ಕರ್ನಾಟಕಕ್ಕೆ ಗುಜರಾತ್ ಸವಾಲು
ಕೋಲ್ಕತಾ: ರಣಜಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗುವ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಪ್ರಭುತ್ವ ಸಾಧಿಸಿದ ಕರ್ನಾಟಕ ತಂಡ, ಈಗ ದೇಶದ ಪ್ರಮುಖ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿಯಲ್ಲೂ ಪ್ರಶಸ್ತಿ ಎತ್ತಿ ಹಿಡಿಯಲು ಸಜ್ಜಾಗಿದೆ.
ಮಂಗಳವಾರದಿಂದ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಹಂತ ಆರಂಭವಾಗಲಿದ್ದು, ಇಲ್ಲಿನ ಜಾಧವ್‌ಪುರ್ ಯುನಿವರ್ಸಿಟಿ ಕಾಂಪ್ಲೆಕ್ಸ್‌ನಲ್ಲಿ ನಡೆಯುವ ಪಂದ್ಯದಲ್ಲಿ ಕರ್ನಾಟಕ ತಂಡ ಗುಜರಾತ್ ತಂಡವನ್ನು ಎದುರಿಸಲಿದೆ.
ಕರ್ನಾಟಕ ತಂಡ ದಕ್ಷಿಣ ವಲಯದ ಸುಬ್ಬಯ್ಯ ಪಿಳ್ಳೈ ಟ್ರೋಫಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ವಿಜಯ್ ಹಜಾರೆಯ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಿತು. ಇನ್ನು ಗುಜರಾತ್ ತಂಡ ಪಶ್ಚಿಮ ವಲಯದಲ್ಲಿ ಅಗ್ರ ಸ್ಥಾನವನ್ನು ಪಡೆಯುವ ಮೂಲಕ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿದೆ.
ಕರ್ನಾಟಕ ತಂಡ ಐದು ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಗೆಲವು, ಒಂದರಲ್ಲಿ ಸೋಲು ಹಾಗೂ ಒಂದರಲ್ಲಿ ಟೈ ಫಲಿತಾಂಶವನ್ನು ಪಡೆದು 14 ಅಂಕಗಳನ್ನು ಸಂಪಾದಿಸಿತ್ತು. ಕರ್ನಾಟಕ ತಂಡ ತಮಿಳುನಾಡು ವಿರುದ್ಧದ ಕಡೇಯ ಪಂದ್ಯದಲ್ಲಿ ಹೊರತಾಗಿ ಉಳಿದ ಎಲ್ಲಾ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿತ್ತು.
ಕರ್ನಾಟಕ ತಂಡದ ಪರ ರಾಬಿನ್ ಉತ್ತಪ್ಪ, ಕೆ.ಎಲ್ ರಾಹುಲ್, ಮನೀಷ್ ಪಾಂಡೆ, ಮಾಯಾಂಕ್ ಅಗರ್‌ವಾಲ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಎಚ್.ಎಸ್ ಶರತ್ ವೇಗದ ಅಸ್ತ್ರವಾಗಿದ್ದಾರೆ.
ಇನ್ನು ಗುಜರಾತ್ ತಂಡದ ಪ್ರದರ್ಶನ ನೋಡುವುದಾದರೆ, ಗುಜರಾತ್ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ 3ರಲ್ಲಿ ಗೆಲವು 1ರಲ್ಲಿ ಸೋಲನುಭವಿಸಿ 12 ಅಂಕ ಪಡೆದಿತ್ತು. ಗುಜರಾತ್ ತಂಡದ ಪರ ಪಾರ್ಥೀವ್ ಪಟೇಲ್, ಮನ್‌ಪ್ರೀತ್ ಜುನೇಜಾ, ರಾಕೇಶ್ ಧ್ರುವ್, ವೇಣುಗೋಪಾಲ್ ರಾವ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
ಒಟ್ಟಿನಲ್ಲಿ ಎರಡೂ ತಂಡಗಳನ್ನು ಹೋಲಿಸಿದರೆ, ಕರ್ನಾಟಕ ಹೆಚ್ಚು ಸಮತೋಲನದಿಂದ ಕೂಡಿದ್ದು, ಗೆಲ್ಲುವ ಫೆವರಿಟ್ ತಂಡವಾಗಿದೆ.
ತಂಡಗಳು
ಕರ್ನಾಟಕ
ಆರ್.ವಿನಯ್ ಕುಮಾರ್(ನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್ ರಾಹುಲ್, ಮಾಯಾಂಕ್ ಅಗರ್‌ವಾಲ್, ಮನೀಷ್ ಪಾಂಡೆ, ಗಣೇಶ್ ಸತೀಶ್, ಕರುಣ್ ನಾಯರ್, ಅಮಿತ್ ವರ್ಮಾ, ಕುನಾಲ್ ಕಪೂರ್, ಶ್ರೇಯಸ್ ಗೋಪಾಲ್, ಅಬ್ರಾರ್ ಖಾಜಿ, ಎಚ್.ಎಸ್ ಶರತ್, ಅಭಿಮನ್ಯು ಮಿಥುನ್, ಎಸ್.ಅರವಿಂದ್, ರೋನಿತ್ ಮೊರೆ.
ಗುಜರಾತ್
ಪಾರ್ಥೀವ್ ಪಟೇಲ್(ನಾಯಕ), ಮನ್‌ಪ್ರೀತ್ ಜುನೇಜಾ, ಹಿಮಾಲಯ್ ಬರಾದ್, ಜಸ್‌ಪ್ರೀತ್ ಬುಮ್ರಾ, ಜೇಸಲ್ ಕಾರಿಯಾ, ಭಾರ್ಗವ್ ಮೆರಾಯ್, ಧ್ರುವ್ ರಾವಲ್, ವೇಣುಗೋಪಾಲ್ ರಾವ್, ಮೆಹುಲ್ ಪಟೇಲ್, ರೋಹಿತ್ ದಹಿಯಾ, ರುಜುಲ್ ಭಟ್, ರಾಕೇಶ್ ಧ್ರುವ್, ಅಬ್ದುಲಾಹದ್ ಮಲೆಕ್, ಅಕ್ಷರ್ ಪಟೇಲ್, ಕಮಲೇಶ್ ಠಾಕೂರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

