ಕ್ರೀಡೆ

ವಿಶ್ವನಾಥನ್ ಆನಂದ್‌ಗೆ ಪೀಟರ್ ಸವಾಲು

Published On :

ಖಾಂಟಿ ಮನ್ಸಿಸ್ಕ್ (ರಷ್ಯಾ): ಅರ್ಧ ಅಂಕದ ಮುನ್ನಡೆಯೊಂದಿಗೆ ಕ್ಯಾಂಡಿಡಿಯಟ್ಸ್ ಚೆಸ್ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು, ಎರಡನೇ ವಿಶ್ರಾಂತಿ ದಿನದ ನಂತರ ಈಗ ಪೀಟರ್ ಸ್ವಿಡ್ಲೇರ್ ಅವರನ್ನು ಎದುರಿಸಲಿದ್ದಾರೆ.
ಆನಂದ್ ಇದುವರೆಗೂ ಆಡಿರುವ 6 ಪಂದ್ಯಗಳಿಂದ 4 ಅಂಕಗಳನ್ನು ಗಳಿಸಿಕೊಂಡದ್ದಾರೆ. ಇದರೊಂದಿಗೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಆರ್ಮೇನಿಯಾದ ಲೆವೋನ್ ಆ್ಯರೋನಿಯನ್ ಅವರಿಗಿಂತ ಅರ್ಧ ಅಂಕ ಮುಂದಿದ್ದಾರೆ.
ಎಂಟು ಆಟಗಾರರನ್ನು ಹೊಂದಿರುವ ಡಬಲ್ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಗೆಲ್ಲುವ ಫೇವರಿಟ್ ಯಾರು ಎಂಬುದು ಇದುವರೆಗೂ ಖಚಿತಪಟ್ಟಿಲ್ಲ. ಆದರೆ, ಪಂದ್ಯಾವಳಿಯಲ್ಲಿ ಮೊದಲ ದಿನದಿಂದಲೇ ಮುನ್ನಡೆ ಸಾಧಿಸಿರುವ ಆನಂದ್, ಅರ್ಧ ಅಂಕ ಮುನ್ನಡೆ ಸಾಧಿಸಿ ಅಗ್ರಸ್ಥಾನದಲ್ಲಿ ವಿಜೃಂಭಿಸಿದ್ದಾರೆ.
ಏತನ್ಮಧ್ಯೆ, ಕಡಿಮೆ ಶ್ರೇಯಾಂಕ ಹೊಂದಿದ್ದರೂ ಪಂದ್ಯಾವಳಿಯಲ್ಲಿ ಆಕರ್ಷಕ ಪ್ರದರ್ಶನ ತೋರುತ್ತಿರುವ ರಷ್ಯಾದ ದಿಮಿತ್ರಿ ಆ್ಯಂಡ್ರಿಕಿನ್, ಅವರು ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಾಗ್ನಸ್ ಕಾರ್ಲ್ಸನ್ ಅವರಿಗೆ ತೀವ್ರ ಪೈಪೋಟಿ ನೀಡಲಿದ್ದಾರೆ ಎಂಬುದು ಈಗಾಗಲೇ ದೃಢಪಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.