ್ ಸೇರಿಸಿಕೊಂಡಿತು. ಆದರೆ ಗೋವಾ ತಂಡ ಖಾತೆ ತೆರೆಯಲು ಇನ್ನಿಲ್ಲದ ಕಸರತ್ತು ನಡೆಸಿಯೂ ವಿಫಲವಾಯಿತು. ಗೋವಾ ತಂಡದ ಗೋಲ್ ಕೀಪರ್ ಚಿತ ನಾಯ್ಡು ಚೆಂಡನ್ನು ತಡೆಯಲು ಪ್ರಯಾಸ ಪಡುವಂತಾಯಿತು.
ಛತ್ತೀಸ್ಗಡ ತಂಡದ ಸಧಾ ಸೆಂಗರ್ ಅವರು ಎರಡೆರಡು ನಿಮಿಷಗಳ ಅಂತರದಲ್ಲಿ ಅಂದರೆ 44, 46, 48 ನಿಮಿಷದಲ್ಲಿ ಹ್ಯಾಟ್ರಿಕ್ ಗೋಲ್ ಬಾರಿಸಿದರು. ಇದೂ ಸೇರಿ ಅವರು ಐದು ಗೋಲ್ ಬಾರಿಸಿದರು. ತಂಡದ ಮೊದಲ ಕ್ರಮಾಂಕದ ಆಟಗಾರ್ತಿ ಉಪ್ಸಾನ ಸಿಂಗ್ 6ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ತಂಡದ ಖಾತೆ ತೆರೆದರು. ಉಳಿದಂತೆ ಆಕಾಂಕ್ಷಾ ಪರ್ಮಾರ್ ಮೂರು ಗೋಲ್ ಬಾರಿಸಿದರು.
ದಿನದ ಕಡೆಯ ಪಂದ್ಯಾವಳಿಯಲ್ಲಿ ಮಣಿಪುರ ಹಾಕಿ ತಂಡವು, ಉತ್ತರಖಂಡ ತಂಡವನ್ನು 2-0 ಅಂತರದಿಂದ ಮಣಿಸಿತು. ಮಣಿಪುರ ತಂಡದ ಗೀತಾರಾಣಿ ದೇವಿ ಅವರು 5ನೇ ನಿಮಿಷದಲ್ಲಿ ಒಂದು ಗೋಲ್ ಮತ್ತು ಚೌಬಾ ಚಿನು 26ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಬಾರಿಸಿದರು. ಈ ನಡುವೆಯು ಉತ್ತರಖಂಡ ತಂಡದ ಆಟಗಾರರು ಉತ್ತಮ ಪ್ರತಿರೋಧ ತೋರಿದರಾದರೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ಐದನೇ ಪಂದ್ಯ- ಹಿಮಾಚಲಪ್ರದೇಶ ಮತ್ತು ಮಿಜೋರಾಮ್ (ಪಂದ್ಯ ರದ್ದು).
ಪಂದ್ಯ ಆರು- ಗೋವಾ ವಿರುದ್ಧ ಛತ್ತೀಸ್ಗಡ್ ಹಾಕಿ ತಂಡಕ್ಕೆ ಜಯ 13-0
ಛತ್ತೀಸ್ಗಡ ಗೋಲ್ ಸ್ಕೋರರ್ಸ್:
ಉಪ್ಸಾನ ಸಿಂಗ್- 6, 64ನಿ.
ಆಕಾಂಕ್ಷಾ ಪರ್ಮಾರ- 15, 17, 63ನಿ.
ಸಧಾ ಸೆಂಗರ್- 10, 44, 46, 48, 65ನಿ.
ಸೀಮಾ ವರ್ಮ- 34ನಿ.
ನೀರಜ್ ರಾಣ- 49ನಿ.
ಕೃತಿಕ ಚಂದ್ರ- 66ನಿ.
ಪಂದ್ಯ ಏಳು- ತ್ರಿಪುರ ಮಣಿಸಿದ ವಿದರ್ಭ ಹಾಕಿ ತಂಡ 13-0
ವಿದರ್ಭ ತಂಡದ ಗೋಲ್ ಸ್ಕೋರರ್ಸ್: ರೇಶ್ಮ ಉರ್ಕುಂದ್- 12ನಿ.
ನಿಹಾರಿಕ ತಕುರ್- 22, 30ನಿ.
ಅಶ್ವಿನಿ ಸಿಂಧೆ- 37ನಿ.
ಲಕ್ಷ್ಮಿ ಖಂದರೆ- 38ನಿ.
ಮನಲಿ ಖೆವಾಲ- 53, 55, 57, 62ನಿ.ತನ್ವಿ ಬದ್ಕಿ- 59, 61ನಿ.
ಶಾರೌ ಶಿವಂಕರ್- 67ನಿ.
ಪಂದ್ಯ ಎಂಟು- ಉತ್ತರಖಂಡ ಹಾಕಿ ತಂಡ ಮಣಿಸಿದ ಮಣಿಪುರ ತಂಡ 2-0
ಮಣಿಪುರ ಗೋಲ್ ಸ್ಕೋರರ್ಸ್:
ಗೀತಾರಾಣಿ ದೇವಿ- 5ನಿ.
