ಹೈಕೊ ಓಪನ್: 2ನೇ ಸುತ್ತಿಗೆ ಅಡ್ವಾಣಿ
ನವದೆಹಲಿ: ಎಂಟು ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಂಕಜ್ ಅಡ್ವಾಣಿ ಹೈಕೊ ವರ್ಲ್ಡ್ ಓಪನ್ ಸ್ನೂಕರ್ ಪಂದ್ಯಾವಳಿಯ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಚೀನಾದಲ್ಲಿ ಹೈನಾನ್ ಪ್ರೊವಿನ್ಸ್ ಕ್ಯಾಪಿಟಲ್ನಲ್ಲಿ ಮಂಗಳವಾರ ಆರಂಭವಾದ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅಡ್ವಾಣಿ 25ನೇ ರ್ಯಾಂಕಿಂಗ್ನ ಕ್ಸಿಯಾವ್ ಗೌಡೊಂಗ್ ಅವರಿಂದ ಪ್ರಬಲ ಪೋಪೋಟಿ ಎದುರಿಸಿದರು. ಅದಾಗ್ಯೂ ಅಡ್ವಾಣಿ ಪಂದ್ಯದಲ್ಲಿ ಗೆಲವಿನ ನಗೆ ಬೀರುವಲ್ಲಿ ಯಶಸ್ವಿಯಾದರು. ತವರಿನ ಅಂಗಣದಲ್ಲಿ ಭಾರತದ ಪ್ರಮುಖ ಆಟಗಾರನ ವಿರುದ್ಧ ಹೋರಾಟಕಾರಿ ಪ್ರದರ್ಶನ ನೀಡಿದ ಕ್ಸಿಯಾವ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಆರಂಭಿಕ ಸುತ್ತಿನಲ್ಲಿ ಅಡ್ವಾಣಿ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಹಸಪಡಬೇಕಾಯಿತು. ಹಾಗಾಗಿ ಅವರು ಆರಂಭದಲ್ಲಿ ಹೆಚ್ಚು ಪರಿಶ್ರಮ ಪಟ್ಟರು.
ಮೊದಲ ಫ್ರೇಮ್ನಲ್ಲಿ ಹಿನ್ನಡೆ ಅನುಭವಿಸಿದ ಅಡ್ವಾಣಿ ಎರಡನೇ ಫ್ರೇಮ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 51 ಬ್ರೇಕ್ ಪಾಯಿಂಟ್ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಸುತ್ತಿನಲ್ಲಿ ಅಡ್ವಾಣಿ 20 ಅಂಕಗಳ ಹಿನ್ನಡೆ ಹೊಂದಿದ್ದರೂ ಉತ್ತಮ ಪ್ರದರ್ಶನ ನೀಡುವ ಮೂಲಕ ಈ ಫ್ರೇಮ್ನಲ್ಲಿ ಮೇಲುಗೈ ಸಾಧಿಸಿದರು. ಒಂದು ಹಂತದಲ್ಲಿ ಚೀನಾದ ಆಟಗಾರ 61 ಬ್ರೇಕ್ ಪಾಯಿಂಟ್ ಮಾಡುವ ಮೂಲಕ ಅಡ್ವಾಣಿ ಮುನ್ನಡೆ ಸಾಧಿಸಿದ್ದರು. ಆದರೆ ನಂತರದ ಅವಧಿಯಲ್ಲಿ ಸತತವಾಗಿ ಅವಕಾಶವನ್ನು ಕೈಚೆಲ್ಲಿದ ಹಾಗೂ ಫೌಲ್ ಮಾಡುವ ಮೂಲಕ ಹಿನ್ನಡೆ ಅನುಭವಿಸಿದರು.
ಕ್ಸಿಯಾವ್ 3-1 ಅಂತರದ ಮುನ್ನಡೆ ಪಡೆದುಕೊಂಡಿದ್ದರು. ಆನಂತರ 70 ಬ್ರೇಕ್ ಪಾಯಿಂಟ್ ಪಡೆದ ಅಡ್ವಾಣಿ ಅಂತರವನ್ನು 2-3ಕ್ಕೆ ಕಡಿಮೆ ಮಾಡಿಕೊಂಡರು.
ನಂತರ ಆರನೇ ಸುತ್ತು ಸಹ ಸಮಬಲದ ಹೋರಾಟದಿಂದ ಕೂಡಿತ್ತು. ನಂತರದ ಎರಡು ಸುತ್ತುಗಳನ್ನು ಉಭಯ ಆಟಗಾರರು ತಲಾ ಒಂದರಂತೆ ಗೆದ್ದುಕೊಳ್ಳುವ ಮೂಲಕ 4-4 ಅಂತರದ ಸಮಬಲ ಸಾಧಿಸಿದರು. ಅಂತಿಮ ಫ್ರೇಮ್ಅನ್ನು ಗೆದ್ದುಕೊಂಡ ಅಡ್ವಾಣಿ ಈ ವೇಳೆ ಬೆಸ್ಟ್ ಆಫ್ 9ನಲ್ಲಿ 5-4ರ ಮುನ್ನಡೆಯೊಂದಿಗೆ ಗೆಲವು ಸಾಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

