ಕ್ರೀಡೆ

ಕರ್ನಾಟಕಕ್ಕೆ ಮಹಾರಾಷ್ಟ್ರ ಮೊದಲ ಎದುರಾಳಿ

Published On :

-ಡಿ.ಎನ್. ಮಹೇಂದ್ರ
ಮೈಸೂರು:
ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿಯ ಎ ವಿಭಾಗದ ಲೀಗ್ ಪಂದ್ಯಾವಳಿಯಲ್ಲಿ ಆತಿಥೇಯ ಕರ್ನಾಟಕಕ್ಕೆ ಮಹಾರಾಷ್ಟ್ರ ತಂಡ ಮೊದಲ ಎದುರಾಳಿಯಾಗಿದೆ.
ಪಂದ್ಯಾವಳಿಯು ಶನಿವಾರದಿಂದ ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್‌ನಲ್ಲಿ ಆರಂಭಗೊಳ್ಳಲಿದ್ದು, ಕರ್ನಾಟಕ ತಂಡ ಮಂಗಳವಾರ ತಮ್ಮ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ. ಹಾಕಿ ಕರ್ನಾಟಕ ಆಯೋಜಿಸಿರುವ ಈ ಪಂದ್ಯಾವಳಿಯ ಬಿ ವಿಭಾಗದ ಪಂದ್ಯಗಳು ಗುರುವಾರ ಅಂತ್ಯಗೊಂಡವು. ಈ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. ಹಾಗಾಗಿ ಎ ವಿಭಾಗದಲ್ಲಿ ರಾಜ್ಯ ತಂಡದ ಪ್ರದರ್ಶನ ಯಾವ ರೀತಿ ಹೊರಬರಲಿದೆ ಎಂಬುದನ್ನು ಕಾದು ನೋಡಬೇಕು. ಶನಿವಾರದಿಂದ ಎ ವಿಭಾಗದ ಪಂದ್ಯಾವಳಿ ಆರಂಭವಾಗಲಿದ್ದು, ಬೆಳಗ್ಗೆ 7ಕ್ಕೆ ಹಾಕಿ ಜಾರ್ಖಂಡ್ ಮತ್ತು ಬಂಗಾಳ ಹಾಕಿ ತಂಡಗಳು ಮುಖಾಮುಖಿ ಆಗಲಿವೆ. ನಂತರ 8.30ಕ್ಕೆ ಉತ್ತರಪ್ರದೇಶ ಹಾಕಿ ಮತ್ತು ಮಹಾರಾಷ್ಟ್ರ ತಂಡ ಸೆಣಸಲಿವೆ. ಮಧ್ಯಾಹ್ನ 2.30ಕ್ಕೆ ಹಾಕಿ ಹರ್ಯಾಣ ಮತ್ತು ಸಾಯ್ ಹಾಗೂ ಸಂಜೆ 4ಕ್ಕೆ ತಮಿಳುನಾಡು ಮತ್ತು ರಾಜಸ್ಥಾನ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯಾವಳಿಯಲ್ಲಿ ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ(ಮಾ.18) ವಿರುದ್ಧ, ಎರಡನೇ ಪಂದ್ಯದಲ್ಲಿ ಭೂಪಾಲ್(ಮಾ.19), ಮೂರನೇ ಪಂದ್ಯದಲ್ಲಿ ದೆಹಲಿ(ಮಾ.20) ವಿರುದ್ಧ ಸೆಣೆಸಲಿದೆ. ಈ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ ಹಾಕಲಿದೆ. ಮಾ.22ಕ್ಕೆ ಸೆಮಿಫೈನಲ್ ಹಾಗೂ ಮಾ.23ಕ್ಕೆ ಫೈನಲ್ ಪಂದ್ಯಗಳು ನಡೆಯಲಿದೆ.

ಗುಂಪುಗಳ ವಿವರ
- ಎ ಗುಂಪು- ಹಾಕಿ ಹರ್ಯಾಣ, ಹಾಕಿ ಯೂನಿಟಿ ತಮಿಳುನಾಡು, ಸ್ಪೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾ(ಸಾಯ್) ಮತ್ತು ರಾಜಸ್ಥಾನ.
- ಬಿ ಗುಂಪು- ಮಧ್ಯಪ್ರದೇಶ ಹಾಕಿ ಅಕಾಡೆಮಿ, ಹಾಕಿ ದೆಹಲಿ, ಹಾಕಿ ಕರ್ನಾಟಕ ಮತ್ತು ಹಾಕಿ ಭೂಪಾಲ್.
- ಸಿ ಗುಂಪು- ಹಾಕಿ ಜಾರ್ಖಂಡ್, ಉತ್ತರಪ್ರದೇಶ ಹಾಕಿ, ಬೆಂಗಾಳ್ ಹಾಕಿ ಅಸೋಸಿಯೇಷನ್ ಮತ್ತು ಹಾಕಿ ಮಹಾರಾಷ್ಟ್ರ.
-ಡಿ ಗುಂಪು- ಹಾಕಿ ಪಂಜಾಬ್, ಹಾಕಿ ಒಡಿಶಾ, ಮುಂಬೈ ಹಾಕಿ ಅಸೋಸಿಯೇಷನ್ ಮತ್ತು ಹಾಕಿ ಬಿಹಾರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.