ಚೌಬಾ ಚನು- 26ನಿ.
ರಾಷ್ಟ್ರೀಯ ಪುರುಷರ ಹಾಕಿ ಪಂದ್ಯಾವಳಿಗೆ ರಾಜ್ಯ ತಂಡ ಪ್ರಕಟ
ಮೈಸೂರು: ಲಕ್ನೋದಲ್ಲಿ ಮಾ.11ರಿಂದ ನಡೆಯುವ 4ನೇ ಹಾಕಿ ಇಂಡಿಯಾ ಹಿರಿಯ ಪುರುಷರ ರಾಷ್ಟ್ರೀಯ ಚಾಂಪಿಯನ್ಶಿಪ್ಗೆ ಹಾಕಿ ಕರ್ನಾಟಕವು 18 ಮಂದಿ ಆಟಗಾರರ ಹೆಸರನ್ನು ಪ್ರಕಟಿಸಿದೆ.
ಮಾ.11ರಿಂದ 23ರವರೆಗೆ ಲಕ್ನೋದಲ್ಲಿ ನಡೆಯುವ ಈ ತಂಡಕ್ಕೆ ಕಳೆದ ಮೂರು ವರ್ಷಗಳಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದವರನ್ನು ಆಯ್ಕೆ ಮಾಡಿದೆ.
ಸಾಯಿ ಹಾಕಿ ತಂಡದ ಐವರು ತಂಡದಲ್ಲಿ ಸ್ಥಾನ ಪಡೆದಿದ್ದರೆ, ಐಒಬಿ ತಂಡದ ನಾಲ್ವರು ಸೇರ್ಪಡೆಯಾಗಿದ್ದಾರೆ. ಅಂತೆಯೆ ಎಚ್ಎಎಲ್ ಮತ್ತು ಡಿವೈಇಎಸ್ನಿಂದ ತಲಾ ಇಬ್ಬರು ಆಯ್ಕೆಯಾಗಿದ್ದಾರೆ. ತಂಡದ ನಾಯಕನಾಗಿ ಐಒಬಿ ತಂಡದ ಎಂ.ಕೆ. ಮುದಪ್ಪ, ಉಪ ನಾಯಕನಾಗಿ ಸಾಯಿ ತಂಡದ ಪಿ. ಪ್ರಧಾನ್ ಸೋಮಣ್ಣ ಆಯ್ಕೆಯಾಗಿದ್ದಾರೆ.
ತಂಡದ ವಿವರ: ಎಂ.ಕೆ. ಮುದ್ದಪ್ಪ(ಐಒಬಿ) ನಾಯಕ, ಪಿ. ಪ್ರಧಾನ್ ಸೋಮಣ್ಣ(ಸಾಯಿ) ಉಪ ನಾಯಕ, ಜಗದೀಪ್ ದಯಾಳ್(ಸಾಯಿ), ಕೆ.ಎಚ್. ಶಾನ್(ಐಒಬಿ), ಬಿ.ಎಸ್. ಬಿದ್ದಪ್ಪ(ಐಒಬಿ), ಸಿ.ಕೆ. ಸೋಮಣ್ಣ(ಸೆಂಟ್ರಲ್ ಎಕ್ಸೈಜ್), ಕೆ.ಬಿ. ಪೊನ್ನಣ್ಣ(ಎಚ್ಎಎಲ್), ಎಸ್.ಎಂ. ರಫೀಕ್(ಐಒಬಿ), ವಿ.ಟಿ. ರತನ್ ಮುತ್ತಣ್ಣ(ಸಾಯಿ), ಬಿ.ಪಿ. ಚಂಗಪ್ಪ(ಎಚ್ಎಎಲ್), ಧೀರನ್ ಉತ್ತಪ್ಪ(ಎಂಇಜಿ), ಪಿ.ಆರ್. ಮುತ್ತಣ್ಣ(ಎಂಇಜಿ), ಬಿ.ಎಂ. ಮೋಹನ್ ಮುತ್ತಣ್ಣ(ಸಾಯಿ), ಪಿ.ಎಲ್. ತಿಮ್ಮಣ್ಣ(ಸಾಯಿ), ಬಿ.ವೈ. ಬಿಜು(ಸಾಯಿ), ಜೆ.ಪಿ. ಕುಶ(ಡಿವೈಇಎಸ್), ಶಂಕರ್ ಪಾಟೀಲ್(ಎಜಿಒಆರ್ಸಿ) ಮತ್ತು ಎಚ್.ಎಸ್. ಅಭಿಷೇಕ್(ಡಿವೈಇಎಸ್).
ತಂಡದ ಕೋಚ್ಗಳಾಗಿ ಬಿ.ಜೆ. ಕರಿಯಪ್ಪ ಮತ್ತು ಕೆ.ಕೆ. ಪೂಣಚ ಅವರನ್ನು ಆಯ್ಕೆ ಮಾಡಿರುವುದಾಗಿ ಹಾಕಿ ಕರ್ನಾಟಕ ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

