ಇಂದು ಭಾರತ ವನಿತೆಯರಿಗೆ ಲಂಕಾ ಸವಾಲು
ಸೈಲ್ಹೇಟ್: ಭಾರತದ ಮಹಿಳೆಯರು ವಿಶ್ವಕಪ್ ಟಿ-20 ಮಹಿಳಾ ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ ಸೋಮವಾರ ಶ್ರೀಲಂಕಾ ತಂಡವನ್ನು ಎದುರಿಸುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತದ ವನಿತೆಯರು ಹೆಚ್ಚಾಗಿ ಅಗ್ರ ಎದುರಾಳಿಗಳನ್ನು ಎದುರಿಸಿಲ್ಲ. ಅಲ್ಲದೆ, ಪ್ರಮುಖಘಟ್ಟದ ಸಿದ್ಧತೆಗಾಗಿ ನಡೆದ ಎರಡು ಅಭ್ಯಾಸ ಪಂದ್ಯಗಳಲ್ಲಿ ಮಿಶ್ರ ಫಲ ಅನುಭವಿಸಿದೆ. ನ್ಯೂಜಿಲೆಂಡ್ ವಿರುದ್ಧ 17 ರನ್ಗಳಿಂದ ಸೋಲನುಭವಿಸಿದ್ದ ತವರಿನ ಆಟಗಾರ್ತಿಯರು, ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾತ್ರ 26 ರನ್ಗಳಿಂದ ಗೆಲವು ದಾಖಲಿಸಿದ್ದರು.
ಆದರೆ, ಇದಕ್ಕೂ ಮುನ್ನ ನಡೆದಿದ್ದ ಶ್ರೀಲಂಕಾ ವಿರುದ್ಧದ ಅಂತಾರಾಷ್ಟ್ರೀಯ ಟಿ-20 ಸರಣಿಯನ್ನು ಭಾರತ ತಂಡ 1-2ರಿಂದ ಕಳೆದುಕೊಂಡಿತ್ತು. ಇದೀಗ ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡಕ್ಕೆ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶವಿದೆ.
ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದ್ದು ಅನುಭವಿ ಮಿಥಾಲಿ, ಮೂರನೇ ಕ್ರಮಾಂಕದ ಬದಲು ಆರಂಭಿಕ ಆಟಗಾರ್ತಿಯಾಗಿ ಬ್ಯಾಟಿಂಗ್ಗೆ ಆಗಮಿಸುತ್ತಿರುವುದು. ಇದು ಉತ್ತಮ ಫಲವನ್ನೇ ತಂದುಕೊಟ್ಟಿದೆ. ನ್ಯೂಜಿಲೆಂಡ್ ವಿರುದ್ಧ 42 ರನ್ ಹಾಗೂ ಐರ್ಲೆಂಡ್ ವಿರುದ್ಧ 53 ರನ್ಗಳಿಸಿದ್ದ ಆಕೆ, ನಾಳೆ ಶ್ರೀಲಂಕಾ ವಿರುದ್ಧವೂ ಇದೇ ಫಾರ್ಮ್ ಮುಂದುವರಿಸಿದರೆ, ಭಾರತಕ್ಕೆ ಗೆಲ್ಲುವ ಹೆಚ್ಚು ಅವಕಾಶಗಳಿರುತ್ತವೆ.
ಉಳಿದಂತೆ, ಭಾರತ ತಂಡ ಪೂನಂ ರೌತ್, ಜೂಲನ್, ಸುಲ್ತಾನಾ, ಶ್ರಾವಂತಿ ಅವರಂತಹ ಅನೇಕ ಪ್ರತಿಭಾನ್ವಿತ ಆಟಗಾರ್ತಿಯರನ್ನು ಒಳಗೊಂಡಿದ್ದು, ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ಈ ಮುನ್ನ 2009 ಮತ್ತು 2010ರ ಆವೃತ್ತಿಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯಗಳಲ್ಲಿ ಸೋಲನುಭವಿಸಿದ್ದ ಭಾರತದ ವನಿತೆಯರು 2012ರ ಆವೃತ್ತಿಯಲ್ಲಿ ಮಾತ್ರ ತೀರ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಇಲ್ಲಿ ಗುಂಪಿನಲ್ಲಿ ತಾವಾಡಿದ ಎಲ್ಲ ಮೂರೂ ಪಂದ್ಯಗಳಲ್ಲಿ ಸೋಲಿನ ಕಹಿ ಉಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

