ಲಂಕೆಗೆ ಬ್ರೇಕ್ ಹಾಕುವರೇ ಆಂಗ್ಲರು?
ಚಿತ್ತಗಾಂಗ್: ಸತತ ಎರಡು ಗೆಲವಿನಿಂದ ಜಯದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಶ್ರೀಲಂಕಾ ತಂಡಕ್ಕೆ ಗೆಲವಿನ ಅಗತ್ಯದಲ್ಲಿರುವ ಇಂಗ್ಲೆಂಡ್ ತಂಡ ಬ್ರೇಕ್ ಹಾಕುವುದೇ ಎಂಬ ಪ್ರಶ್ನೆ ಮೂಡಿದ್ದು, ಟಿ20 ವಿಶ್ವಕಪ್ನ ಸೂಪರ್ 10ರ ಮೊದಲ ಗುಂಪಿನ ಪಂದ್ಯ ಗಮನ ಸೆಳೆದಿದೆ.
ಗುರುವಾರ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಜಯ ಯಾರ ಪಾಲಾಗಲಿದೆ ಎಂಬುದನ್ನು ಕಾದುನೋಡಬೇಕು.
ಶ್ರೀಲಂಕಾ ತಂಡ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಅತ್ಯುತ್ತಮ ಗೆಲವು ದಾಖಲಿಸುವ ಮೂಲಕ ಆತ್ಮ ವಿಶ್ವಾಸದಲ್ಲಿ ತೇಲುತ್ತಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ರನ್ಗಳ ರೋಚಕ ಗೆಲವು ದಾಖಲಿಸಿದರೆ, ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 9 ವಿಕೆಟ್ಗಳ ದಾಖಲೆ ಗೆಲವು ದಾಖಲಿಸಿ ಉತ್ತಮ ರನ್ರೇಟ್ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇನ್ನು ಇಂಗ್ಲೆಂಡ್ ತಂಡದ ಪರಿಸ್ಥಿತಿ ಇದಕ್ಕೆ ಭಿನ್ನವಾಗಿದೆ. ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡಿತ್ತಾದರೂ, ಮಳೆಯಿಂದ ರದ್ದಾದ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದಿಂದ ಸೋಲನುಭವಿಸಬೇಕಾಯಿತು. ಅಲ್ಲದೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ಒತ್ತಡಕ್ಕೆ ಸಿಲುಕಿದೆ ಎಂದರೆ ತಪ್ಪಿಲ್ಲ.
ಉಭಯ ತಂಡಗಳನ್ನು ಗಮನಿಸಿದರೆ, ಎರಡೂ ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಉತ್ತಮ ಆಟಗಾರರನ್ನು ಹೊಂದಿದ್ದು, ಬಲಿಷ್ಠ ತಂಡಗಳಾಗಿ ಕಾಣುತ್ತಿವೆ. ಹಾಗಾಗಿ ಈ ಪಂದ್ಯ ರೋಚಕವಾಗಿರುವ ನಿರೀಕ್ಷೆ ಇದೆ.
ಸಂಗಕ್ಕಾರ, ದಿಲ್ಷಾನ್, ಕುಶಾಲ ಪೆರೇರಾ, ತಿಸಾರ ಪೆರೇರಾ ಲಂಕಾದ ಬ್ಯಾಟಿಂಗ್ ಬಲವಾದರೆ, ಮಾಲಿಂಗ, ಕುಲಶೇಖರ, ಮೆಂಡಿಸ್, ಬೌಲಿಂಗ್ ಅಸ್ತ್ರಗಳಾಗಿದ್ದಾರೆ.ಇನ್ನು ಇಂಗ್ಲೆಂಡ್ಗೆ ಮೈಕಲ್ ಲಂಬ್, ಅಲೆಕ್ಸ್ ಹೇಲ್ಸ್, ಐಯಾನ್ ಮಾರ್ಗನ್, ಮೊಯೀನ್ ಅಲಿ, ಬಟ್ಲರ್, ರವಿ ಬೊಪಾರ ಪ್ರಮುಖ ಬ್ಯಾಟ್ಸ್ಮನ್ಗಳಾದರೆ, ಸ್ಟುವರ್ಟ್ ಬ್ರಾಡ್, ಬ್ರೆಸ್ನನ್, ಡರ್ನ್ಬ್ಯಾಚ್ ಹಾಗೂ ಜೋರ್ಡನ್ ಉತ್ತಮ ಬೌಲರ್ಗಳಾಗಿದ್ದಾರೆ.
ಸೆಮೀಸ್ ಹಾದಿಯನ್ನು ಗಟ್ಟಿ ಮಾಡಿಕೊಳ್ಳುವ ಸಲುವಾಗಿ ಈ ಪಂದ್ಯ ಶ್ರೀಲಂಕಾ ತಂಡಕ್ಕೆ ಪ್ರಮುಖವಾದರೆ, ಇನ್ನು ಇಂಗ್ಲೆಂಡ್ ತಂಡ ಗೆಲವಿನ ಹಾದಿಗೆ ಬರಲು ಇದು ಮಹತ್ವದ ಪಂದ್ಯವಾಗಿದೆ. ಈ ಪಂದ್ಯದಲ್ಲಿನ ಗೆಲವು ಆಂಗ್ಲರ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಲಿದ್ದು, ಹಾಗಾಗಿ ಆಂಗ್ಲರು ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

