ಗೆದ್ದ ಸಿಂಧು, ಕಶ್ಯಪ್, ಸೋತ ಸೈನಾ

ಬಾಸೆಲ್: ಭಾರತ ತಂಡದ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ ಸಿಂಧು ಹಾಗೂ ಪಿ.ಕಶ್ಯಪ್ ತಮ್ಮ ಉತ್ತಮ ಪ್ರದಶಂನದ ಮೂಲಕ ಸ್ವಿಸ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ. ಆದರೆ ಒಲಿಂಪಿಕ್ಸ್ ಪದಕ ವಿಜೇತೆ ಸೈನಾ ನೆಹ್ವಾಲ್ ಟೂರ್ನಿಯಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸಿಂಧು, ಎರಡನೇ ಶ್ರೇಯಾಂಕಿತೆ ಶಿಕ್ಸಿಯಾನ್ ವಾಂಗ್ ವಿರುದ್ಧ 21-17, 21-15 ನೇರ ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸುವ ಮೂಲಕ ಅಚ್ಚರಿಯ ಮೂಡಿಸಿದರು.
ಶಿಕ್ಸಿಯಾನ್ ಇತ್ತೀಚೆಗೆ ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲವು ದಾಖಲಿಸಿದ್ದರು. ಶಿಕ್ಸಿಯಾನ್ ಪಂದ್ಯಾವಳಿ ಗೆಲ್ಲುವ ಫೆವರಿಟ್ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದು, ಇವರ ವಿರುದ್ಧ ಸಿಂಧು ಸುಲಭ ಗೆಲವು ದಾಖಲಿಸಿರುವುದು ಗಮನಾರ್ಹ ಪ್ರದರ್ಶನವಾಗಿದೆ. ಆರಂಭದಿಂದಲೂ ನಿಯಂತ್ರಣ ಸಾಧಿಸಿದ ಸಿಂಧು ಮೊದಲ ಸೆಟ್ ಅನ್ನು 12-17 ಅಂತರದಿಂದ ಮುನ್ನಡೆ ಪಡೆದರು. ನಂತರ ಎರಡನೇ ಸೆಟ್ನಲ್ಲೂ ಅದೇ ಪ್ರದರ್ಶನ ಮುಂದುವರಿಸಿದ ಸಿಂಧು 21-15 ಅಂತರದ ಮೇಲುಗೈ ಸಾಧಿಸಿ ಉಂಪಾತ್ಯದ ಸುತ್ತಿಗೆ ಲಗ್ಗೆ ಹಾಕಿದರು.
ಸೋತ ಸೈನಾ: ಇನ್ನು ಭಾರತದ ಮತ್ತೊರ್ವ ಪ್ರಮುಖ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಪಂದ್ಯವಳಿಯಿಂದ ಹೊರ ಬಿದ್ದಿದ್ದಾರೆ. ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿಶ್ವದ ಮೂರನೇ ರ್ಯಾಂಕಿಂಗ್ನ ಯೀಹಾನ್ ವಾಂಗ್ ವಿರುದ್ಧ 17-21, 2-21 ಸೆಟ್ಗಳ ಅಂತರದಲ್ಲಿ ಮುಖಭಂಗ ಅನುಭವಿಸಿದರು.
ಮೊದಲನೇ ಸೆಟ್ನಲ್ಲಿ ಎದುರಾಳಿಗೆ ಪ್ರತಿರೋಧ ತೋರಿದ ಸೈನಾ, ಎರಡನೇ ಸೆಟ್ನಲ್ಲಿ ಸುಲಭವಾಗಿ ಶರಣಾದರು. ಈ ಮೂಲಕ ಸೈನಾ ವಾಂಗ್ ವಿರುದ್ಧ 7ನೇ ಬಾರಿಗೆ ಸೋಲನುಭವಿಸಿದ್ದಾರೆ.
ಕಶ್ಯಪ್ಗೆ ಜಯ: ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿ.ಕಶ್ಯಪ್ ಗೆಲವು ದಾಖಲಿಸಿದ್ದಾರೆ. 6ನೇ ಶ್ರೇಯಾಂಕಿತ ಚೈನೀಸ್ ತೈಪೆನ ಥೈನ್ ಚೆನ್ ಚು ವಿರುದ್ಧ ಗೆಲವು ದಾಖಲಿಸಿದ್ದಾರೆ.
1 ಗಂಟೆ 14 ನಿಮಿಷಗಳ ಕಾಲ ನಡೆದ ರೋಚಕ ಪಂದ್ಯದಲ್ಲಿ ಕಶ್ಯಪ್ 21-15, 21-23, 21-18 ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿದರು. ಕಶ್ಯಪ್ ಉಪಾಂತ್ಯದ ಸುತ್ತಿನಲ್ಲಿ ವಿಶ್ವದ 27ನೇ ರ್ಯಾಂಕಿಂಗ್ನ ಚೀನಾದ ಹುವೈ ಥೈನ್ ವಿರುದ್ಧ ಕಾದಾಟ ನಡೆಸಲಿದ್ದಾರೆ.
ಆನಂದ್ಗೆ ಗೆಲವು
ಖಾಂಟಿ ಮನ್ಸಿಸ್ಕ್(ರಷ್ಯಾ): ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿರುವ ಭಾರತದ ಚೆಸ್ ತಾರೆ ವಿಶ್ವನಾಥನ್ ಆನಂದ್ ಅವರು ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಶಕಿರೀಯಾ ಮಮೆದ್ಯಾರೊವ್ ವಿರುದ್ಧ ಗೆಲವು ದಾಖಲಿಸಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ವಿಶ್ವನಾಥನ್ ಆನಂದ್ ತಮ್ಮ ಎದುರಾಳಿ ಅಜರ್ಬಜೇನ್ನ ಮಮೆದ್ಯರೊವ್ ವಿರುದ್ಧ ಗೆಲವು ದಾಖಲಿಸುವ ಮೂಲಕ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲವು ಸಂಪಾದಿಸಿದರು. ಈ ಮೂಲಕ ಆರಂಭಿಕ ಮೂರು ಪಂದ್ಯಗಳಿಂದ 2.5 ಅಂಕಗಳನ್ನು ಸಂಪಾದಿಸಿರುವ ಆನಂದ್, ರಷ್ಯಾದ ಪೀಟರ್ ಸ್ವಿಡ್ಲರ್ ಜತೆಗೆ ಜಂಟಿ ಅಗ್ರ ಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ ಕಪ್ಪುಕಾಯಿಯನ್ನು ಬಳಸಿದ ಆನಂದ್ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಪಂದ್ಯದ ಮಧ್ಯಭಾಗದಲ್ಲೇ ಗೆಲವಿನ ಅವಕಾಶ ಕಂಡ ಆನಂದ್ ಉತ್ತಮ ರೀತಿಯಲ್ಲಿ ಕಾಯಿಗಳನ್ನು ನಡೆಸಿದರು. 24ನೇ ನಡೆಯಲ್ಲಿ ರಾಣಿ ಕಾಯಿಯಿಂದ ಆಕ್ರಮಣಮಾಡಿದ ಆನಂದ್, ಎದುರಾಳಿಯ ಮೇಲೆ ಒತ್ತಡ ಹಾಕಿದರು. ನಂತರ 31ನೇ ನಡೆಯಲ್ಲಿ ಆನಂದ್ ಪಂದ್ಯಕ್ಕೆ ತೆರೆ ಎಳೆಯುವಲ್ಲಿ ಯಶಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


