ಕ್ರೀಡೆ

ಬೆಂಗಾಲ್-ಮುಂಬೈ ಡ್ರಾಗೆ ನಿಟ್ಟುಸಿರು

Published On :

ಕೋಲ್ಕತಾ: ಆತಿಥೇಯ ಈಸ್ಟ್ ಬೆಂಗಾಲ್ ಮತ್ತು ಮುಂಬೈ ಎಫ್‌ಸಿ ತಂಡಗಳು ಐ-ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಪರಸ್ಪರ 2-2 ಗೋಲುಗಳಿಂದ ಡ್ರಾ ಫಲಿತಾಂಶಕ್ಕೆ ಸಮಾಧಾನಗೊಂಡಿವೆ.
ಇಲ್ಲಿನ ಯುವ ಭಾರತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿದರೂ ಸಹ ನಿಚ್ಚಳ ಗೆಲವು ದಾಖಲಿಸುವಲ್ಲಿ ಯಶಸ್ಸು ಕಾಣಲಿಲ್ಲ.
ಈಸ್ಟ್ ಬೆಂಗಾಲ್ ಪರ ಜಪಾನ್ ಮೂಲದ ಸಂಪರ್ಕ ಆಟಗಾರ ರಯ್ಯುಜಿ ಸುಯೊಕಾ 66ನೇ ಮತ್ತು 68ನೇ ನಿಮಿಷಗಳಲ್ಲಿ ಕ್ರಮವಾಗಿ ಎರಡೂ ಗೋಲುಗಳನ್ನು ಬಾರಿಸಿದರು. ಮುಂಬೈ ತಂಡಕ್ಕೆ ಘಾನಾ ದಾಳಿಕಾರ ಯೂಸಿಫ್ ಯಾಕುಬು 61ನೇ ನಿಮಿಷ ಮತ್ತು ಭಾರತದವರಾದ ಸಂಪರ್ಕ ಆಟಗಾರ ಅಶುತೋಷ್ ಮೆಹತಾ 87ನೇ ನಿಮಿಷದಲ್ಲಿ ಗೋಲು ಗಳಿಸಿಕೊಟ್ಟು ಪಂದ್ಯ ಡ್ರಾಗೊಳ್ಳಲು ಕಾರಣರಾದರು.
ಈ ಡ್ರಾ ನಂತರ ಈಸ್ಟ್ ಬೆಂಗಾಲ್ ತಂಡ 18 ಪಂದ್ಯಗಳಿಂದ ಅಂಕ ಸಂಪಾದನೆಯನ್ನು 28ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಒಟ್ಟು 13 ತಂಡಗಳ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ಮುಂಬೈ ಆಟಗಾರರು 20 ಪಂದ್ಯಗಳನ್ನಾಡಿ 21 ಅಂಕಗಳ ಗಳಿಕೆಯೊಂದಿಗೆ 11ನೇ ಸ್ಥಾನದಲ್ಲಿದ್ದಾರೆ.
ಮೊದಲ ಅವಧಿಯ ಆಟದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. ಹಾಗಾಗಿ, ಉಭಯರಿಗೆ ಗೋಲಿನ ಖಾತೆ ತೆರೆಯಲಾಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.