ವಿಶ್ವಕಪ್ ಬಳಿಕ ಟಿ-20ಗೆ ಸಂಗಕ್ಕಾರ ವಿದಾಯ
ಕೋಲಂಬೊ: ಶ್ರೀಲಂಕಾದ ಹಿರಿಯ ಬ್ಯಾಟ್ಸ್ಮನ್ ಕುಮಾರ ಸಂಗಕ್ಕಾರ ಅವರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಪಂದ್ಯಾವಳಿ ನಂತರ ಅಂತಾರಾಷ್ಟ್ರಿಯ ಕಿರು ಮಾದರಿಯ ಪಂದ್ಯಾವಳಿಯಿಂದ ನಿವೃತ್ತಿಯಾಗಲಿದ್ದಾರೆ.
ಬಾಂಗ್ಲಾದೇಶದಲ್ಲಿನ ಟೂರ್ನಿಯ ಬಳಿಕ ಟಿ-20ಗೆ ವಿದಾಯ ಹೇಳಲಿದ್ದೇನೆ ಎಂದು 36 ವರ್ಷದ ಸಂಗಕ್ಕಾರ, ಭಾನುವಾರ ಸ್ವತಃ ಈ ವಿಷಯ ತಿಳ್ನಿದರು.
ಖಂಡಿತವಾಗಿಯೂ ಇದು ನನ್ನ ಕೊನೆಯ ಟಿ-20 ವಿಶ್ವಕಪ್ ಪಂದ್ಯಾವಳಿಯಾಗಿದೆ. ಈ ಟೂರ್ನಿ ನಂತರ ಯಾವುದೇ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡುವುದಿಲ್ಲ. ಇದು ಬೇಸರ ಎನ್ನಿದರೂ, ನಿಜ ಸಂಗತಿ ಎಂದು ಸಂಗಕ್ಕಾರ ಹೇಳಿಕೆ ಉಲ್ಲೇಖ್ನಿ ಸಂಡೆ ಐಸಲ್ಯಾಂಡ್ ವರದಿ ಮಾಡಿದೆ.
ಆದರೆ, ಇದೇ ನನ್ನ ಟಿ-20 ಪಂದ್ಯಾವಳಿ ಏನಲ್ಲ. ಫ್ರಾಂಚ್ನೈ ಮೂಲದ ಟಿ-20 ಪಂದ್ಯಗಳನ್ನು ಮಾತ್ರ ಆಡಲಿದ್ದೇನೆ. ಯುವಕರಿಗೆ ಅವಕಾಶ ಬಿಟ್ಟುಕೊಡುವ ಉದ್ದೇಶದಿಂದ ಅಂತಾರಾಷ್ಟ್ರೀಯ ಟಿ-20ಗೆ ಗುಡ್ಬೈ ಹೇಳುತ್ತಿದ್ದೇನೆ ಎಂದು ಸಂಗಕ್ಕಾರ ಪ್ರತಿಕ್ರಿಯ್ನಿದ್ದಾರೆ.
ಶ್ರೀಲಂಕಾದ ಮಾಜಿ ನಾಯಕರೂ ಆದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಾತ್ರ ಏಕದಿನ ಪಂದ್ಯಾವಳಿಯಲ್ಲಿ ಮುಂದುವರಿಯಲಿದ್ದು, ಕನಿಷ್ಠ ಮುಂಬರುವ ವಿಶ್ವಕಪ್ವರೆಗೂ (2015ರಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಆತಿಥ್ಯದಲ್ಲಿ ನಡೆಯಲಿರುವ) ಆಡುವ ಉತ್ಸುಕತೆ ಹೊಂದಿದ್ದೇನೆ ಎಂದು ಸಂಗಕ್ಕಾರ ಹೇಳಿದ್ದಾರೆ.
