ಕ್ರೀಡೆ

3ನೇ ಸುತ್ತಿನಲ್ಲೇ ಮುಗ್ಗರಿಸಿದ ನಡಾಲ್

Published On :

ಇಂಡಿಯಾನ ವೆಲ್ಸ್: ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ರಾಫೆಲ್ ನಡಾಲ್ ತಮ್ಮ ಎದುರಾಳಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ವಿರುದ್ಧ 3-6, 6-3, 6-7(5-7) ಸೆಟ್‌ಗಳ ಅಂತರದಲ್ಲಿ ಮಣಿದಿದ್ದಾರೆ. ಡೊಲ್ಗೊಪೊಲೊವ್ ತಮ್ಮ ಮುಂದಿನ ಪಂದ್ಯದಲ್ಲಿ ಇಟಲಿಯ ಫ್ಯಾಬಿಯೊ ಫೊಗ್ನಿನಿ ಅವರನ್ನು ಎದುರಿಸಲಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಶರಪೋವಾ ಸೋಲನುಭವಿಸಿದ್ದಾರೆ. 2 ಗಂಟೆ 36 ನಿಮಿಷಗಳ ಕಾಲ ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ 79ನೇ ರ್ಯಾಂಕಿಂಗ್‌ನ ಇಟಲಿಯ ಕ್ಯಾಮಿಲಾ ಗ್ಯೊರ್ಗಿ, ನಾಲ್ಕನೇ ಶ್ರೇಯಾಂಕಿತ ಮಾರಿಯಾ ಶರಪೋವಾ ಅವರನ್ನು 6-3, 4-6, 7-5 ಸೆಟ್‌ಗಳ ಅಂತರದಲ್ಲಿ ಪಾರಾಭವಗೊಳಿಸಿದರು.
ಇಟಲಿಯ ಆಟಗಾರ್ತಿ ತಮ್ಮ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟೋಸೂರ್ ಅವರನ್ನು ಎದುರಿಸಲಿದ್ದಾರೆ.
ಗೆದ್ದ ಮರ್ರೆ,ಫೆಡರರ್: ಬ್ರಿಟನ್‌ನ ಆ್ಯಂಡಿ ಮರ್ರೆ ತಮ್ಮ ಎದುರಾಳಿ ಜೆಕ್ ಗಣರಾಜ್ಯದ ತಾರೆ ಜಿರಿ ವೆಸೆಲಿ ವಿರುದ್ಧ 6-7 (2-7), 6-4, 6-4 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಮರ್ರೆ ತಮ್ಮ ಮುಂದಿನ ಪಂದ್ಯದಲ್ಲಿ ಕೆನಾಡಾದ ಮಿಲೊಸೊ ರೌನಿಕ್ ಅಥವಾ ಕೊಲಂಬಿಯಾದ ಅಲೆಕ್ಸಾಂಡ್ರೊ ಫಲ್ಲಾ ಅವರನ್ನು ಎದುರಿಸಲಿದ್ದಾರೆ.
ಇನ್ನು ಮತ್ತೊಂದು ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್, ರಷ್ಯಾದ ಡಿಮಿಟ್ರಿ ಟುರ್ಸುನೋವ್ ವಿರುದ್ಧ 7-6 (9-7), 7-6 (7-2) ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಚೀನಾದ ಲೀ ನಾ, ತಮ್ಮ ಎದುರಾಳಿ ಜೆಕ್ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೋವಾ ವಿರುದ್ಧ 6-3, 6-4 ನೇರ ಸೆಟ್‌ಗಳ ಸುಲಭ ಗೆಲವು ದಾಖಲಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.