ಸಂಗಕ್ಕಾರ ಅವರು 2009ರ ವಿಶ್ವಕಪ್ ಟಿ-20 ಪಂದ್ಯಾವಳಿಯ ಫೈನಲ್ನಲ್ಲಿ ಶ್ರೀಲಂಕಾವನ್ನು ಮುನ್ನಡ್ನೆದ್ದರು. ಅಲ್ಲದೆ, 2012ರಲ್ಲೂ ಸಹ ಮತ್ತೊಮ್ಮೆ ಇವರ ನಾಯಕತ್ವದಲ್ಲಿಯೇ ಲಂಕಾ ಪ್ರಶ್ನ್ತ ಸುತ್ತು ಪ್ರವೇಶ್ನಿತ್ತು. ಆದರೆ, ದುರದೃಷ್ಟವಶಾತ್ ಈ ಎರಡೂ ಬಾರಿ ಶ್ರೀಲಂಕಾ ಸೋಲಿನ ಕಹಿ ಅನುಭವ್ನಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಹೊಂದಬೇಕಾಯಿತು.
ಸಂಗಕ್ಕಾರ ಒಟ್ಟು 50 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನಾಡಿದ್ದು 32.77ರ ಸರಾಸರಿಯಲ್ಲಿ 1311 ರನ್ ಗಳ್ನಿದ್ದಾರೆ. ಇದರಲ್ಲಿ 7 ಅರ್ಧಶತಕಗಳು ಸೇರಿದ್ದು, 78 ರನ್ಗಳಿಕೆ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಮಿಚೆಲ್ ಜಾನ್ಸನ್ ಔಟ್
ಮೆಲ್ಬೋರ್ನ್: ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಜಾನ್ಸನ್ ಗಾಯದ ಸಮಸ್ಯೆಯಿಂದಾಗಿ ಐ್ನ್ನ ಟಿ-20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಡಗ್ ಬೋಲಿಂಗರ್ಗೆ ಅವಕಾಶ ಲಭ್ನಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಭಾನುವಾರ ಈ ವಿಷಯ ತಿಳ್ನಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಜಾನ್ಸನ್ ಬಲಗಾಲಿನ ಹೆಬ್ಬೆರೆಳಿನ ನೋವಿಗೆ ಒಳಗಾಗಿದ್ದಾರೆ. ಹಾಗಾಗಿ, ವಿಶ್ವಕಪ್ನಿಂದ ಅವರು ಹೊರಗುಳಿಯಲಿದ್ದಾರೆ. ಅವರ ಬದಲಿಗೆ ಬೋಲಿಂಗರ್ಗೆ ಸ್ಥಾನ ನೀಡಲಾಗಿದೆ ಎಂದು ಹೇಳಿದೆ.
ಗಾಯದಿಂದ ಸಂಪೂರ್ಣ ಗುಣಮುಖರಾಗಲು ಜಾನ್ಸನ್ಗೆ ವಿಶ್ರಾಂತಿಯ ಅಗತ್ಯವಿದೆ. ಹಾಗಾಗಿ, ಅವರು ವಿಶ್ವಕಪ್ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ವೈದ್ಯಾಧಿಕಾರಿ ಡಾ. ಜ್ನ್ಟನ್ ಪೌಲೊನಿ ತಿಳ್ನಿದ್ದಾರೆ. ಜಾನ್ಸನ್ ಅನುಪ್ನ್ಥತಿ ಆಸ್ಟ್ರೇಲಿಯಾ ಪಾಲಿಗೆ ದೊಡ್ಡ ನಷ್ಟವೇ ಆಗಿದೆ. ಏಕೆಂದರೆ, ಅತ್ಯದ್ಭುತ ಫಾರ್ಮ್ನಲ್ಲಿದ್ದ ಅವರು ಟಿ-20 ಕದನದಲ್ಲಿ ಪ್ರಮುಖ ಅಸ್ತ್ರವಾಗಿದ್ದರು. ಈ ಮಧ್ಯೆ ಜಾನ್ಸನ್ ಸ್ಥಾನ ತುಂಬಲಿರುವ ಬೋಲಿಂಗರ್ 2011ರ ಅಕ್ಟೋಬರ್ನಿಂದ ಆಸ್ಟ್ರೇಲಿಯಾ ಪರ ಆಡಿಲ್ಲ. ಆದರೆ, ತವರಿನಲ್ಲಿ ನಡೆದ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಮಾತ್ರ ಅವರು ತಂಡದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

